ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಪೋಷಕ ನಟ, ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ನಟ ರಾಕ್​ಲೈನ್ ಸುಧಾಕರ್ ಗುರುವಾರ ಇಹಲೋಕ ತ್ಯಜಿಸಿದ್ದಾರೆ.
ಶಶಿಧರ್​ ನಿರ್ದೇಶಿಸುತ್ತಿರುವ ‘ಶುಗರ್​ ಲೆಸ್​’ ಸಿನಿಮಾ ಶೂಟಿಂಗ್ ವೇಳೆ ಹೃದಯಾಘಾತವಾಗಿ ರಾಕ್​ಲೈನ್ ಸುಧಾಕರ್​ ಅಕಾಲಿಕ ನಿಧನಕ್ಕೀಡಾದರು. ಇದಕ್ಕೂ ಮುನ್ನ ಬೆಳಗ್ಗೆ ಶೂಟಿಂಗ್ ಸೆಟ್​ನಲ್ಲೇ ಸುಧಾಕರ್​ ತಿಂಡಿ ಸೇವಿಸಿದ್ದರು. ಈ ವೇಳೆ ಕ್ಲಿಕ್ಕಿಸಿದ ಫೋಟೋವೇ ಅವರು ಬದುಕಿದ್ದಾಗ ತೆಗೆದ ಕೊನೇ ಫೋಟೋ ಎನ್ನಲಾಗಿದೆ.ಇದನ್ನೂ ಓದಿರಿಪೋಷಕ ನಟ ರಾಕ್​ಲೈನ್​ ಸುಧಾಕರ್​ ನಿಧನ
ಪಂಚರಂಗಿ, ಟಗರು ಸೇರಿ ಅನೇಕ ಹಿಟ್ ಸಿನಿಮಾಗಳಲ್ಲಿ ರಾಕ್​ಲೈನ್​ ಸುಧಾಕರ್​ ನಟಿಸಿದ್ದರು. ಅಜಿತ್, ಉಡುಂಬಾ, ಟೋಪಿವಾಲಾ, ಜೂಮ್, ಚಮಕ್, ಪಟಾಕಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ತನ್ನ ವಾಯ್ಸ್​ನಿಂದಲೇ ಮನೆ ಮಾತಾಗಿದ್ದರು.
ಕೆಲ ದಿನಗಳ ಹಿಂದಷ್ಟೇ ಕರೊನಾ ಸೋಂಕು ತಗುಲಿ, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದೀಗ ಸಿನಿಮಾ ಚಿತ್ರೀಕರಣ ವೇಳೆಯೇ ವಿಧಿವಶರಾಗಿದ್ದು, ಚಿತ್ರರಂಗ ಕಂಬನಿ ಮಿಡಿದಿದೆ.
ಅಪಘಾತದಲ್ಲಿ ಪಾರಾದರೂ ಬೆನ್ನಟ್ಟಿದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!

ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 6 =
Remember me
