ಉಡುಪಿ:ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್​ ಆರೋಪ ಹೊರಿಸಿ, ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಶವವನ್ನು ಕೊನೆಗೂ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.
ನಿನ್ನೆ ಉಡುಪಿಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಬಳಿಯ ಶಾಂಭವಿ ಹೋಟೆಲ್ಸ್ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್​ನ ರೂಂ ನಂಬರ್ 207ರಲ್ಲಿ ಸಂತೋಷ್​ ಶವವಾಗಿ ಪತ್ತೆಯಾಗಿದ್ದರು. ಆದರೆ ನಿನ್ನೆಯೇ ಅವರ ಶವಪರೀಕ್ಷೆ ಮಾಡಿಸಲು ಕುಟುಂಬಸ್ಥರಿಂದ ವಿರೋಧವಿತ್ತು. ಸಂತೋಷ್ ಸಹೋದರ ಬರುವವರೆಗೂ ಶವ ಲಾಡ್ಜ್​ನಲ್ಲೇ ಇರಲಿ ಎಂದು ಅವರ ಪತ್ನಿಯೂ ಒತ್ತಾಯಿಸಿದ್ದರು. ಹೀಗಾಗಿ ನಿನ್ನೆ ಪೋಸ್ಟ್​ ಮಾರ್ಟಂ ಆಗಿರಲಿಲ್ಲ.
ಇಂದು ಸಂತೋಷ್ ಸಾವಿಗೀಡಾದ ಸುಮಾರು 40 ಗಂಟೆಗಳ ಬಳಿಕ ಮಣಿಪಾಲ ಆಸ್ಪತ್ರೆಯ ಪಕ್ಕದಲ್ಲಿರವು ಪೋಸ್ಟ್​ ಮಾರ್ಟಂ ಕೇಂದ್ರಕ್ಕೆ ಶವವನ್ನು ಕೊಂಡೊಯ್ಯಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್​​ನಲ್ಲಿ ಉಡುಪಿಯಿಂದ ಮಣಿಪಾಲಕ್ಕೆ ಸಂತೋಷ್ ಶವ ತರಲಾಗಿದ್ದು, ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಪಾಟೀಲ್ ಕುಟುಂಬಸ್ಥರೂ ಆಗಮಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಉಡುಪಿಗೆ ಬಂದಿದ್ದೇಕೆ?; ಉದ್ದೇಶ ಏನಿತ್ತು?

ರೌಡಿಯ ಹೆಂಡ್ತಿಗೇ ಮೆಸೇಜ್ ಮಾಡ್ತಿದ್ದ ಕಿಡಿಗೇಡಿ!; ಬಳಿಕ ರಸ್ತೆಯಲ್ಲಿದ್ದ ವಾಹನಗಳ ಗಾಜು ಪುಡಿಪುಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fifteen =
Remember me
