ಬೆಂಗಳೂರು:ರಾಜ್ಯ ಸರ್ಕಾರದ ವಿರುದ್ಧ ‘ಪೇಸಿಎಂ’ ಪೋಸ್ಟರ್​ ಅಂಟಿಸಿ ಕಳೆದ ವರ್ಷ ಅಭಿಯಾನ ನಡೆಸಿ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಕಾಂಗ್ರೆಸ್, ​​ಈ ವರ್ಷವೂ ಮುಂದುವರಿಸಿದೆ. ಸಂಕ್ರಾಂತಿ ಹಬ್ಬದ ಆಫರ್​ ಎಂಬಂತೆ ಸಿಎಂ ಭಾವಚಿತ್ರವುಳ್ಳ ಪೋಸ್ಟರ್ ಬಿಡುಗಡೆ ಮಾಡಿ ​ಸರ್ಕಾರ ಈಗ “ಸಂಕ್ರಾಂತಿ ಸ್ಕ್ಯಾಮ್ ಸಂಭ್ರಮ” ಆಚರಿಸುತ್ತಿದೆ ಎಂದು ಅಣಕಿಸಿದೆ.
‘ಸಿಎಂ ಬಸವಾರಜ ಬೊಮ್ಮಾಯಿ ಅವರ ವಿಶೇಷ ಮುತುವರ್ಜಿಯೊಂದಿಗೆ ಬಿಜಿಪಿ ನೇತೃತ್ವದ ಕರ್ನಾಟಕ ಸರ್ಕಾರ ಈಗ “ಸಂಕ್ರಾಂತಿ ಸ್ಕ್ಯಾಮ್ ಸಂಭ್ರಮ” ಆಚರಿಸುತ್ತಿದೆ! 40% ಕಮಿಷನ್ ಕಡ್ಡಾಯದೊಂದಿಗೆ 100% ಹುದ್ದೆಗಳ ಸೇಲ್, ಸ್ಯಾಂಟ್ರೋ ರವಿಯಿಂದ ವರ್ಗಾವಣೆ ಕೂಪನ್! ಇದರೊಂದಿಗೆ ಸಂಕ್ರಾಂತಿಗೆ ‘ಸಿಡಿ ಕ್ರಾಂತಿ’ಯ ನಿರೀಕ್ಷೆಯನ್ನೂ ಜನತೆ ಇಟ್ಟುಕೊಳ್ಳಬಹುದು’ ಎಂದು ಟ್ವೀಟ್​ ಮಾಡಿದೆ.
“ಸರ್ಕಾರದ ಕೆಲಸ ದೇವರ ಕೆಲಸ” ಎಂಬ ವಿಧಾನಸೌಧದ ಮೇಲಿರುವ ಘೋಷವಾಕ್ಯದ ವಿರುದ್ಧವಾಗಿ “ಅನೈತಿಕ ಕೆಲಸವೇ ಸರ್ಕಾರದ ಕೆಲಸ” ಎಂದು ಬದಲಾಯಿಸಿಕೊಂಡಿದೆ ಬಿಜೆಪಿ. ವಾಮಮಾರ್ಗದಲ್ಲಿ ಅಧಿಕಾರ ಹಿಡಿದ ಬಿಜೆಪಿ ಯಿಂದ ವಿಧಾನಸೌಧದ ಘನತೆ ಮಣ್ಣುಪಾಲಾಗಿದೆ. ಸರ್ಕಾರದ “ಚೀಫ್ ಬ್ರೋಕರ್” ಸ್ಯಾಂಟ್ರೋ ರವಿಯೊಂದಿಗೆ ಉನ್ನತ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿ ಎಲ್ಲರೂ ನೇರಾನೇರ ಸಂಪರ್ಕದಲ್ಲಿದ್ದಾರೆ. ಇಡೀ ಸರ್ಕಾರವೇ ಈತನ ಕೈಯ್ಯೊಳಗಿದೆ. ಆತನೊಂದಿಗೆ ಬಿಜೆಪಿ ನಾಯಕರ ಚಾಟಿಂಗು, ಮೀಟಿಂಗು, ಡೇಟಿಂಗು ಎಲ್ಲವೂ ಬಯಲಾಗಿದೆ! ಈತನನ್ನು ಉನ್ನತ ತನಿಖೆಗೊಳಪಡಿಸಿದರೆ ಇಡೀ ಸರ್ಕಾರವೇ ಜೈಲು ಸೇರುವುದು ನಿಶ್ಚಿತ ಎಂದು ಕಾಂಗ್ರೆಸ್​ ಆಕ್ರೋಶ ಹೊರಹಾಕಿದೆ.
ಸಿಎಂ@BSBommaiಅವರ ವಿಶೇಷ ಮುತುವರ್ಜಿಯೊಂದಿಗೆ@BJP4Karnatakaಸರ್ಕಾರ ಈಗ "ಸಂಕ್ರಾಂತಿ ಸ್ಕ್ಯಾಮ್ ಸಂಭ್ರಮ" ಆಚರಿಸುತ್ತಿದೆ!
40% ಕಮಿಷನ್ ಕಡ್ಡಾಯದೊಂದಿಗೆ 100% ಹುದ್ದೆಗಳ ಸೇಲ್,ಸ್ಯಾಂಟ್ರೋ ರವಿಯಿಂದ ವರ್ಗಾವಣೆ ಕೂಪನ್!
ಇದರೊಂದಿಗೆ ಸಂಕ್ರಾಂತಿಗೆ 'ಸಿಡಿ ಕ್ರಾಂತಿ'ಯ ನಿರೀಕ್ಷೆಯನ್ನೂ ಜನತೆ ಇಟ್ಟುಕೊಳ್ಳಬಹುದು!pic.twitter.com/VgMXpu0Gga
— Karnataka Congress (@INCKarnataka)January 7, 2023

ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಪರಸ್ಪರ ಕ್ಯೂಆರ್​ ಕೋಡ್​ ಸಹಿತ ಪೋಸ್ಟರ್​ಗಳನ್ನು ತಯಾರಿಸಿ ಕಳೆದ ನವೆಂಬರ್​ನಲ್ಲಿ ಹೈಟೆಕ್​ ಪ್ರಚಾರಕ್ಕೆ ಕಾಂಗ್ರೆಸ್​ ಮತ್ತು ಬಿಜೆಪಿ ಇಳಿದಿದ್ದವು. ಕಾಂಗ್ರೆಸ್​ ಸದಸ್ಯರು ಪ್ಲೇಕಾರ್ಡ್ ಪ್ರದರ್ಶಶಿಸಿ ಇದು 40% ಸರ್ಕಾರ ಎಂದು ಧರಣಿ ನಡೆಸಿದ್ದರು. ಅತ್ತ ಬಿಜೆಪಿ ಸದಸ್ಯರೂ ಕಾಂಗ್ರೆಸ್ ಅನ್ನು ಭ್ರಷ್ಟ-ಲೂಟಿಕೋರ ಪಕ್ಷವೆಂದು ಅಣಕಿಸಿದ್ದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ವಿಧಾನಸೌಧದ ಘನತೆ ಕಳೆಯುತ್ತಿದೆ.
"ಸರ್ಕಾರದ ಕೆಲಸ ದೇವರ ಕೆಲಸ" ಎಂಬ ವಿಧಾನಸೌಧದ ಮೇಲಿರುವ ಘೋಷವಾಕ್ಯದ ವಿರುದ್ಧವಾಗಿ "ಅನೈತಿಕ ಕೆಲಸವೇ ಸರ್ಕಾರದ ಕೆಲಸ" ಎಂದು ಬದಲಾಯಿಸಿಕೊಂಡಿದೆ ಬಿಜೆಪಿ.
ವಾಮಮಾರ್ಗದಲ್ಲಿ ಅಧಿಕಾರ ಹಿಡಿದ@BJP4Karnatakaಯಿಂದ ವಿಧಾನಸೌಧದ ಘನತೆ ಮಣ್ಣುಪಾಲು.pic.twitter.com/Zp7OvlkpWh
— Karnataka Congress (@INCKarnataka)January 7, 2023

‘ಪೇಸಿಎಂ’ ಪೋಸ್ಟರ್​ಗೆ ಪ್ರತಿಯಾಗಿ ‘ಸ್ಕ್ಯಾಮ್ ರಾಮಯ್ಯ’ ಪುಸ್ತಕ ಬಿಡುಗಡೆ ಮಾಡಿದ ಬಿಜೆಪಿ

ಜೆಡಿಎಸ್​ನ ಮತ್ತೊಂದು ವಿಕೆಟ್​ ಪತನ: ಡಿಕೆಶಿ ವಿರುದ್ಧ ಚುನಾವಣೆಯಲ್ಲಿ ನಿಂತು ಸೋತಿದ್ದ ಅಭ್ಯರ್ಥಿ ಕಾಂಗ್ರೆಸ್​ ಸೇರ್ಪಡೆ!

ಮಂಗಳೂರಿಗೆ ಆಗಮಿಸಿದ ಎಂ.ಎಸ್​.ಧೋನಿ: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

ವೆಬ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
