ಬೆಂಗಳೂರು:ಚಂದನವನಕ್ಕೆ ಮಾದಕ ಜಾಲದ ನಂಟು ಆರೋಪದಲ್ಲಿ ಬಂಧಿಯಾಗಿರುವ ಪ್ರಮುಖ ಆರೋಪಿ ವೀರೇನ್​ ಖನ್ನಾಗೆ ಸಹಕರಿಸಿದ ಆರೋಪದಲ್ಲಿ ಎಸಿಪಿ ಮುದವಿ ಅವರನ್ನು ಅಮಾನತುಗೊಳಸಲು ಸಿಸಿಬಿ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ.
ಎಸಿಪಿ ಮಾತ್ರವಲ್ಲದೆ ಪೇದೆ ಮಲ್ಲಿಕಾರ್ಜುನ್​ ಸಹ ಕಂಟಕ ಎದುರಾಗಿದೆ. ವೀರೇನ್​ ಖನ್ನಾ ಬಳಿ ಎಸಿಪಿ ಮುದವಿ 50 ಲಕ್ಷಕ್ಕೆ ಡೀಲ್ ಕುದುರಿಸಿದ್ದರು ಎನ್ನಲಾಗಿದೆ. ಕಾನ್​ಸ್ಟೇಬಲ್​ ಮಲ್ಲಿಕಾರ್ಜುನ್ ಮೂಲಕ ರಾತ್ರಿ 10.30ರ ನಂತರ ಖನ್ನಾಗೆ ಮೊಬೈಲ್ ನೀಡಿ ಜಾಮೀನು ನೀಡಲು ಸಹಕರಿಸುವುದಾಗಿ ಹೇಳಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಬಾಲಿವುಡ್​ನಲ್ಲಿ ಬಾಲಾಕೋಟ್​ ಏರ್​ಸ್ಟ್ರೈಕ್​ ಸಿನಿಮಾ; ಅಭಿನಂದನ್​ ಪಾತ್ರಕ್ಕೆ ದಕ್ಷಿಣದ ಖ್ಯಾತ ನಟ!
ಹೀಗಾಗಿ ಖನ್ನಾಗೆ ಸಹಕರಿಸಿದ ಆರೋಪದ ಮೇಲೆ ಎಸಿಪಿ ಮತ್ತು ಕಾನ್ಸ್​ಟೇಬಲ್​ ಅಮಾನತಿಗೆ ಗೃಹ ಸಚಿವರ ಬಳಿ ಸಿಸಿಬಿ ಶಿಫಾರಸು ಮಾಡಿದೆ. ಅಂದಹಾಗೆ ಮುದವಿ ಅವರು ಸಿಸಿಬಿಯ ಮಹಿಳಾ ಸಂರಕ್ಷಣಾ ಘಟಕದ ಎಸಿಪಿಯಾಗಿದ್ದಾರೆ.
ವೀರೇನ್​ ಖನ್ನಾ ಬೆಂಗಳೂರಿನ ಬಹುತೇಕ ಪೇಜ್-3 ಪಾರ್ಟಿಗಳ ಆಯೋಜಕ. ದೆಹಲಿ ಮೂಲದ ಖನ್ನಾ ವ್ಯಾಸಂಗಕ್ಕೆಂದು ಬೆಂಗಳೂರಿಗೆ ಬಂದು ಪ್ರತಿಷ್ಠಿತ ಆರ್‌ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. ವಿದ್ಯಾಭ್ಯಾಸ ಮುಗಿದ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ. ಇದರ ನಡುವೆ ಇವೆಂಟ್ ಮ್ಯಾನೇಜ್‌ಮೆಂಟ್‌ ಶುರು ಮಾಡಿದ್ದ. ಬಹುತೇಕ ಸ್ಟಾರ್ ಹೋಟೆಲ್‌ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದ. ಈ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡ್ತಿದ್ದ ಎಂದ ಆರೋಪ ಕೇಳಿಬಂದಿದೆ.(ದಿಗ್ವಿಜಯ ನ್ಯೂಸ್​)
ಸಿಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ದೆಹಲಿಯಲ್ಲಿ ಡ್ರಗ್ಸ್​ ಪ್ರಕರಣದ ಪ್ರಮುಖ ಆರೋಪಿ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
