ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಮಾಫಿಯಾ ನಂಟಿನ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಮತ್ತೊಂದು ಸ್ಫೋಟಕ ಬಾಂಬ್​ ಸಿಡಿಸಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ಎಂಎಲ್ಎ ಮಗ, ಡಾರ್ಕ್​ವೆಬ್​ ಬಳಕೆ ಮತ್ತು ಮತ್ತಿಬ್ಬರು ನಟರ ವಿಚಾರಣೆ ಸಣ್ಣ ಎಳೆಯಷ್ಟೆ ಎಂದಿರುವ ಸಂಬರಗಿ, ಮುಂದಿನ ದಿನಗಳಲ್ಲಿ ಇಬ್ಬರು ದೊಡ್ಡ ನಟರ ಸಮೇತ ಇನ್ನಷ್ಟು ಜನರ ವಿವರ ಬಹಿರಂಗ ಪಡಿಸುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಿಂಟ್ ಬಿಟ್ಟುಕೊಟ್ಟಿದ್ದಾರೆ ಸಂಬರಗಿ. ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಸಂಬರಗಿ, ‘ನಾಳೆ-ನಾಡಿದ್ದು ಸ್ಟಾರ್ ನಟರ ಬಂಡವಾಳ ಹೊರ ಬರುತ್ತೆ. ನಾಳೆ(ಶುಕ್ರವಾರ) ಇಷ್ಟೊತ್ತಿಗೆ ಅವ್ರ ಬಳಿ ಪೊಲೀಸರು ಇರ್ತಾರೆ. ದಾಖಲೆಗಳ ಸಮೇತ ನಾನೇ ನಾಳೆ ಕಂಪ್ಲೀಟ್ ಡೀಟೇಲ್ಸ್ ಹೇಳ್ತೀನಿ’ ಎಂದು ಹೇಳಿದ್ದಾರೆ.
ಡ್ರಗ್ಸ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರು ಭಾಗಿಯಾಗಿದ್ದಾರೆ ಎಂದು ಆರಂಭದಿಂದಲೂ ಆರೋಪಿಸುತ್ತಿರುವ ಸಂಬರಗಿ, ಡ್ರಗ್ಸ್ ಪೆಡ್ಲರ್​ಗಳ ಜೊತೆ ಸಂಜನಾ ಗಲ್ರಾನಿ ಅಲಿಯಾಸ್​ ಮಹಿರಾ ಸಂಪರ್ಕ ಇದ್ದ ಬಗ್ಗೆ ಸಾಕಷ್ಟು ಫೋಟೋಗಳನ್ನು ಬಹಿರಂಗ ಪಡಿಸಿದ್ದರು. ಅಲ್ಲದೆ ಶಾಸಕ ಜಮೀರ್ ಅಹ್ಮದ್​ರ ಆಪ್ತ ಶೇಖ್​ ಫಾಝಿಲ್​ನ ಕ್ಯಾಸಿನೋ ಪಾರ್ಟಿ ಬಗ್ಗೆಯೂ ಪ್ರಸ್ತಾಪಿಸಿದ್ದರು. ಹಾಗಾಗ್ಗೆ ಹೊಸ ಹೊಸ ಬಾಂಬ್​ ಸಿಡಿಸುತ್ತಿರುವ ಸಂಬರಗಿ, ಇದೀಗ ಡಾರ್ಕ್ ವೆಬ್ ದಂಧೆಯಲ್ಲಿ ಸ್ಟಾರ್ ನಟರಿಬ್ಬರ ಬಣ್ಣ ಬಯಲು ಮಾಡುವುದಾಗಿ ಹೇಳಿದ್ದಾರೆ. ಆ ಮೂಲಕ ‘ಎ’ ಗ್ರೇಡ್ ಸ್ಟಾರ್ಸ್​ ಬೇಟೆಗೆ ಸಿಸಿಬಿ ಸಜ್ಜಾಗಿದೆ ಎಂದು ಎಚ್ಚರಿಸಿದ್ದಾರೆ.
ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’

‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
