ಮೈಸೂರು:ಸಂದೇಶ್​ ಪ್ರಿನ್ಸ್​ ಹೋಟೆಲ್​ನಲ್ಲಿ ಸಪ್ಲೈಯರ್​ ಮೇಲೆ ನಟ ದರ್ಶನ್​ ಹಲ್ಲೆ ಮಾಡಿದ್ದಾರೆನ್ನಲಾದ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ ನನಗೆ ಕನ್ನಡ ಬರಲ್ಲ ಅಂದಿದ್ದ ಹೋಟೆಲ್​ ಸಿಬ್ಬಂದಿ ಇದೀಗ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ.
ಸಮೀರ್ ಹೆಸರಿನ ಹೋಟೆಲ್​ ಸಿಬ್ಬಂದಿ​ ನಿನ್ನೆ ಹೇಳಿದ್ದೇ ಬೇರೆ,ಇವತ್ತು ಹೇಳ್ತಿರೋದೇ ಬೇರೆ, ನಿನ್ನೆ ಕನ್ನಡ ಬರಲ್ಲ ಎಂದಿದ್ದ ಸಮೀರ್, ಆದರೆ, ಕನ್ನಡದಲ್ಲೇ ಮಾತನಾಡಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಜೂನ್​ 24ರಂದು ಸಪ್ಲೈಯರ್​ಗೆ ಹೊಡೆದಿದ್ರೆಂತೆ ನಾನು ಅದನ್ನು ನೋಡಿಲ್ಲ. ಆ ದಿನ ನಾನು ಇರಲಿಲ್ಲ. ಹೊಡೆದಿದ್ದಾರೋ? ಇಲ್ಲವೋ ಗೊತ್ತಿಲ್ಲ. ಆದರೆ, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರೆ ಎಲ್ಲವೂ ಗೊತ್ತಾಗುತ್ತದೆ. ಸಿಬ್ಬಂದಿ ಅಲ್ವಾ ಸರ್​ ಹೊಡೆಯೋದು ಏಕೆ? ಏನಾದ್ರೂ ಇದ್ರೆ ಮಾತನಾಡಬಹುದಿತ್ತಲ್ವಾ ಎಂದು ಸಮೀರ್​ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಇನ್ನೊಂದು ವಿಡಿಯೋದಲ್ಲಿ ಸೆಕ್ಯೂರಿಟಿ ಗಾರ್ಡ್​ ಜೂನ್​ 24ರಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಹೋಟೆಲ್​ನ ಸ್ವಿಮ್ಮಿಂಗ್​ ಫೂಲ್​ ಏರಿಯಾದಲ್ಲಿ ಇರುವ ಜಾಗದಲ್ಲಿ ಹತ್ತರಿಂದ ಹದಿನೈದು ಜನರನ್ನು ಕರೆಸಿಕೊಂಡು ಮಿನಿ ಡ್ರಿಂಕ್ಸ್​ ಪಾರ್ಟಿ ಮಾಡುತ್ತಿದ್ದರು. ಪಾರ್ಟಿಯೆಲ್ಲ ಮುಗಿಯಿತು. ತುಂಬಾ ಮದ್ಯಪಾನ ಮಾಡಿದ್ದರು. ಯಾವುದೋ ಒಂದು ಐಟಂ ಕೊಡಲಿಲ್ಲ ಅಂತಾ ಮದ್ಯದ ಅಮಲಿನಲ್ಲಿ ಸಪ್ಲೈಯರ್​ಗೆ ಹೊಡೆದರು. ಅದರಿಂದ ಸಪ್ಲೈಯರ್​ ಕೂಡ ಕಣ್ಣೀರಾಕಿದರು. ಕಪಾಳ ಮತ್ತು ಕಿವಿ ಸೇರಿಸಿ ಹೊಡೆದಿದ್ದರಿಂದ ನೋವಿನಿಂದ ಸಪ್ಲೈಯರ್​ ಅಳುತ್ತಿದ್ದ ಎಂದು ಸೆಕ್ಯುರಿಟಿ ಗಾರ್ಡ್​ ಹೇಳಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೊಡೆದಿದ್ದು ಮಾತ್ರವಲ್ಲದೆ, ಕೆಟ್ಟದಾಗಿ ನಿಂದಿಸಿದರು. ಸೆಕ್ಯುರಿಟಿಗಳಿಗೂ ಬೈದರು. ಅಲ್ಲದೆ, ತನ್ನ ಬಳಿಯಿದ್ದ ಹಣವನ್ನು ಎರಚಿ ಹೋಟೆಲ್​ ಮಾಲೀಕರ ವಿರುದ್ಧವೂ ಕೂಗಾಡಿದರು ಎಂದು ಸೆಕ್ಯೂರಿಟಿ ಗಾರ್ಡ್​ ಹೇಳಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಅಂದು ರಾತ್ರಿ ದರ್ಶನ್​ ಅವರ ವರ್ತನೆ ಹೇಗಿತ್ತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಘಟನೆ ನಡೆದ ದಿನದಂದು ಇವರೆಲ್ಲರೂ ಪ್ರತ್ಯಕ್ಷದರ್ಶಿಗಳಾಗಿದ್ದರಂತೆ.

ಕೇರಳದಲ್ಲಿ ಇಂದು, ನಾಳೆ ಸಂಪೂರ್ಣ ಲಾಕ್​ಡೌನ್

ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ದೆಹಲಿಯಿಂದಲೇ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ ಸಿಎಂ ಬಿಎಸ್​ವೈ

ಎಲ್​ಪಿಜಿ ಸಿಲಿಂಡರ್​ ಮೇಲೆ ಕೇಂದ್ರಕ್ಕಿಂತ ರಾಜ್ಯ ಸರ್ಕಾರ ಇಷ್ಟೊಂದು ತೆರಿಗೆ ಪಡೆಯುತ್ತಾ? ಇಲ್ಲಿದೆ ಅಸಲಿ ವಿಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − sixteen =
Remember me
