ಬೆಂಗಳೂರು:ಯಂತ್ರೋಪಕರಣಗಳನ್ನು ಬಳಸಿ ಸ್ವಚ್ಛತಾ ಕಾರ್ಯ, ಒಳಚರಂಡಿ ಹೂಳೆತ್ತುವುದು ಸಾಧ್ಯವೆಂದು ತಿಳಿದು, ಈ ವ್ಯವಸ್ಥೆ ಅಧ್ಯಯನ ಮಾಡುವುದಕ್ಕಾಗಿ ಸಾಯಿ ಕರ್ಮಚಾರಿ/ ಪೌರ ಕಾರ್ಮಿಕರ ಎರಡನೇ ತಂಡ ಸೋಮವಾರ ಸಿಂಗಾಪೂರಕ್ಕೆ ಪ್ರಯಾಣ ಬೆಳೆಸಿತು.
ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಬಳಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ಅಧಿಕಾರಿಗಳು ಸೇರಿ 37 ಜನ ಸಾಯಿ ಕರ್ಮಚಾರಿ/ ಪೌರಕಾರ್ಮಿಕರ ತಂಡವಿದ್ದ ವಾಹನಕ್ಕೆ ಬಾವುಟ ತೋರಿಸಿ ಸೋಮವಾರ ಬೀಳ್ಕೊಟ್ಟರು.
ಒಳಚರಂಡಿ ಸ್ವಚ್ಛತೆ, ಕಸ ಗುಡಿಸುವ ಕಾರ್ಯಕ್ಕೆ ಯಂತ್ರೋಪಕರಣಗಳ ಬಳಕೆ, ಸಿಬ್ಬಂದಿ ಸುರಕ್ಷತೆ ಸಾಧನ ಧರಿಸುವುದು, ಸ್ವಚ್ಛತೆ ಕಾರ್ಯ ಮುಗಿಯುವ ತನಕ ಆ ಮಾರ್ಗದಲ್ಲಿ ವಾಹನಗಳ ಸಂಚಾರ ನಿರ್ಬಂಧ ಮುಂತಾದ ಕ್ರಮಗಳ ಮೂಲಕ ವಿಶ್ವಕ್ಕೆ ಸಿಂಗಾಪೂರ ಮಾದರಿಯಾಗಿದೆ.
ಸಿಂಗಾಪೂರ್ ಸ್ಥಳೀಯ ಸಂಸ್ಥೆ ಸಿಬ್ಬಂದಿ ಚಾಕಚಕ್ಯತೆ, ಕಾರ್ಯನಿರ್ವಹಿಸುವ ರೀತಿಯನ್ನು ಸಿಬ್ಬಂದಿ ಅರಿತುಕೊಂಡರೆ ಇಲ್ಲಿಯೂ ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. ಅಲ್ಲದೆ, ಕೈಯಿಂದ ಸ್ವಚ್ಛ ಮಾಡುವುದನ್ನು ಬಿಡುತ್ತಾರೆ. ಘನತೆ-ಗೌರವ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು, ಕೆಲಸದ ಬಗೆಗಿನ ಕೀಳರಿಮೆಯಿಂದ ಹೊರ ಬರಲು ನೆರವಾಗುತ್ತದೆ ಎಂಬ ಕಾರಣಕ್ಕೆ ಸಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ವಿದೇಶ ಅಧ್ಯಯನ ಪ್ರವಾಸದ ವ್ಯವಸ್ಥೆ ಮಾಡಿದೆ.
ಬಿಬಿಎಂಪಿ ವಾರ್ಡ್‌ಗೆ ತಲಾ ಒಬ್ಬರಂತೆ 198, ಉಳಿದ 10 ಮಹಾನಗರ ಪಾಲಿಕೆಗಳ ತಲಾ 10 ಪೌರ ಸಿಬ್ಬಂದಿಯನ್ನು ವಿದೇಶ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಒಟ್ಟು ಮೂರು ದಿನಗಳ ಅಧ್ಯಯನ ಪ್ರವಾಸಕ್ಕೆ ತಲಾ ಒಬ್ಬರಿಗೆ 1.80 ಲಕ್ಷ ರೂ. ವೆಚ್ಚದಲ್ಲಿ ವಿಮಾನ ಪ್ರಯಾಣ, ಉಪಾಹಾರ, ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ತುಮಕೂರು, ದಾವಣಗೆರೆ ಮತ್ತು ಮಂಗಳೂರು ಮಹಾನಗರ ಪಾಲಿಕೆಯ 30 ಸಿಬ್ಬಂದಿ ಸಿಂಗಾಪೂರ್ ಪ್ರವಾಸ ಮಾಡಿ ಬಂದಿದ್ದಾರೆ. ಎರಡನೇ ಹಂತದಲ್ಲಿ ಮೈಸೂರು, ಬೆಳಗಾವಿ, ಧಾರವಾಡ ಮತ್ತು ಬಳ್ಳಾರಿ ಪಾಲಿಕೆಯ 36 ಸಿಬ್ಬಂದಿ ಸೋಮವಾರ ಪ್ರಯಾಣ ಬೆಳೆಸಿದರು. ನಂತರ ಏಳು ಹಂತದಲ್ಲಿ ಉಳಿದ ಸಿಬ್ಬಂದಿ ಅಧ್ಯಯನ ಪ್ರವಾಸಕ್ಕೆ ರೂಪರೇಷೆಯನ್ನು ನಿಗಮ ಸಿದ್ಧಪಡಿಸಿದೆ.
ಮಾರ್ಚ್‌ನಲ್ಲಿ ಪ್ರವಾಸ ಮಾಡಿದ ಮೊದಲ ಹಂತದ ಸಿಬ್ಬಂದಿಗೆ ಕೈಖರ್ಚಿಗೆಂದು ತಲಾ ಐದು ಸಾವಿರ ರೂ. ನೀಡಲಾಗಿತ್ತು. ಅದೇ ರೀತಿ ನಮಗೂ ಕೊಡಿ ಎಂದು ಎರಡನೇ ತಂಡದ ಕೆಲ ಸಿಬ್ಬಂದಿ ಪಟ್ಟು ಹಿಡಿದ ಪ್ರಸಂಗವೂ ನಡೆಯಿತು.
ಮೂರು ದಿನಗಳ ಅಧ್ಯಯನ ವೆಚ್ಚವನ್ನು ಪೂರ್ತಿ ನಿಗಮವೇ ಭರಿಸುತ್ತದೆ. ಪ್ರತ್ಯೇಕವಾಗಿ ಕೈಖರ್ಚಿಗೆ ಕೊಡಲು ನಿಗಮದಲ್ಲಿ ಅವಕಾಶವಿಲ್ಲ. ಕಳೆದ ಬಾರಿ ಬಿಬಿಎಂಪಿ ಮುಖೇನ ಈ ವ್ಯವಸ್ಥೆ ಮಾಡಿತ್ತು ಎಂದು ನಿಗಮದ ಅಧಿಕಾರಿಗಳು ತಿಳಿಸಿ, ಮುನಿದ ಸಿಬ್ಬಂದಿ ಮನವೊಲಿಸಿ ವಾಹನ ಹತ್ತಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
