ಗುಂಡ್ಲುಪೇಟೆ:ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಭಾನುವಾರ ರಾತ್ರಿ ‘ಗರಗಸ’ ಸದ್ದು ಮಾಡುತ್ತಿತ್ತು. ಶಬ್ದದ ಜಾಡನ್ನು ಹಿಡಿದು ಕತ್ತಲಲ್ಲೇ ಹೊರಟ ಅರಣ್ಯಾಧಿಕಾರಿಗಳ ಕೈಗೆ ಮೂವರು ಖದೀಮರು ಸಿಕ್ಕಿಬಿದ್ದಿದ್ದಾರೆ.
ಹೆಡಿಯಾಲ ಸಮೀಪದ ಬಳ್ಳೂರುಹುಂಡಿಯಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಅರಣ್ಯ ಸಿಬ್ಬಂದಿ, ಸರಗೂರು ಸಮೀಪದ ಬಾವಿಕೆರೆ ಕಾಲನಿಯ ಸುರೇಶ್,‌ ದಡದಹಳ್ಳಿ ಕಾಲನಿಯ ರಾಮು ಮತ್ತು ನಡಾಡಿಯ ಕುಮಾರ ಎಂಬುವವರನ್ನು ಬಂಧಿಸಿದ್ದಾರೆ. ಮರದ ತುಂಡುಗಳು, ಗರಗಸ, ಮೂರು ಬೈಕ್ ಅನ್ನು ಜಪ್ತಿ ಮಾಡಿದ್ದಾರೆ. ಅಂದ ಹಾಗೇ ಈ ಕಳ್ಳರನ್ನು ಹಿಡಿಯಲು ಮುಖ್ಯವಾಗಿ ಸುಳಿವು ಕೊಟ್ಟದ್ದು ಬೈಕ್​ಗಳು.ಇದನ್ನೂ ಓದಿರಿ4 ತಿಂಗಳ ಭ್ರೂಣ ಹೊಟ್ಟೆಯಲ್ಲಿರುವಾಗಲೇ ಗೃಹಿಣಿ ಆತ್ಮಹತ್ಯೆ!
ಬಳ್ಳೂರು ಹುಂಡಿ ಬಳಿ ನಾಲ್ವರು ಆರೋಪಿಗಳು ಗರಗಸ ಬಳಸಿ ಶ್ರೀಗಂಧದ ಮರ ಕಡಿಯುತ್ತಿದ್ದರು. ಹತ್ತಿರದಲ್ಲೇ ಇದ್ದ ಕೊರಕಲಾಡಿ ಕಳ್ಳಬೇಟೆ ನಿಗ್ರಹ ತಡೆ ಶಿಬಿರದ ರಾತ್ರಿ ಪಾಳಿ ಅರಣ್ಯ ಸಿಬ್ಬಂದಿ ಸದ್ದು ಕೇಳಿ ಪರಿಶೀಲಿಸಲು ಸ್ಥಳಕ್ಕೆ ತೆರಳಿದಾಗ ಆರೋಪಿಗಳು ಬೈಕ್​ಗಳನ್ನು ಬಿಟ್ಟು ಪರಾರಿಯಾಗಿದ್ದರು.
ದ್ವಿಚಕ್ರ ವಾಹನದ ನಂಬರ್ ಆಧರಿಸಿ ವಿಳಾಸ ಪತ್ತೆ ಹಚ್ಚಿದ ಅರಣ್ಯಾಧಿಕಾರಿಗಳು ಸುರೇಶ,‌ ರಾಮು, ಕುಮಾರನನ್ನು ವಶಕ್ಕೆ ಪಡೆದರು. ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಹೆಡಿಯಾಲ ಆರ್​ಎಫ್ಒ ಮಂಜುನಾಥ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
‘ನಾವು ಡ್ರಗ್ಸ್​ ಪಾರ್ಟಿ ಮಾಡ್ತಾ ಇದ್ವಿ, ಅದರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಿದ್ಲು…’

ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eight =
Remember me
