|ಮೃತ್ಯುಂಜಯ ಕಪಗಲ್ಬೆಂಗಳೂರು
ಹೆಚ್ಚು ಜನರಿಗೆ ತಲುಪುವ, ನೇರ ಜನ ಸಂಪರ್ಕಕ್ಕೆ ಸಿಗುವ ಕಂದಾಯ ಇಲಾಖೆ ಕಾರ್ಯಕ್ರಮಗಳ ಮೂಲಕ ಹೆಚ್ಚೆಚ್ಚು ‘ಜನಾನುರಾಗಿ’ಯಾಗಲು ರಾಜ್ಯ ಸರ್ಕಾರ ಅಪೇಕ್ಷಿಸಿದೆ. ಪೂರಕವಾಗಿ ಬಿಜೆಪಿ ಸಂಘಟನಾ ಬಲ ಬಳಸಿಕೊಳ್ಳಲು ಭೂಮಿಕೆ ಸಿದ್ಧಪಡಿಸಿದೆ. ಲಂಬಾಣಿ (ಬಂಜಾರ) ಸಮುದಾಯದ ಆರಾಧ್ಯದೈವ ಸಂತ ಸೇವಾಲಾಲ್ ಹೆಸರಿನಲ್ಲಿ ಬೃಹತ್ ಸಮಾವೇಶ ಸಂಘಟಿಸಲು ಚಿಂತನೆ ನಡೆಸಿದೆ. ಸಂತ ಸೇವಾಲಾಲ್ ಜನ್ಮ ಸ್ಥಳವಾದ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪದಲ್ಲಿ ಈ ಸಮಾವೇಶ ಆಯೋಜನೆಗೆ ರೂಪರೇಷೆ ತಯಾರಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರತ್ಯುತ್ತರಕ್ಕೆ ಸಜ್ಜು:ಮಹತ್ವದ ನಿರ್ಧಾರ ಹಾಗೂ ಯೋಜನೆಗಳ ನೆರವಿನ ಫಲಾನುಭವಿಗಳು ಒಳಗೊಂಡು ಲಕ್ಷಾಂತರ ಜನರನ್ನು ಸೇರಿಸಿ, ಸಿದ್ದರಾಮೋತ್ಸವದಿಂದ ಬೀಗುತ್ತಿರುವ ಕಾಂಗ್ರೆಸ್​ಗೆ ಪ್ರತ್ಯುತ್ತರಿಲು ಕಮಲಪಡೆ ಸಜ್ಜಾಗುತ್ತಿದೆ. ಅಲೆಮಾರಿ ಸಮುದಾಯಗಳ ಪೈಕಿ ದೊಡ್ಡ ಸಂಖ್ಯೆಯಲ್ಲಿರುವ ತಾಂಡಾ ನಿವಾಸಿಗಳ ದೀರ್ಘಾವಧಿ ಬೇಡಿಕೆಯೊಂದು ಈ ಸಮಾವೇಶದಲ್ಲಿ ಈಡೇರಲಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಅಧಿಕೃತವಾಗಿ ಘೋಷಿಸುವ ಪ್ರಕ್ರಿಯೆಗಳನ್ನು ಸರ್ಕಾರ ಚುರುಕುಗೊಳಿಸಿದ್ದು, ಇದೇ ಸಮಾವೇಶದಲ್ಲಿ ಪ್ರಕಟಿಸಲಿದೆ. ಅಷ್ಟೇ ಅಲ್ಲ, 50 ಸಾವಿರ ಜನರಿಗೆ ಹಕ್ಕು ದಾಖಲೆ ಪತ್ರ ವಿತರಿಸಲಿದೆ. ಅಲೆಮಾರಿ ಬದುಕಿಗೆ ಶಾಶ್ವತ ನೆಲೆ ಒದಗಿಸಿದ ಶ್ರೇಯಸ್ಸು ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ಹೆಣೆದಿದೆ.
