ಬೆಂಗಳೂರು :ಕಳೆದ ತಿಂಗಳು ನಟ ಸಂಚಾರಿ ವಿಜಯ್​​ರನ್ನು ಬಲಿ ತೆಗೆದುಕೊಂಡ ಅಪಘಾತದ ಬಗ್ಗೆ ಬೈಕ್​ ಓಡಿಸುತ್ತಿದ್ದ ವಿಜಯ್​ ಸ್ನೇಹಿತ ನವೀನ್​ ಅವರು ಇಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಜಯನಗರ ಪೊಲೀಸ್​ ಠಾಣೆಗೆ ಆಗಮಿಸಿ ಹೇಳಿಕೆ ನೀಡಿದ ನವೀನ್, ಅಂದಿನ ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿ ಕೊಟ್ಟಿದ್ದಾರೆ.
ದುರ್ಘಟನೆ ನಡೆದ ಜೂನ್ 12 ರ ರಾತ್ರಿ, ಸಂಚಾರಿ ವಿಜಯ್ ಮತ್ತು ತಂಡ, ಸ್ನೇಹಿತರ ಮನೆಯಲ್ಲಿ ಸಭೆ ಸೇರಿದ್ರಂತೆ. ಕರೊನಾ ಕಿಟ್ ಮತ್ತು ಇತರ ಸಹಾಯ ಕುರಿತು ವಿಜಯ್ ಮತ್ತು ಸ್ನೇಹಿತರಿಂದ ಚರ್ಚೆ ನಡೆದಿತ್ತು. ಫುಡ್ ಕಿಟ್, ಮೆಡಿಸಿನ್ ಸೇರಿ ಕೈಲಾದ ಸಹಾಯ ಮಾಡಲು ನಿರ್ಧಾರ ಮಾಡಿದ್ದೆವು ಎಂದು ನವೀನ್​ ಹೇಳಿದ್ದಾರೆ.
ಇದನ್ನೂ ಓದಿ:ಸಿಡಿ ಲೇಡಿ ಹುಡುಕಿ ಹೊರಟ್ರು ಜಾರಕಿಹೊಳಿ- ಊರಿಗೆ ಬಂದ್ರೂ ಮನೆಗೆ ಬಂದಿಲ್ಲ: ಎಲ್ಲವೂ ನಿಗೂಢ!
ಹೀಗೆ ಚರ್ಚೆ ನಡೆಯುತ್ತಿದ್ದಾಗ ನವೀನ್‌ಗೆ ಮನೆಯಿಂದ ಪತ್ನಿಯ ಫೋನ್‌ ಕಾಲ್ ಬಂದಿತು. ಪತ್ನಿಗೆ ಮಾತ್ರೆ ತರಲು ಹೊರಟು ನಿಂತ ನವೀನ್, ಬೈಕಲ್ಲಿ ಹತ್ತಿರದ ಮೆಡಿಕಲ್ ಸ್ಟೋರ್​​ಗೆ ಹೊರಟರು. ಈ ವೇಳೆ ತಾನೂ ಬರುವುದಾಗಿ ಹೇಳಿ ನಟ ವಿಜಯ್ ಬೈಕ್ ಏರಿದರು. ಇದೆಲ್ಲವೂ ಮನೆ ಹತ್ತಿರವೇ ಆದ್ದರಿಂದ ನವೀನ್ ಮತ್ತು ವಿಜಯ್ ಹೆಲ್ಮೆಟ್ ಧರಿಸದೆ ಹೊರಟಿದ್ದರು ಎಂದಿದ್ದಾರೆ.
ಆದರೆ, ಮಾತ್ರೆಗಳನ್ನ ತಗೊಂಡು ವಾಪಸ್ ಬರಬೇಕಾದ್ರೆ ಬೈಕ್ ಅಪಘಾತ ಸಂಭವಿಸಿತು. ಸ್ಕೀಡ್ ಆಗಿ ಎಲೆಕ್ಟ್ರಿಕ್ ಪೋಲ್​​ಗೆ ಬೈಕ್ ಡಿಕ್ಕಿ ಹೊಡೆಯಿತು. ಸ್ಕೀಡ್ ಆಗಿದ್ದರಿಂದ ಬೈಕ್ ಬಿತ್ತು ಎಂದು ನವೀನ್ ಹೇಳಿಕೆ ನೀಡಿದ್ದಾರೆ. ಹೇಳಿಕೆ ಪಡೆದ ಜಯನಗರ‌ ಟ್ರಾಫಿಕ್ ಪೊಲೀಸರು, ಠಾಣಾ ಜಾಮೀನಿನ ಮೇಲೆ ನವೀನ್​ ಅವರನ್ನು ಬಿಡುಗಡೆ ಮಾಡಿದ್ದಾರೆ.
ಕೋವಿಶೀಲ್ಡ್​ ಲಸಿಕೆ ಪಡೆದವರಿಗೆ ಗುಡ್​ ನ್ಯೂಸ್​: ಯೂರೋಪಿನ 9 ದೇಶಗಳಲ್ಲಿ ಗ್ರೀನ್​ ಪಾಸ್​

ಆಗಸ್ಟ್​ 22 ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆ(KARTET); ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
