ಬೆಂಗಳೂರು:ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಭಾನುವಾರ (ಫೆ. 19) ಎಂ.ಎಸ್. ಬಿಲ್ಡಿಂಗ್ ಎದುರಿನ ಕಬ್ಬನ್ ಉದ್ಯಾನದಲ್ಲಿರುವ ರಾಜ್ಯ ಸರ್ಕಾರಿ ಉದ್ಯೋಗಿ ಗಳ ಸಂಘದ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ‘ಸಂಗೀತ ಸಂಜೆ’ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಉಸ್ತಾದ್ ರಫೀಕ್ ಖಾನ್ ಹಾಗೂ ಅಂಕುಶ್ ನಾಯಕ್ ಅವರು ಸಿತಾರ್ ಜುಗಲಬಂದಿ ನಡೆಯಲಿದ್ದು, ಪಂಡಿತ್ ರಾಜೇಂದ್ರ ನಾಕೋಡ್ ತಬಲಾ ಸಾಥ್ ನೀಡಲಿದ್ದಾರೆ. ನಂತರ ಪಂಂಡಿತ್ ಎಂ. ವೆಂಕಟೇಶ್​ಕುಮಾರ್ ಗಾನಸುಧೆಗೆ ನರೇಂದ್ರ ನಾಯಕ್ ಹಾಮೋನಿಯಂ ನುಡಿಸಲಿದ್ದು, ಕೇಶವ್ ಜೋಶಿ ತಬಲ ವಾದನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
ಮಾಹಿತಿಗೆ ಸಂಪರ್ಕಶಿವಮೂರ್ತಿ:88844 32389, 63639 33258,ಅಖಿಲೇಶ್:99861 72645
ಎಂ. ವೆಂಕಟೇಶ್ ಕುಮಾರ್ಧಾರವಾಡದವರಾದ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಅವರು ಗ್ವಾಲಿಯರ್ ಮತ್ತು ಕಿರಾಣಾ ಘರಾನಾದಲ್ಲಿ ಹಿಂದೂಸ್ತಾನಿ ಗಾಯಕರಾಗಿ ಹಲವಾರು ವರ್ಷಗಳ ಕಾಲ ಗದಗದಲ್ಲಿ ಸಂಗೀತಗಾರ ಸಂತ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಪಂ. ವೆಂಕಟೇಶ್ ಕುಮಾರ್ ಅವರ ಸಂಗೀತವು ವೈವಿಧ್ಯಮಯ ಸಂಗೀತದ ಪ್ರಭಾವಗಳ ಮಿಶ್ರಣವಾಗಿದೆ. ಇವರ ಕಲಾ ಸೇವೆಯಿಂದಾಗಿ ಪದ್ಮಶ್ರೀ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಅಂಕುಶ್ ನಾಯಕ್ಮೂಲತಃ ಮಂಗಳೂರಿನವರಾದ ಅಂಕುಶ್ ನಾಯಕ್, ಶಿಕ್ಷಣತಜ್ಞ ಪೊ›. ನರೇಂದ್ರ ನಾಯಕ್ ಮತ್ತು ಡಾ. ಉಷಾಪ್ರಭಾ ನಾಯಕ್ ಪುತ್ರ. 9ನೇ ವಯಸ್ಸಿನಲ್ಲಿ ಧಾರವಾಡ ಘರಾಣೆಯ ಸಿತಾರ್ ವಾದಕ ಉಸ್ತಾದ್ ರಫೀಕ್​ಖಾನ್ ಅವರಿಂದ ಸಿತಾರ್ ಹಾಗೂ ಘಟಂ ಮಾಂತ್ರಿಕ ವಿದ್ವಾನ್ ತಿರುಚ್ಚಿ ಕೆ.ಆರ್. ಕುಮಾರ್ ಅವರಿಂದ ಕರ್ನಾಟಕ ತಾಳ ಪದ್ಧತಿ ಕಲಿತಿದ್ದಾರೆ. 