| ಮಂಜುನಾಥ ಕೋಳಿಗುಡ್ಡ ಬೆಳಗಾವಿಉತ್ತಮ ಆದಾಯದ ನಿರೀಕ್ಷೆಯಲ್ಲಿ ರಾಜ್ಯದಲ್ಲಿ ಶ್ರೀಗಂಧದ ಕೃಷಿ ಪ್ರದೇಶ ವಿಸ್ತರಣೆಯಾಗುತ್ತಿದೆ. ಅಂತೆಯೇ ಬೆಳೆದು ನಿಂತ ಮರಗಳನ್ನು ಕದ್ದೊಯ್ಯುವ ಪ್ರಕರಣಗಳು ಹೆಚ್ಚುತ್ತಿವೆ. ಮಾತ್ರವಲ್ಲ, ರೈತರಲ್ಲಿ ಜೀವಭಯಕ್ಕೂ ಕಾರಣವಾಗಿವೆ. ಹೀಗಾಗಿ ಹಲವು ವರ್ಷಗಳ ಪರಿಶ್ರಮದಿಂದ ಬೆಳೆದಿರುವ ಸಿರಿಸಂಪತ್ತಾದ ಶ್ರೀಗಂಧವನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಬೆಳೆಗಾರರು ಹರಸಾಹಸ ಪಡುತ್ತಿದ್ದಾರೆ. ರಾಜ್ಯಾದ್ಯಂತ ಐದು ವರ್ಷಗಳ ಹಿಂದೆ 5 ಸಾವಿರ ಹೆಕ್ಟೇರ್​ನಷ್ಟಿದ್ದ ಶ್ರೀಗಂಧದ ಮರಗಳು ಪ್ರಸ್ತುತ ಅಂದಾಜು 10 ಸಾವಿರ ಹೆಕ್ಟೇರ್​ನಲ್ಲಿ 35 ರಿಂದ 40 ಲಕ್ಷ ಶ್ರೀಗಂಧದ ಮರಗಳಿಗೆ ವಿಸ್ತಾರವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಶ್ರೀಗಂಧ ಮರ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಆದರೆ, ಯಾರೊಬ್ಬರ ಬಂಧನವೂ ಆಗಿಲ್ಲ. ಕಳ್ಳತನವಾದ ಶ್ರೀಗಂಧ ಮರಗಳು ಪತ್ತೆಯಾಗಿಲ್ಲ. ಜಮೀನಿನಲ್ಲಿ 400 ರಿಂದ 500 ಮರಗಳ ಪೈಕಿ ವಾರ್ಷಿಕ 15 ರಿಂದ 20 ಮರಗಳು ಕಳ್ಳತನವಾಗುತ್ತಿವೆ.
8 ರಿಂದ 10 ವರ್ಷ ದೊಡ್ಡದಾಗಿ ಬೆಳೆಯುತ್ತಿದ್ದಂತೆ ರಾತೋರಾತ್ರಿ ಕಳ್ಳರು ಮರಗಳನ್ನು ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಮರ ರಕ್ಷಣೆ ಮಾಡುವ ರೈತರಿಗೆ ಜೀವಭಯವೂ ಎದುರಾಗುತ್ತಿದೆ.
ಬೆಳಗಾವಿ, ಖಾನಾಪುರ ತಾಲೂಕಿನ ಗ್ರಾಮಗಳನ್ನು ಸುತ್ತುವರಿದಿರುವ ಕೆಂಪು ಮಣ್ಣಿನ ಭೂಮಿ ಬಿಳಿ ಶ್ರೀಗಂಧದ ಮರಗಳ ಬೆಳವಣಿಗೆಗೆ ಹೆಚ್ಚು ಸೂಕ್ತವಾಗಿದೆ. ಕೃಷಿ ಭೂಮಿಯಲ್ಲಿ ವಾಣಿಜ್ಯ ಶ್ರೀಗಂಧದ ಜತೆಗೆ ನೈಸರ್ಗಿಕವಾಗಿಯೂ ಶ್ರೀಗಂಧ ಬೆಳೆಯಲಾಗುತ್ತದೆ. ಸರ್ಕಾರವು ಶ್ರೀಗಂಧ ಸಸಿ ವಿತರಿಸುತ್ತಿರುವುದರಿಂದ ಈ ಭಾಗದ ಅನೇಕ ರೈತರು ಅರಣ್ಯ ಇಲಾಖೆ ಸಹಾಯದಿಂದ ಜಮೀನಿನಲ್ಲಿ ಶ್ರೀಗಂಧದ ಸಸಿ ನೆಡಲು ಪ್ರಾರಂಭಿಸಿದ್ದಾರೆ. ಆದರೆ, ಶ್ರೀಗಂಧದ ಮರಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಯಾವುದೇ ಪ್ರಯತ್ನ ಮಾಡಿಲ್ಲ ಎನ್ನುವುದು ಅವರ ದೂರು. ಇದು ಬೆಳಗಾವಿ ಉದಾಹರಣೆ ಮಾತ್ರ. ರಾಜ್ಯಾದ್ಯಂತ ಇದೇ ಪರಿಸ್ಥಿತಿ ಇದೆ.
ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಜಮೀನುಗಳಲ್ಲಿ ರೈತರು ಬೆಳೆದಿರುವ ಶ್ರೀಗಂಧ ಮರಗಳ ಕಳ್ಳತನವಾಗುತ್ತಿರುವ ಕುರಿತು ಮಾಹಿತಿ ಪಡೆದುಕೊಳ್ಳಲಾಗುವುದು. ಎಲ್ಲೆಲ್ಲಿ ಶ್ರೀಗಂಧ ಮರ ಬೆಳೆಯಲಾಗಿದೆಯೋ ಅಲ್ಲಿ ರಕ್ಷಣೆಗೆ ಸೂಕ್ತ ಕ್ರಮ ವಹಿಸುವಂತೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
| ನಿತೇಶ ಪಾಟೀಲ, ಬೆಳಗಾವಿ ಜಿಲ್ಲಾಧಿಕಾರಿ
ಗಡಿಭಾಗದಲ್ಲಿ ಶ್ರೀಗಂಧ ಕಳ್ಳರ ದಂಡು ಸಕ್ರಿಯವಾಗಿದ್ದು, ಉತ್ತಮವಾಗಿ ಬೆಳೆದಿರುವ ಶ್ರೀಗಂಧದ ಮರ ಗುರುತಿಸಿ ಕಳ್ಳತನದಲ್ಲಿ ತೊಡಗಿದೆ. ಮರ ಕತ್ತರಿಸುವ ಶಬ್ದ ಕೇಳಿಸದಂತೆ ಅತ್ಯಾಧುನಿಕ ಕಟಾವು ಯಂತ್ರ ಬಳಸುತ್ತಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ ಒಂದೇ ವಾರದಲ್ಲಿ 50ಕ್ಕೂ ಹೆಚ್ಚು ಮರ ಕಟಾವು ಮಾಡಿಕೊಂಡು ಹೋಗಿದ್ದಾರೆ. ಶ್ರೀಗಂಧ ಮರಗಳ ರಕ್ಷಣೆಗಾಗಿ ಮುಧೋಳ ನಾಯಿ ಬಳಕೆ ಮಾಡುತ್ತಿದ್ದೇವೆ. 200 ರಿಂದ 500 ಶ್ರೀಗಂಧ ಮರಗಳ ರಕ್ಷಣೆಗೆ 5ರಿಂದ 8 ನಾಯಿ ಬಳಕೆ ಮಾಡುತ್ತಿದ್ದೇವೆ. ರಕ್ಷಣೆಗಾಗಿ ಮಾಸಿಕ 10 ಸಾವಿರ ರೂ. ವರೆಗೆ ವೆಚ್ಚ ಮಾಡುತ್ತಿದ್ದೇವೆ ಎಂದು ಶ್ರೀಗಂಧ ಬೆಳೆಗಾರರಾದ ಸುರೇಶ ಪಾಟೀಲ ಹಾಗೂ ಎಸ್.ಎಚ್.ಪಾಟೀಲ ತಿಳಿಸುತ್ತಾರೆ.
ದೀಪಾವಳಿಗೆ ಗಂಡ ತವರು ಮನೆಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ಜಗಳ ಆಡುತ್ತ ಪ್ರಾಣ ಕಳ್ಕೊಂಡ್ಲು ಗರ್ಭಿಣಿ ಪತ್ನಿ!

ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − four =
Remember me
