ಬೆಂಗಳೂರು:ಮನೆ ಮುಂದೆ ರಂಗೋಲಿ, ಕಬ್ಬಿನ ಜಲ್ಲೆಗಳ ಗೋಪುರ, ಮನೆಯೊಳಗೆ ಹೋದವರಿಗೆ ಎಳ್ಳು ಬೆಲ್ಲ ಹಾಗೂ ಸಿಹಿ ಪೊಂಗಲ್ ವಿತರಣೆ, ದೇವಾಲಯಗಳಲ್ಲಿ ವಿಶೇಷ ಪೂಜೆ… ಸಂಕ್ರಾಂತಿ ಹಬ್ಬವನ್ನು ಸಿಲಿಕಾನ್ ಸಿಟಿ ಸಂಭ್ರಮಿಸಿದ ಪರಿಯಿದು!
ನಗರದಲ್ಲಿ ಬಹುಪಾಲು ಎಲ್ಲ ದೇವಾಲಯಗಳಲ್ಲೂ ಬುಧವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು.
ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನ, ಮಲ್ಲೇಶ್ವರದ ಲಕ್ಷ್ಮೀನರಸಿಂಹ ದೇವಸ್ಥಾನ, ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ, ಕೃಷ್ಣರಾಜೇಂದ್ರ ಮಾರುಕಟ್ಟೆಯ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ, ವಿಜಯನಗರದ ಮಾರುತಿ ಮಂದಿರ- ಹೀಗೆ ಎಲ್ಲೆಡೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಸೋಂಪುರ ಚನ್ನವೀರಪಾಳ್ಯದ ಬಸವೇಶ್ವರ ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆ ನಡೆಯಿತು. ಎಲ್ಲ ದೇವಾಲಯಗಳಲ್ಲಿ ವಿಭಿನ್ನ ಪೂಜೆಗಳ ಜತೆಗೆ ಪೊಂಗಲ್ ಪ್ರಸಾದ ವಿತರಣೆ ಸಾಮಾನ್ಯವಾಗಿತ್ತು.
ಮಾರುತಿಗೆ ವಡೆ ಅಲಂಕಾರ: ವಿಜಯನಗರದ ಮಾರುತಿ ಮಂದಿರದಲ್ಲಿ ಆಂಜನೇಯ ಸ್ವಾಮಿಗೆ ಸಂಕ್ರಾಂತಿ ವಡೆಗಳಿಂದ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಬೆಳಗ್ಗೆಯಿಂದ ರಾತ್ರಿವರೆಗೂ ದೇವರ ದರ್ಶನ ಪಡೆದರು.
ಪುಳಿಯೊಗರೆ ವಿತರಣೆ
ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಕಳೆದ ವರ್ಷದಿಂದ ಸಂಕ್ರಾಂತಿ ಸಂಭ್ರಮದ ಅಂಗವಾಗಿ ಪುಳಿಯೊಗರೆ ನೈವೇದ್ಯ ಮಾಡಿ ಭಕ್ತರಿಗೆ ವಿತರಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದರಂತೆ ಮಾಜಿ ಉಪ ಮೇಯರ್ ಲಕ್ಷ್ಮೀನಾರಾಯಣ ಅವರು 30 ಕೆ.ಜಿ. ಅಕ್ಕಿಯ ಪುಳಿಯೊಗರೆಯನ್ನು ಆಂಜನೇಯ ಸ್ವಾಮಿ ಪೂಜೆಗೆ ಸಲ್ಲಿಸಿದರು. ಎಲ್ಲ ಭಕ್ತರಿಗೆ ಪುಳಿಯೊಗರೆ ಪ್ರಸಾದ ನೀಡಲಾಯಿತು.
ಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶ
ಬೆಳಗ್ಗೆ 5.30ರಿಂದ ಸುಪ್ರಭಾತ ಸೇವೆ, ಮಹಾಗಣಪತಿ ಪ್ರಾರ್ಥನೆ, ರುದ್ರಾಭಿಷೇಕ, ಪಂಚಾಮೃತ ಮತ್ತು ಕ್ಷೀರಾಭಿಷೇಕ ನಡೆರವೇರಿಸಿ ಪುಷ್ಪಾಲಂಕಾರ ಮಾಡಿ ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಮಧ್ಯಾಹ್ನ ಭಕ್ತರಿಗೆ ದರ್ಶನ ನಿಲ್ಲಿಸಲಾಯಿತು. ಸಂಜೆ 5.30ರ ವೇಳೆ 4 ನಿಮಿಷ ಸೂರ್ಯರಶ್ಮಿ ಶಿವಲಿಂಗ ರ್ಸ³ಸುವುದನ್ನು ದೃಶ್ಯ ಮಾಧ್ಯಮಗಳು ನೇರಪ್ರಸಾರ ಮಾಡಿದವು. ಸೂರ್ಯರಶ್ಮಿ ವೇಳೆ ನಿರಂತರ ಕ್ಷೀರಾಭಿಷೇಕ ಮಾಡಲಾಯಿತು. ಸಂಜೆ 6ರಿಂದ ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ದಂಪತಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಸಂಜೆ ವೇಳೆಗೆ ಸಹಸ್ರಾರು ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಜನದಟ್ಟಣೆ ಉಂಟಾಗಿತ್ತು. ಪೊಲೀಸರು ಬಿಗಿಭದ್ರತೆ ಒದಗಿಸಿದ್ದರು.
