ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟಿನ ಪ್ರಕರಣದಲ್ಲಿ ‘ನೂರು ಜನ್ಮಕು’ ಸಿನಿಮಾ ನಟ ಸಂತೋಷ್​ ಕುಮಾರ್​ ಸಿಸಿಬಿ ವಿಚಾರಣೆಗೆ ಶನಿವಾರ ಬೆಳಗ್ಗೆ ಹಾಜರಾಗಿದ್ದಾರೆ. ಕಚೇರಿ ಒಳ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್​, ಡ್ರಗ್ಸ್​ ಮಾಫಿಯಾ ಕೇಸ್​ನಲ್ಲಿ ಬಂಧನಕ್ಕೊಳಪಟ್ಟಿರುವ ವೈಭವ್ ಜೈನ್, ರಾಹುಲ್​ ಮತ್ತು ಸಂಜನಾ ಗಲ್ರಾನಿ ಮೂವರೂ ತನಗೆ ಗೊತ್ತು ಎಂದಿದ್ದಾರೆ.
‘5 ವರ್ಷಗಳ ಹಿಂದೆ ವೈಭವ್ ಜೈನ್ ಪರಿಚಯ ಆಗಿದ್ದ. ನನ್ನ ವಿಲ್ಲಾ ಮಾರ್ಕೇಟ್ ಮಾಡಲು ಕೊಟ್ಟಿದ್ದೆ. ಈ ವಿಲ್ಲಾದಲ್ಲಿ ಪಾರ್ಟಿ ನಡೆಯುತ್ತಿತ್ತು. ಆದರೆ ಡ್ರಗ್ಸ್​ ಪಾರ್ಟಿ ಆಗ್ತಿರಲಿಲ್ಲ. ಲೇಟ್ ನೈಟ್ ಪಾರ್ಟಿಗಳಿಗೆ ಅವಕಾಶ ಕೊಟ್ಟಿರಲಿಲ್ಲ. ತಿರುಪತಿಗೆ ನನ್ನ ಜೊತೆ ವೈಭವ್ ಜೈನ್ ಕೂಡ ಬರುತ್ತಿದ್ದ. ಆದರೆ, ನನ್ನ ಮತ್ತು ಆತನ ನಡುವೆ ಒಮ್ಮೆ ಗಲಾಟೆ ಆಗಿತ್ತು. ಜನವರಿ 14ರ ನಂತರ ಆತನೊಂದಿಗೆ ಸಂಪರ್ಕ ಬಿಟ್ಟಿದ್ದೀನಿ. ಆತ ಡ್ರಗ್ಸ್​ ಪೆಡ್ಲರ್ ಅಥವಾ ಮತ್ತಿನ್ನೇನೋ ಎಂಬುದು ನನಗೆ ತಿಳಿದಿಲ್ಲ. ಇದು ಮೊದಲೇ ಗೊತ್ತಾಗಿದ್ದರೆ ನಾನೇ ಆತನ ಕಪಾಳಕ್ಕೆ ಬಾರಿಸುತ್ತಿದೆ’ ಎಂದು ಕೋಪದಲ್ಲೇ ಸಂತೋಷ್​ ಕುಮಾರ್​ ಹೇಳಿದರು.ಇದನ್ನೂ ಓದಿರಿ‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’
ವೈಭವ್​ ಜೈನ್​ಗೂ ನನಗೂ ಜಗಳ ಆಗಲು ಕಾರಣ ಆತ ವಿಲ್ಲಾಗೆ ಹೆಚ್ಚು ಜನರನ್ನು ಕರೆದುಕೊಂಡು ಬಂದು ಪಾರ್ಟಿ ಮಾಡುತ್ತಿದ್ದ. ಈ ಕಾರಣಕ್ಕೆ ಜಗಳ ಆಗಿತ್ತು. ಈತ ಡ್ರಗ್ಸ್​ ದಂಧೆ ಮಾಡುತ್ತಿದ್ದನೇ ಎಂಬುದೂ ಗೊತ್ತಿರಲಿಲ್ಲ. ಕೆಲವು ಸಮಸ್ಯೆ ನಂತರ ನಾನು ವಿಲ್ಲಾವನ್ನು ಕ್ಲೋಸ್ ಮಾಡಿದೆ. ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣವಾಗಬೇಕು. ನನ್ನ ಬಳಿ ಇರುವ ದಾಖಲೆಗಳೊಂದಿಗೆ ತನಿಖೆ ಎದುರಿಸಲಿದ್ದೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ ಎಂದು ಸಂತೋಷ್​ ಕುಮಾರ್​ ಹೇಳಿದರು.
ಇನ್ನು ನಟಿ ಸಂಜನಾ ಗಲ್ರಾನಿ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್​, ‘ಆಕೆಯ ಬರ್ತ್ ಡೇ ಪಾರ್ಟಿಯಲ್ಲಿ ರಾಹುಲ್ ಪರಿಚಯವಾಗಿದ್ದು ನಿಜ. ಆತ ಸಹಜವಾಗಿಯೇ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಅದೇ ಫೋಟೋ ಸದ್ಯ ವೈರಲ್ ಆಗಿದೆ’ ಎಂದು ಸ್ಪಷ್ಟಪಡಿಸಿದರು.
‘ನಾವೆಲ್ಲ ಕನ್ನಡ ಕಲಾವಿದರು, ದಯವಿಟ್ಟು ಹಿಂಬಾಲಿಸುವುದು ಬೇಡ. ನಿಮ್ಮಂತೆಯೇ ನಮ್ಮ ಅಕ್ಕಪಕ್ಕದವರು ನಮ್ಮನ್ನ ನೋಡುವುದಿಲ್ಲ’ ಎಂದ ಸಂತೋಷ್​, ಮಾದ್ಯಮ ಮಿತ್ರರಲ್ಲಿ ಮನವಿ ಮಾಡಿದರು.
ಸಿಸಿಬಿ ಕಚೇರಿಗೆ ಬಂದ ಅಕುಲ್, ಕರ್ನಾಟಕದ ಜನತೆಗೆ ನಮಸ್ಕಾರಗಳು… ಎನ್ನುತ್ತ ಸ್ಫೋಟಕ ಮಾಹಿತಿ ಹೊರಹಾಕಿದ್ರು

‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + two =
Remember me
