ಶ್ರೀರಂಗಪಟ್ಟಣ:ಕಾಮಾಕ್ಷಿಪಾಳ್ಯದಲ್ಲಿ ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು ಅವರ ಪುತ್ರನೇ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಕೃತ್ಯದ ಬಳಿಕ ಆರೋಪಿ ಶ್ರೀರಂಗಪಟ್ಟಣಕ್ಕೆ ತೆರಳಿ ಕಾವೇರಿ ನದಿ ಮೇಲ್ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ರಂಗನಾಥಪುರದ ನಿವಾಸಿ ಮೈಸೂರು ಮೂಲದ ಸಂತೋಷ್ (34) ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಈತನ ಎರಡೂ ಕಾಲು ಮುರಿದಿವೆ. ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಂಗಳವಾರ (ಜೂ. 9) ರಾತ್ರಿ ತನ್ನ ತಂದೆ ನರಸಿಂಹರಾಜು (70) ಮತ್ತು ತಾಯಿ ಸರಸ್ವತಿಯನ್ನು (65) ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿದೆ ಉತ್ತರ
ಸಂತೋಷ್ ಲೆಕ್ಕ ಪರಿಶೋಧಕನಾಗಿ ಕೆಲಸ ಮಾಡಿಕೊಂಡಿದ್ದು, ಕಾಮಾಕ್ಷಿಪಾಳ್ಯದಲ್ಲಿ ಕಚೇರಿ ತೆರೆದಿದ್ದ. ಉದ್ಯಮಿಯೊಬ್ಬರ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕ ಪರಿಶೋಧನೆಯನ್ನು ಸಂತೋಷ್ ನೋಡಿಕೊಳ್ಳುತ್ತಿದ್ದ. ನಾಗರಬಾವಿಯಲ್ಲಿ ನಿರ್ಮಿಸುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ 45 ಲಕ್ಷ ರೂ.ಗೆ ಮನೆ ಖರೀದಿಸಿದ್ದ. ಮುಂಗಡ 25 ಲಕ್ಷ ರೂ. ಕೊಟ್ಟು ಕರಾರು ಪತ್ರ ಬರೆಸಿದ್ದ. ಲೆಕ್ಕ ಪರಿಶೋಧನೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಉದ್ಯಮಿಗೆ ನಷ್ಟವಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಉದ್ಯಮಿ, ಮನೆ ನೋಂದಣಿ ಮಾಡಿಕೊಡುವುದಿಲ್ಲ ಹಾಗೂ ಮುಂಗಡ ಹಣ ವಾಪಸ್ ಕೊಡುವುದಿಲ್ಲ ಎಂದು ಸಂತೋಷ್‌ಗೆ ಹೇಳಿದ್ದ.
ಮನೆ ಖರೀದಿಯಲ್ಲಿ 25 ಲಕ್ಷ ರೂ. ಹೋಗಿರುವ ವಿಚಾರವನ್ನು ಸಂತೋಷ್ ತನ್ನ ತಂದೆ-ತಾಯಿ ಮುಂದೆ ಹೇಳಿ ಕಣ್ಣೀರಿಟ್ಟಿದ್ದ. ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರ ಮುಂದೆ ಹೇಳಿದ್ದ. ಈ ವೇಳೆ ಪಾಲಕರು, ‘ನೀನು ಸತ್ತ ಮೇಲೆ, ನಾವು ಬದುಕಿದ್ದು ಏನು ಮಾಡುವುದು. ನಮ್ಮನ್ನು ಸಾಯಿಸಿ, ನೀನು ಏನಾದರೂ ಮಾಡಿಕೋ’ ಎಂದಿದ್ದರು. ಹೀಗಾಗಿ ತಾನು ಮಂಗಳವಾರ ರಾತ್ರಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ತಂದೆಯ ಶವವನ್ನು ಪಡಸಾಲೆಯಲ್ಲಿ ಹಾಗೂ ತಾಯಿಯ ಶವವನ್ನು ಕೊಠಡಿಯ ಮಂಚದ ಮೇಲೆ ಹಾಸಿಗೆಯಲ್ಲಿ ಮಡಚಿಟ್ಟಿದ್ದೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನೂ ಓದಿಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…
