ಬೆಂಗಳೂರು:ಚಿತ್ರನಟಿ ರಾಗಿಣಿ ಅಂತ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ತಗೊಂಡ್ವಿ. ಡ್ರಗ್ಸ್ ಹುಡುಗಿ ಅಂತಲ್ಲ. ಹೀಗೆಂದವರು; ಜಲ ಸಂಪನ್ಮೂಲ ಸಚಿವ‌ ರಮೇಶ್‌ ಜಾರಕಿಹೊಳಿ. ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವರೊಂದಿಗೆ ಡ್ರಗ್ಸ್ ಪೆಡ್ಲರ್​ಗಳು ಫೋಟೋ ತೆಗೆಯಿಸಿಕೊಂಡಿದ್ದಾರೆ ಎಂದಾಕ್ಷಣ ಪ್ರಭಾವ ಬೀರುತ್ತಾರೆ ಎನ್ನುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಜತೆಗೆ ಫೋಟೋ ತೆಗೆಯಿಸಿಕೊಂಡಿರುವುದು ಬಂದಿದೆ. ನನ್ನ ಜತೆಗಿರುವ ಫೋಟೋ ಬರಬಹುದು. ಹಾಗೆಂದ ಮಾತ್ರ ಸ್ನೇಹ, ನಂಟು ಕಲ್ಪಿಸಲಾಗದು. ಪ್ರಕರಣ ತನಿಖೆ ಹಂತದಲ್ಲಿರುವಾಗ ಏನನ್ನದಾರೂ ಹೇಳುವುದು ಸಮುಚಿತವಲ್ಲ ಎಂದರು.
ಇದನ್ನೂ ಓದಿ:ಸ್ಯಾಂಡಲ್​ವುಡ್​ ಡ್ರಗ್ಸ್ ಕೇಸ್​ಗೆ ‘ಇಡಿ’ ಎಂಟ್ರಿ, ‘ಮಾದಕ’ ನಟಿಯರಿಗೆ ಢವಢವ!
ಸಚಿವಾಕಾಂಕ್ಷಿಗಳು ಕಾಯಬೇಕುಸಚಿವರಾಗುವುದಕ್ಕೆ ಆಕಾಂಕ್ಷಿಗಳು ಕಾಯಬೇಕು. ನಾವು 14 ತಿಂಗಳು ಕಾದಿದ್ದೇವೆ. ಅದರಲ್ಲಿ 8 ತಿಂಗಳು ಕೋರ್ಟ್​ಗೆ ಅಲೆದಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಮ್ಮ ಸ್ನೇಹಿತರಿಗೆ ತಾಳ್ಮೆ ಮಂತ್ರ ಬೋಧಿಸಿದರು.
ಅಧಿವೇಶನದ ಮುನ್ನವೇ ಆಪ್ತರು ಸಚಿವರಾಗುತ್ತಾರೆ ಎಂದು ನಾನು ಭವಿಷ್ಯ ನುಡಿಯಲಾರೆ. ಹೈಕಮಾಂಡ್, ಸಿಎಂ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವರು. ವಿಳಂಬವಾಗಿದೆ ಎಂದೇನಲ್ಲ, ತಾಂತ್ರಿಕ ಇನ್ನಿತರ ಕಾರಣಗಳಿರುತ್ತವೆ. ನಾನೂ ಒತ್ತಡವೂ ಹೇರುವುದಿಲ್ಲ.
ಈ ಮೂವರು ಐಪಿಎಸ್​ ಅಧಿಕಾರಿಗಳು ಒಡಹುಟ್ಟಿದವರಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಹಿರಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
