ಬೆಂಗಳೂರು:ಕಮಿಷನ್ ಆಮಿಷ ಒಡ್ಡಿ ನೂರಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಆರೋಪಿಯನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಲ್ಲೇಶ್ವರದ ಬ್ರಿಗೇಡ್​ ಗೇಟ್‌ವೇ ಟ್ರಿಲಿಯನರ್ ಮೈಂಡ್ ವರ್ಲ್ಡ್ ವೆಂಚರ್ ಪ್ರೈ. ಲಿ. ಕಂಪನಿ ಮಾಲೀಕ ಸಂದೇಶ್ ಕುಮಾರ್ ಶೆಟ್ಟಿ (29) ಬಂಧಿತ. ಆರೋಪಿಯ ಆಮಿಷಕ್ಕೆ ಒಳಗಾಗಿ ಹೂಡಿಕೆ ಮಾಡಿರುವ ನೂರಾರು ಮಂದಿ ದೂರು ನೀಡುತ್ತಿದ್ದು, 20 ಪ್ರಕರಣಗಳು ದಾಖಲಾಗಿವೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂದಾಪುರ ಮೂಲದ ಸಂದೇಶ್, 2018ರ ಜುಲೈನಲ್ಲಿ ಬ್ರಿಗೇಡ್ ಗೇಟ್‌ವೇನಲ್ಲಿ ಕಚೇರಿ ತೆರೆದು ಚೈನ್‌ಲಿಂಕ್ ಬಿಸಿನೆಸ್ ಆರಂಭಿಸಿದ್ದ. ವಿದ್ಯಾರ್ಥಿಗಳು ಮತ್ತು ಯುವಕರನ್ನೇ ಟಾರ್ಗೆಟ್ ಮಾಡಿದ್ದ ಆರೋಪಿ ಮೊದಲು 15 ಸಾವಿರ ರೂ. ಹೂಡಿಕೆ ಮಾಡಿ ಸದಸ್ಯತ್ವ ಪಡೆದರೆ ಆ ಹಣಕ್ಕೆ ಬಟ್ಟೆ, ತೂಕ ಇಳಿಸುವ ಪೌಡರ್, ಸೌಂದರ್ಯವರ್ಧಕ ಸೇರಿ ಇನ್ನಿತರ ವಸ್ತುಗಳನ್ನು ಕೊಡುವುದಾಗಿ ಆಮಿಷವೊಡ್ಡಿದ್ದ.ಪಾರ್ಟ್ ಟೈಮ್ ಕೆಲಸದ ಆಸೆಯಿಂದ ವಿದ್ಯಾರ್ಥಿಗಳು 15 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು. ಇದಾದ ಮೇಲೆ ಪ್ರವಾಸ ಪ್ಯಾಕೇಜ್, ಶಿಕ್ಷಣ ಅವಧಿ ಆಸೆ ತೋರಿಸಿ ಮತ್ತೆ 18 ಸಾವಿರ ರೂ. ಹೂಡಿಕೆ ಮಾಡಿ ಎಡ-ಬಲ ಸದಸ್ಯರನ್ನು ಕರೆತಂದರೆ ಹೆಚ್ಚಿನ ಕಮಿಷನ್ ಮತ್ತು ವಸ್ತುಗಳು ಸಿಗಲಿವೆ. ಕೈತುಂಬ ಹಣದ ಪ್ರವಾಸವೂ ಹೋಗಬಹುದು ಎಂದು ಹೇಳಿದ್ದ. ನಂಬಿದ ನೂರಾರು ಮಂದಿ ತಾವು ಹೂಡಿಕೆ ಮಾಡಿದ್ದಲ್ಲದೆ ಸ್ನೇಹಿತರು, ಕುಟುಂಬ ಸದಸ್ಯರ ಹೆಸರಿನಲ್ಲಿಯೂ ಸಾವಿರಾರು ರೂಪಾಯಿ ಹಣ ತೊಡಗಿಸಿದ್ದರು.
ಇದನ್ನೂ ಓದಿ:7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!
