ಬೆಂಗಳೂರು:ಡ್ರಗ್ಸ್ ಪೆಡ್ಲರ್ ರಾಹುಲ್​ ಜತೆ ಸ್ಯಾಡಂಲ್​ವುಡ್​ನ ಬಹುತೇಕ ಸ್ಟಾರ್ಸ್ ಲಿಂಕ್​ ಇರೋದು ಗೊತ್ತಾಗುತ್ತಿದೆ. ನಟ-ನಟಿಯರು ರಾಹುಲ್​ ಜತೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಡ್ರಗ್ಸ್​ ಪೆಡ್ಲರ್​ ಆಯೋಜಿಸಿದ್ದ ಡಿನ್ನರ್​ ಪಾರ್ಟಿಯಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್​, ನಿರ್ಮಾಪಕ ಕೆ.ಮಂಜು ಕೂಡ ಪಾಲ್ಗೊಂಡಿದ್ದರು. ಆ ಫೋಟೋ ಇದೀಗ ವೈರಲ್​ ಆಗಿದ್ದು ರಾಹುಲ್​ಗೂ ಇವರಿಗೂ ಏನು ಸಂಬಂಧ ಎಂಬ ಪ್ರಶ್ನೆ ಎದ್ದಿದೆ.
ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ ನಂಟಿನ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿರುವ ಡ್ರಗ್ಸ್​ ಪೆಡ್ಲರ್​ ರಾಹುಲ್​ ಜತೆ ನಿರ್ಮಾಪಕ ಕೆ. ಮಂಜು ಅವರ ಸಂಪರ್ಕ ಇರುವ ಬಗ್ಗೆ ಪ್ರಸ್ತಾಪವಾಗುತ್ತಿದೆ. ಈ ಬಗ್ಗೆದಿಗ್ವಿಜಯ ನ್ಯೂಸ್​ಜತೆ ಮಾತನಾಡಿದ ನಿರ್ಮಾಪಕ ಮಂಜು, ನನಗೆ ರಾಹುಲ್​ 15 ವರ್ಷಗಳಿಂದ ಗೊತ್ತು ಎಂದಿದ್ದಾರೆ.
ಇದನ್ನೂ ಓದಿರಿ1982ರಲ್ಲೇ ನನ್ನ ಧರ್ಮಪತ್ನಿ ಜತೆ ಮಲೇಶಿಯಾದಲ್ಲಿ ಕ್ಯಾಸಿನೋ ನೋಡಿದ್ದೀನಿ; ಕುಮಾರಸ್ವಾಮಿ
ಪುಟಾಣಿ ಏಜೆಂಟ್ ಸಿನಿಮಾದಿಂದಲೂ ರಾಹುಲ್​ ಗೊತ್ತು. ಚಿತ್ರನಟ ರಾಮಕೃಷ್ಣ ಹೆಗಡೆ ಅವರಿಂದ ರಾಹುಲ್​ನ​ ಪರಿಚಯ ಆಗಿತ್ತು. ಕಳೆದ ವರ್ಷ ದಾರಿಯಲ್ಲಿ ಸಿಕ್ಕಿದ್ದ.ಆದ್ರೆ ಅವನ ವ್ಯವಹಾರ ಗೊತ್ತಿಲ್ಲ​. ಚಿತ್ರರಂಗ ದೇವಸ್ಥಾನ ಇದ್ದಂತೆ. ಸ್ವಂತ ಹಣದಿಂದ ಸಿನಿಮಾ ಮಾಡ್ತೀನಿ ಎಂದ ಕೆ.ಮಂಜು, ನಾನು ತುಂಬಾ ನೀಟ್ ಇದ್ದೀನಿ. ರಾಹುಲ್ ಮಾದಕ ವಸ್ತು ಮಾರುತ್ತಿದ್ದ ಅಂತ ನನಗೇನು ಗೊತ್ತು? ಆತ ಅಪರಾಧಿ ಅಂತ ಸಾಬೀತಾಗಿದೆಯಾ? ಎಂದು ಪ್ರಶ್ನಿಸಿದರು.
ನನ್ನ ಚಿತ್ರರಂಗ ಮತ್ತು ನಿರ್ಮಾಪಕರು ಕ್ಲೀನ್ ಆಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ಕಾನೂನು, ಕೋರ್ಟ್ ಇದೆ. ರಾಹುಲ್​ ನಟಿ ಸಂಜನಾರ ರಾಖಿ ಬ್ರದರ್​. ಆತನ ಬರ್ತ್​ ಡೇ ಪಾರ್ಟಿಯಲ್ಲಿ ಅನ್ಸುತ್ತೆ ನಾವು ಡಿನ್ನರ್​ಗೆ ಹೋಗಿದ್ದು. ಆಗ ರಾಹುಲ್​ಗೆ ತುತ್ತು ತಿನ್ನಿಸಿದೆ. ರಾಹುಲ್ ಒಳ್ಳೆಯ ಸ್ನೇಹಿತ. ಆದ್ರೆ ಆತನ ವ್ಯವಹಾರ ನನಗೆ ಗೊತ್ತಿಲ್ಲ ಎಂದ ಕೆ. ಮಂಜು, ನೀರವ್ ಮೋದಿ ಮತ್ತು ನರೇಂದ್ರ ಮೋದಿ ಅವರ ಜೊತೆ ಫೋಟೋ ಇದೆ. ಹಾಗಂತ ನರೇಂದ್ರ ಮೋದಿ ಅವರ ತಪ್ಪಾ? ಎಂದು ಮರು ಪ್ರಶ್ನಿಸಿದರು.
ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

ಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​

ಒಂದೇ ಕಡೆ ಇದ್ದರೂ ನನ್ನ ಹೆಂಡ್ತಿ-ಮಗನ ಮುಖ ನೋಡೋಕೆ ಆಗ್ಲಿಲ್ಲ… ಎಂದು ನೊಂದುಕೊಂಡ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − two =
Remember me