ಹೆತ್ತವರನ್ನು ಹತ್ಯೆ ಮಾಡಿದ ಬಳಿಕ ಸಂತೋಷ್ ಮನೆಯಲ್ಲೇ ಚಾಕುವಿನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನಾದರೂ ಸಾಧ್ಯವಾಗಿಲ್ಲ. ಬುಧವಾರ ನಸುಕಿನ ಜಾವ ಬೈಕ್‌ನಲ್ಲಿ ಶ್ರೀರಂಗಪಟ್ಟಣಕ್ಕೆ ತೆರಳಿದ್ದ. ಕಾವೇರಿ ನದಿ ತೀರದಲ್ಲಿ ತಲೆಯ ಮುಡಿ ಮಾಡಿಸಿ, ಪಾಲಕರಿಗೆ ಪಿಂಡ ಪ್ರಧಾನ ಮಾಡಿದ್ದ. ಬಳಿಕ ತನ್ನ ಸ್ನೇಹಿತ ಹರೀಶ್ ಎಂಬಾತನಿಗೆ ಕರೆ ಮಾಡಿ ತಂದೆ-ತಾಯಿಯ ಕೊಲೆ ವಿಚಾರವನ್ನು ತಿಳಿಸಿದ್ದ. ಈ ವೇಳೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ೆನ್ ಸ್ವಿಚ್ ಆ್ ಮಾಡಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದ. ಕಾಮಾಕ್ಷಿಪಾಳ್ಯ ಪೊಲೀಸರು ಶ್ರೀರಂಗಪಟ್ಟಣ ಪೊಲೀಸರ ನೆರವಿನೊಂದಿಗೆ ಸಂತೋಷ್‌ಗಾಗಿ ತೀವ್ರ ಶೋಧ ನಡೆಸಿದ್ದರಾದರೂ ಸುಳಿವು ಸಿಕ್ಕಿರಲಿಲ್ಲ.
ಬುಧವಾರ ಸಂಜೆ 6.30ರಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯ ಉತ್ತರ ಕಾವೇರಿ ನದಿಯ ಮೇಲ್ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನದಿಯಲ್ಲಿ ಕಡಿಮೆ ಪ್ರಮಾಣದ ನೀರು ಇದ್ದ ಹಿನ್ನೆಲೆಯಲ್ಲಿ ಕಲ್ಲಿನ ಮೇಲೆ ಬಿದ್ದಿದ್ದ. ಸೇತುವೆಯಿಂದ ಬಿದ್ದ ರಭಸಕ್ಕೆ 2 ಕಾಲು ಮೂಳೆ ಮುರಿದಿದ್ದು, ಸಣ್ಣಪುಟ್ಟ ಗಾಯದಿಂದ ಅಸ್ವಸ್ಥಗೊಂಡಿದ್ದ. ಬಳಿಕ ಸ್ನೇಹಿತ ಹರೀಶ್‌ಗೆ ೆನ್ ಮಾಡಿ ತನ್ನ ಪರಿಸ್ಥಿತಿಯನ್ನು ತಿಳಿಸಿದ್ದ. ಘಟನಾ ಸ್ಥಳಕ್ಕೆ ಹೋಗಿ, ಸಂತೋಷ್‌ನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್‌ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಆರೋಪಿಯಿಂದ ಹೇಳಿಕೆ ಪಡೆಯಲಾಗಿದ್ದು, ತಂದೆ-ತಾಯಿ ಕೊಲೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಣ್ಣೀರು ತರಿಸುವಂತಿದೆ ಪ್ರಜ್ವಲ್​ ಜತೆಗಿನ ಕೊನೇ ವಾಟ್ಸ್​ಆ್ಯಪ್​ ಚಾಟ್​: ಈಡೇರಲೇ ಇಲ್ಲ ಚಿರು ಬಯಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
