ಬೆಂಗಳೂರು:ಬಹಳ ದಿನಗಳ ನಂತರ ಸ್ಯಾಂಡಲ್​ವುಡ್​ನ ನಟಿ ಮೇಘನಾ ರಾಜ್ ಅಭಿನಯಿಸಿರುವ ಚಿತ್ರ ‘ತತ್ಸಮ ತದ್ಭವ’ದ ಟ್ರೈಲರ್ ಬಿಡುಗಡೆಯಾಗಿದ್ದು, ಇದಕ್ಕೆ ಸಿನಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಟಿ ಮೇಘನಾರನ್ನು ಬೆಳ್ಳಿ ಪರದೆಯ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಅನೇಕರು ಈ ಚಿತ್ರದ ಟ್ರೈಲರ್​​ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ:ಮನೆಯಲ್ಲಿ ಮಲಗಿದ್ದ ಪತಿ ಮೈಮೇಲೆ ಕುದಿಯುವ ನೀರು ಸುರಿದ ಪತ್ನಿ..!
ಈ ಕುರಿತಾಗಿ ನಟಿಯು ಇತ್ತೀಚಿಗೆ ಸಂದರ್ಶನವೊಂದನ್ನು ನೀಡಿದ್ದು, ಈ ವೇಳೆ ನಿರೂಪಕರು ವಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಕೇಳಿದ್ದರು. ನಟ ಧ್ರುವ ಸರ್ಜಾ, ಮೇಘನಾ ರಾಜ್​ರನ್ನು ನೋಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಖಡಕ್​ ಆಗಿ ಪ್ರತಿಕ್ರಿಯೆ ನೀಡಿರುವ ನಟಿಯು, ಯಾರನ್ನೂ ಯಾರೂ ನೋಡಿಕೊಳ್ಳುವ ಅವಶ್ಯತೆ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ನಟಿಯು, ನೋಡಿಕೊಳ್ಳುತ್ತಾರೆ. ಮಾಡ್ತಾರೆ ಎಂದು ಹೇಳುವುದು ತಪ್ಪು. ಧ್ರುವ ನನ್ನನ್ನು ನೋಡಿಕೊಳ್ಳುವುದು ಅಥವಾ ತಾವು ಧ್ರುವನನ್ನು ನೋಡಿಕೊಳ್ಳುವುದಾಗಲಿ ಇದೆಲ್ಲ ಕೇವಲ ಹೊರಗಿನವರು ಹೇಳುವಂತ ಮಾತುಗಳಾಗಿವೆ. ತಾವು ಈಗಾಗಲೇ ದೊಡ್ಡವರಾಗಿ ವೃತ್ತಿಯಲ್ಲಿ ತೊಡಗಿಕೊಂಡಿದ್ದೇವೆ.ಹಾಗಾಗಿ ನೋಡಿಕೊಳ್ಳುವುದು ಎನ್ನುವ ಪದ ಬಳಕೆ ಮಾಡಬಾರದು ಎಂದಿದ್ದಾರೆ.
ಇದನ್ನೂ ಓದಿ:ಪ್ರೀತಿಗೆ ಅಡ್ಡಿ, ಪ್ರಿಯಕರನ ನೆರವಿನಿಂದ 4 ವರ್ಷದ ಮಗನ ಪ್ರಾಣ ತೆಗೆದ ತಾಯಿ..
ಜತೆಗೆ ಧ್ರುವ ನನಗೆ ಸಹೋದರನಿದ್ದಂತೆ. ಕೆಲವೊಮ್ಮೆ ಏನಾದರೂ ವಿಷಯಗಳನ್ನು ಹಂಚಿಕೊಳ್ಳಬೇಕು ಎನ್ನಿಸಿದಾಗ ಧ್ರುವ ತಮಗೆ ಪೋನ್​ ಮಾಡುತ್ತಾರೆ. ತಾನು ಕೂಡ ಕರೆ ಮಾಡುತ್ತೇನೆ. ತಾವಿಬ್ಬರು ಈ ಮೊದಲಿಗಿಂತಲೂ ಕ್ಲೋಸ್ ಆಗಿದ್ದು, ಅದಕ್ಕೆ ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಗಳೇ ಕಾರಣವಾಗಿದೆ. ತಮ್ಮ ಜೀವನದ ಬಿಗ್ ಸಪೋರ್ಟರ್ ಆಗಿ ಧ್ರುವ ಇದ್ದಾರೆ ಎಂದು ನಟಿ ಮೇಘನಾ ಹೇಳಿದ್ದಾರೆ.ನಾವೆಲ್ಲ ದೊಡ್ಡವರು, ನಾವು ಧ್ರುವನನ್ನಾಗಲಿ, ಆತ ತಮ್ಮನ್ನಾಗಲೀ ನೋಡಿಕೊಳ್ಳುವ ಅವಶ್ಯಕತೆಯಿಲ್ಲ. ಇಬ್ಬರು ವೃತ್ತಿಪರರಾಗಿದ್ದು, ಮೊದಲೆಲ್ಲ ಹೇಗಿದ್ದೇವೋ ಈಗಲೂ ಕೂಡ ಹಾಗೇ ಇದ್ದೇವೆ. ತಾವಿಬ್ಬರು ಕಾಲ್ ಮಾಡಿದಾಗ ಮಕ್ಕಳ ಬಗ್ಗೆಯೇ ಹೆಚ್ಚು ಮಾತನಾಡುತ್ತೇವೆ. ಶಿಷ್ಯ ಸ್ಕೂಲ್‌ಗೆ ಹೋಗುತ್ತಿದ್ದಾನಾ ಎಂದು ರಾಯನ್​ ಬಗ್ಗೆ ಧ್ರುವ ಕೇಳಿದರೆ, ತಾವು ಕೂಡ ನಿನ್ನ ಮಗಳು ರಾತ್ರಿ ಸುಮ್ಮನೆ ಮಲಗುತ್ತಾಳಾ ಎಂದು ಕೇಳುತ್ತೇನೆ. ಇದನ್ನು ಹೊರತುಪಡಿಸಿ ಏನಾದರೂ ಕೆಲವು ಹಾಸ್ಯದ ಮಾತುಕತೆ ನಡೆಯುತ್ತದೆ ಎಂದು ನಟಿ ತಿಳಿಸಿದ್ದಾರೆ.
‘ತತ್ಸಮ ತದ್ಭವ’ ಸಿನಿಮಾ ಕುರಿತು:ಚಿತ್ರತಂಡ ಈ ಮುಂಚೆಯೇ ಹೇಳಿಕಕೊಂಡಂತೆ ಈ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾವು ಸೆಪ್ಟೆಂಬರ್ 15 ತೆರೆಗೆ ಬರಲಿದೆ. ಪನ್ನಗಾಭರಣ, ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಈ ಚಿತ್ರ ನಿರ್ಮಾಣ ಮಾಡಿದ್ದು, ಕನ್ನಡದ ಹಿರಿಯ ನಟಿ ಶ್ರುತಿ ಕೂಡ ಮನೋವೈದ್ಯರ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಮಾಗೆ ಜೀವವನ್ನು ತುಂಬಿದ್ದಾರೆ. ಇದೊಂದು ಸಸ್ಪೆನ್ಸ್ ಕೈಂ ಜಾನರ್‌ನ ಸಿನಿಮಾ ಎಂದು ಚಿತ್ರತಂಡವು ಮಾಹಿತಿ ಕೊಟ್ಟಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 8 =
Remember me