ತನ್ನ ಸಹಚರರಿಗೆ ಬೆಲೆ ಬಾಳುವ ವಸ್ತುಗಳು ಮತ್ತು ಕಮಿಷನ್​ ಹಣ ಕೊಟ್ಟು ಇತರರಿಗೆ ನಂಬಿಸಿದ್ದ. ಆರಂಭದಿಂದಲೇ ಬಹುತೇಕ ಮಂದಿಗೆ ಯಾವುದೇ ವಸ್ತುಗಳನ್ನು ಮತ್ತು ಕಮಿಷನ್ ಕೊಟ್ಟಿಲ್ಲ. ಕೇಳಿದಾಗ ಸಬೂಬು ಹೇಳಿಕೊಂಡು ಮುಂದೂಡಿದ್ದ. ಕರೊನಾ ಲಾಕ್‌ಡೌನ್ ಲಾಭ ಮಾಡಿಕೊಂಡು ಕಂಪನಿ ನಷ್ಟದಲ್ಲಿ ಇರುವುದಾಗಿ ಸುಳ್ಳು ಹೇಳಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದ. ಆರೋಪಿಯ ವಂಚನೆ ಮುಖವಾಡ ಹೂಡಿಕೆದಾರರಿಗೆ ಗೊತ್ತಾಗಿ ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಒಡ್ಡಿದ್ದಾನೆ. ನೊಂದ ಹೂಡಿಕೆದಾರರು ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ನೂರಾರು ಕೋಟಿ ವಂಚನೆ ಮಾಡಿರುವ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಿಗೇಡ್​ ಗೇಟ್‌ವೇಗೆ ಸೇರಿದ ವರ್ಲ್ಡ್ ಟ್ರೇಡ್ ಸೆಂಟರ್‌ನ 22ನೇ ಮಹಡಿಯಲ್ಲಿ ಟ್ರಿಲಿಯನರ್ ಮೈಂಡ್ ವರ್ಲ್ಡ್ ವೆಂಚರ್ ಪ್ರೈ.ಲಿ. ಕಂಪನಿ ತೆರೆದಿದ್ದ. ಹೂಡಿಕೆದಾರರು ಮತ್ತು ಆಸಕ್ತಿ ಇರುವರರ ಮೀಟಿಂಗ್ ಕರೆದು ಟಿವಿ ಪರದೆ ಮೇಲೆ ಬಣ್ಣಬಣ್ಣದ ಆಸೆ ತೋರಿಸುತ್ತಿದ್ದ. ಕೇವಲ 15 ಸಾವಿರ ರೂ. ಹೂಡಿಕೆ ಮಾಡಿ ಎಡ-ಬಲ ಸದಸ್ಯರನ್ನು ಮಾಡಿದರೆ ಕೂತಲ್ಲೇ ಲಕ್ಷಾಂತರ ರೂ. ಸಂಪಾದನೆ ಮಾಡಬಹುದು ಎಂದು ಟ್ರಿಲಿಯನ್ ಆಸೆ ತೋರಿಸುತ್ತಿದ್ದ.
ಇದನ್ನೂ ಓದಿ:ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?
ನಕಲಿ ವಸ್ತುಗಳ ಮಾರಾಟ:ಹೂಡಿಕೆದಾರರಿಗೆ ಬಟ್ಟೆ, ಪಾನೀಯಗಳು, ಸೌಂಧರ್ಯವರ್ಧಕ ಮತ್ತು ವ್ಯಾಯಾಮ ಉಪಕರಣಗಳನ್ನು ಕೊಡುತ್ತಿದ್ದ. ಯಾವುದೇ ವಸ್ತುಗಳು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರಲಿಲ್ಲ. ಕಳಪೆ ಮತ್ತು ನಕಲಿ ವಸ್ತುಗಳು ಆಗಿದ್ದವು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಜಾಹೀರಾತು ನೀಡಿದರೆ ವಸ್ತುಗಳ ಬೆಲೆ ಹೆಚ್ಚಾಗುತ್ತವೆ. ಬದಲಿಗೆ ಸದಸ್ಯತ್ವ ಪಡೆದಿರುವರೇ ಚೈನ್ ಲಿಂಕ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡಿದರೆ ಕಮಿಷನ್ ಸಿಗುತ್ತದೆ ಎಂದು ಆಸೆ ಹುಟ್ಟಿಸುತ್ತಿದ್ದ.
ಸನ್ನಿ ಲಿಯೋನ್​ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್​ ಯಂಗ್​ಮ್ಯಾನ್​ ಇವರೇ..

ಗರ್ಭಿಣಿ ಕರೀನಾ ಕಪೂರ್ ಈಗ ಮಿಸ್ ಮಾಡಿಕೊಳ್ಳುತ್ತಿರುವುದಾದರೂ ಏನು?!

ಸಂಜೆ ಹೊರಕ್ಕೆ ಹೋಗದಿದ್ರೆ ರೇಪ್​ ಆಗ್ತಿರಲಿಲ್ಲ: ಮಹಿಳಾ ಆಯೋಗದ ಸದಸ್ಯೆ ಹೇಳಿಕೆಗೆ ಭುಗಿಲೆದ್ದ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