ವ್ಯವಸ್ಥಿತ ಪ್ಲ್ಯಾನ್​:ನಿರ್ಲಕ್ಷಿತ, ಅಲೆಮಾರಿ, ಬುಡಕಟ್ಟು ಸಮುದಾಯಗಳನ್ನು ಒಲಿಸಿಕೊಂಡು ಸರ್ಕಾರ, ಪಕ್ಷದ ವರ್ಚಸ್ಸು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಲು ಪ್ಲಾ್ಯನ್ ಇದಾಗಿದೆ. ಕೈಯಲ್ಲಿರುವ ಅಧಿಕಾರ ದಂಡವನ್ನು ಉಪಯೋಗಿಸಿಕೊಂಡು ಜನರಿಗೆ ಹತ್ತಿರವಾಗಿ ಕಳಾಹೀನ ಸಂಘಟನೆಯಲ್ಲಿ ಚೈತನ್ಯ, ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಮುಂದಾಗಿದೆ. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಪೈಕಿ ಎಡ ಸಮುದಾಯ ವಾಲಿದೆ. ಈ ಒಲವು ಖಾತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮೊರೆ ಹೋಗಿದೆ. ರಾಜಕೀಯ ಅಧಿಕಾರವೇ ಪಕ್ಷಕ್ಕೆ ಮುಖ್ಯವಲ್ಲ. ಜನರ ಆಶೋತ್ತರಗಳಿಗೆ ಸ್ಪಂದನೆ, ರಾಜ್ಯದ ಸಮಗ್ರ ಅಭಿವೃದ್ಧಿ ಮುಖ್ಯವೆಂದು ಪಕ್ಷದ ನಾಯಕರಿಗೆ ಹೇಳಿಕೊಳ್ಳಲು ಅವಕಾಶವಾಗಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಸದ್ಯದ ಪ್ರಗತಿ:ಕಂದಾಯ ಗ್ರಾಮ ಮಾನ್ಯತೆ ನೀಡಿ ಅಧಿಸೂಚನೆ ಹೊರಡಿಸುವುದಕ್ಕೆ 50 ಕುಟುಂಬಗಳು, 250 ಜನಸಂಖ್ಯೆ ಹಾಗೂ 100 ಎಕರೆ ಜಮೀನು ಮಾನದಂಡವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ. ಲಂಬಾಣಿ (ಬಂಜಾರ) ಸಮುದಾಯದ ಬೇಡಿಕೆಗೆ ಸ್ಪಂದಿಸಿ, ಈಗಾಗಲೆ 2091 ತಾಂಡಾಗಳಿಗೆ ಪ್ರಾಥಮಿಕ, 1166 ಅಂತಿಮ ಅಧಿಸೂಚನೆ ಹೊರಡಿಸಿದೆ. ಅಲ್ಲದೆ, ಹೊಸದಾಗಿ 925 ತಾಂಡಾಗಳು ಪ್ರಾಥಮಿಕ ಅಧಿಸೂಚನೆ ಸೇರಿವೆ. ಏಕ ಕಾಲಕ್ಕೆ 2,000 ತಾಂಡಾಗಳೆಂದು ಅಧಿಕೃತವಾಗಿ ಘೋಷಿಸಿ, 50 ಸಾವಿರ ಜನರಿಗೆ ಹಕ್ಕುಪತ್ರ ನೀಡುವ ಆಡಳಿತಾತ್ಮಕ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಕಂದಾಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ವಿಶೇಷ ಅವಕಾಶ:ಕಂದಾಯ ಗ್ರಾಮದ ಪಟ್ಟ ಪಡೆದ ತಾಂಡಾ ನಿವಾಸಿಗಳಿಗೆ ಹಕ್ಕು ದಾಖಲೆ ಪತ್ರ ನೀಡಿದರಷ್ಟೇ ಸಾಕಾಗದು. ಸರ್ಕಾರ, ಬ್ಯಾಂಕ್​ಗಳ ಸಾಲ-ಸವಲತ್ತು ಪಡೆಯಲು ಹಕ್ಕುಪತ್ರದ ಆಧಾರದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರತಿ ದಿನ ಒಂದು ತಾಸು ಇವರ ನೋಂದಣಿಗೆ ಮೀಸಲಿಟ್ಟು ವಿಶೇಷ ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಹಕ್ಕು ದಾಖಲೆಪತ್ರ ಪಡೆದ 50 ಸಾವಿರ ಜನರು ಉಪ ನೋಂದಣಾಧಿಕಾರಿ ಕಚೇರಿಗೆ ಧಾವಿಸಿದರೆ ದೈನಂದಿನ ಕೆಲಸಕ್ಕೆ ಅಡಚಣೆ, ನೋಂದಣಿ ವಿಳಂಬ ತಪ್ಪಿಸುವುದು ವಿಶೇಷ ಉಪಕ್ರಮದ ಉದ್ದೇಶ ಎಂದು ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರಾದ ಎಂಟಿಬಿ ನಾಗರಾಜು, ಗೋವಿಂದ ಕಾರಜೋಳ ಜತೆಗೂಡಿ ಭಾನುವಾರ ಗಾಂಧಿ ಭವನದ ಬಳಿ ಇರುವ ಖಾದಿ ಎಂಪೋರಿಯಂನಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸಿದರು. ಸಂಕಷ್ಟದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಂಘ- ಸಂಸ್ಥೆಗಳಿಗೆ ಆರ್ಥಿಕ ಬಲ ನೀಡಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸುವಂತೆ ಮುಖ್ಯಮಂತ್ರಿ ಸೇರಿ ಎಲ್ಲ ಶಾಸಕರಿಗೆ ಎಂಟಿಬಿ ನಾಗರಾಜು ಪತ್ರ ಬರೆದಿದ್ದರು. ಹಾಗೆಯೇ, ಸ್ವತಃ ತಾವೇ ಅದಕ್ಕೆ ಮೇಲ್ಪಂಕ್ತಿ ಹಾಕಲು ಸಿಎಂರನ್ನು ಕರೆದೊಯ್ದು ಖಾದಿ ಉತ್ಪನ್ನಗಳನ್ನು ಖರೀದಿಸಿದರು. 3200 ರೂ. ಮೊತ್ತದ ಖಾದಿ ಬಟ್ಟೆಯನ್ನು ಸಿಎಂ ಖರೀದಿಸಿದರು.
ಕಾಂತಾರ: ಶುಕ್ರವಾರಕ್ಕೂ ಭಾನುವಾರಕ್ಕೂ ಅಜಗಜಾಂತರ; ಭರ್ಜರಿ ರೆಸ್ಪಾನ್ಸ್ ಬಗ್ಗೆ ಇಲ್ಲಿದೆ ಅಧಿಕೃತ ಮಾಹಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