ಕಿಚ್ಚು ಹಾರಿದ ರಾಸುಗಳು
ಪದ್ಮನಾಭನಗರದ ಕಾರ್ವೆಲ್ ಶಾಲೆ ಮೈದಾನ, ಹೊಸಕೆರೆಹಳ್ಳಿಯ ಮೈದಾನ, ಯಲಹಂಕ ಉಪನಗರದ 3ನೇ ಹಂತದ ವೀರಾಂಜನೇಯ ದೇವಸ್ಥಾನದ ಆವರಣ, ರಾಜರಾಜೇಶ್ವರಿನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಎತ್ತುಗಳ ಸಿಂಗಾರ ಸ್ಪರ್ಧೆ ಹಾಗೂ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಿತು.
ಜೋಡೆತ್ತಿಗೆ ಪೂಜೆ ಸಲ್ಲಿಸಿದ ಡಿಕೆಶಿ
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆಯಲ್ಲಿ ಜೋಡೆತ್ತುಗಳಿಗೆ ಪೂಜೆ ಸಲ್ಲಿಸಿದರು. ಅವುಗಳಿಗೆ ಕೈಮುಗಿದು ನಮಸ್ಕರಿಸಿದ ಶಿವಕುಮಾರ್ ಜತೆಗೆ ನಿಂತು ಫೋಟೋ ತೆಗೆದುಕೊಂಡು ಸಂಭ್ರಮಿಸಿದರು.
ಸಿಹಿ ಹಂಚಿ ಸಂಭ್ರಮಿಸಿದರು
ಪುರುಷರು, ಮಹಿಳೆಯರು, ಮಕ್ಕಳು ಹೊಸ ಉಡುಪು ತೊಟ್ಟು ಸಂಭ್ರಮಿಸಿದರು. ಬಂಧು- ಬಾಂಧವರ ಮನೆಗಳಿಗೆ ತೆರಳಿ ಎಳ್ಳು- ಬೆಲ್ಲ, ಕಬ್ಬು ವಿನಿಮಯ ಮಾಡಿಕೊಂಡರು. ವಿವಿಧ ಭಾಗಗಳಲ್ಲಿ ಸಂಜೆ ನಗರದ ವಿವಿಧೆಡೆ ಗ್ರಾಮೀಣ ಸೊಗಡು ಬಿಂಬಿಸುವ ರಾಸುಗಳ ಮೆರವಣಿಗೆ, ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆದವು.
ರಸ್ತೆಯುದ್ದಕ್ಕೂ ರಂಗೋಲಿ
ಶಾಂತಿನಗರದ ಸಿದ್ದಯ್ಯ ರಸ್ತೆ, ಸುಧಾಮನಗರ ಹಾಗೂ ಗೌರಿಪಾಳ್ಯದ ಬಡಾವಣೆಯಲ್ಲಿ ರಸ್ತೆಯಲ್ಲೇ ಕಬ್ಬಿನ ಜಲ್ಲೆ ಗೋಪುರ ನಿರ್ವಿುಸಿ ಸಿಹಿ ಪೊಂಗಲ್ ಅನ್ನು ಮಹಿಳೆಯರು ತಯಾರಿಸಿದರು. ರಸ್ತೆಯುದ್ದಕ್ಕೂ ಬಿಡಿಸಿದ್ದ ಬಣ್ಣ ಬಣ್ಣದ ರಂಗೋಲಿಗಳು ನೋಡುಗರ ಕಣ್ಮನ ಸೆಳೆದವು. ಇಲ್ಲಿಗೆ ಭೇಟಿ ನೀಡಿದವರು ಸೆಲ್ಪಿ ತೆಗೆದುಕೊಂಡು ಖುಷಿ ಪಟ್ಟರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 9 =
Remember me