2009ರಲ್ಲಿ ಆಲ್ ಇಂಡಿಯಾ ರೇಡಿಯೋ ನ್ಯಾಷನಲ್ ಮ್ಯೂಸಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ರವಿ ಕೊಪ್ಪಿಕರ್ ಪ್ರಶಸ್ತಿ, ಅವಿನಾಶ್ ಹೆಬ್ಬಾರ್ ಪ್ರಶಸ್ತಿ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ರಾಜೇಂದ್ರ ನಾಕೋಡ್ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರ ಕುಟುಂಬದಿಂದ ಬಂದವರಾಗಿದ್ದು, ತಂದೆ, ಪಂಡಿತ್ ಅರ್ಜುನ್​ಸಾ ನಾಕೋಡ್ ಪ್ರಸಿದ್ಧ ಗಾಯಕರು. ತಂದೆಯಿಂದ ತರಬೇತಿ ಆರಂಭಿಸಿ, ಬಳಿಕ ಸಹೋದರರಾದ ಪಂಡಿತ್ ರಘುನಾಥ್ ನಾಕೋಡ್ ಮತ್ತು ವಿಶ್ವನಾಥ್ ನಾಕೋಡ್ ಅವರ ಬಳಿ ತಬಲಾ ವಾದಕ ಕಲಿತರು. ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ಇವರು, ಸಂಗೀತ ದಿಗ್ಗಜರಾದ ಬಸವರಾಜ ರಾಜಗುರು, ಬೇಗಂ ಪರ್ವೀನ್ ಸುಲ್ತಾನಾ ಮತ್ತು ಪಂಡಿತ್ ವಿಶ್ವ ಮೋಹನ್ ಭಟ್ ಜತೆ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.
ಉಸ್ತಾದ್ ರಫೀಕ್ ಖಾನ್ಧಾರವಾಡದ ಘರಾನಾ ಮನೆತನದಲ್ಲಿ ಜನಿಸಿದ ಇವರದು ಸಂಗೀತ ಮನೆತನ. ತಂದೆ ಉಸ್ತಾದ್ ಅಬ್ದುಲ್ ಕರೀಂ ಖಾನ್ ಮತ್ತು ಅಜ್ಜ ಸಿತಾರ ರತ್ನ ಉಸ್ತಾದ್ ರಹಿಮತ್ ಖಾನ್ ಪ್ರಖ್ಯಾತ ಸಿತಾರ್ ವಾದಕರಾಗಿದ್ದರು. ಹಿರಿಯ ಸಹೋದರ ಉಸ್ತಾದ್ ಬಾಲೆ ಖಾನ್ ಸಹ ಸಂಗೀತ ಕಲಾವಿದರ. ರಫೀಕ್ ಖಾನ್ ಮುಂಬೈನ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಪರೀಕ್ಷೆ ಪಾಸ್ ಮಾಡಿ, ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ಸಂಗೀತ ಕಛೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. 2019ರಲ್ಲಿ ಸುರ್ ಮಣಿ ಪ್ರಶಸ್ತಿ ಮತ್ತು ಸರಗುರು ಪಂಡಿತ್ ಜಸ್​ರಾಜ್ ಪ್ರಶಸ್ತಿ ಪಡೆದಿದ್ದಾರೆ. ಕಲಾಂಗನ್ ಕೊಂಕಣಿ ಅಕಾಡೆಮಿಯ ಸಂದೇಶ ಪ್ರಶಸ್ತಿ ಗಳಿಸಿದ್ದಾರೆ.
ಶಿಂಧೆ ಬಣಕ್ಕೆ ಬಿಲ್ಲುಬಾಣ ಉದ್ಧವ್​ಗೆ ಮುಖಭಂಗ: ಬಂಡಾಯ ಗುಂಪೇ ನಿಜವಾದ ಶಿವಸೇನೆ, ಚುನಾವಣಾ ಆಯೋಗ ಆದೇಶ

ಪಾಲಕರ ವಿರೋಧ ಲೆಕ್ಕಿಸದೇ ಪಾರ್ಶ್ವವಾಯು ಪೀಡಿತ ಪ್ರಿಯಕರನ್ನು ಮದ್ವೆಯಾಗಿದ್ದ ಸಹನಾಗೆ ಭಾರೀ ಆಘಾತ

ಪ್ರೇಮಿಗಳ ದಿನ ರೆಸ್ಟೋರೆಂಟ್​ನಲ್ಲಿ ಬಾಯ್​ಫ್ರೆಂಡ್​ ಜತೆ ಸಿಕ್ಕಿಬಿದ್ದ ಮಗಳು! ನಂತರ ನಡೆದಿದ್ದು ಹೈಡ್ರಾಮ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + thirteen =
Remember me
