ಮಂಡ್ಯ/ಮೈಸೂರು:ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ಮತ್ತು ಪೊಲೀಸ್​ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೋ ರವಿ ಹೆಸರು ಭಾರೀ ಸದ್ದು ಮಾಡುತ್ತಿದೆ. ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈತನ ಹಿನ್ನೆಲೆ ಬಗೆದಷ್ಟು ಆಳ ಎಂಬಂತಿದ್ದು, ಒಂದೊಂದೇ ಕರಾಳ ವಿಚಾರ ಬಯಲಾಗ್ತಿದೆ. ಸ್ಯಾಂಟ್ರೋ ರವಿ ಕೇವಲ ಪಿಂಪ್ ಮಾತ್ರವಲ್ಲ, ಕಾರು ಕಳ್ಳ ಕೂಡ!
ವರ್ಗಾವಣೆ ದಂಧೆಯ ಕಿಂಗ್​ಪಿನ್ ಆಗಿರುವ ಸ್ಯಾಂಟ್ರೋ ರವಿ ಬಳಿ ಸಚಿವರ ಲೆಟರ್​ಹೆಡ್​ಗಳು ಪತ್ತೆಯಾಗಿವೆ. ಇನ್​ಸ್ಪೆಕ್ಟರ್, ಎಸಿಪಿ, ಡಿವೈಎಸ್ಪಿಗಳಿಗೆ ಪ್ರಮೋಷನ್- ವರ್ಗಾವಣೆಯಲ್ಲಿ ಈತನೇ ಮಾಸ್ಟರ್​ ಅಂತೆ. ವರ್ಗಾವಣೆ ದಂಧೆಯಲ್ಲಿ ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದ. ಇದರಲ್ಲಿ ಹಲವು ಸಚಿವರು-ಶಾಸಕರು ಈತನ ಜತೆ ಶಾಮೀಲಾಗಿದ್ದರು ಎನ್ನಲಾಗಿದೆ. ಈತನ ಹುಟ್ಟೂರು ಮಂಡ್ಯ. ನಿಜವಾದ ಹೆಸರು ಮಂಜುನಾಥ.
ಆರಂಭದಲ್ಲಿ ಕಳ್ಳತನಕ್ಕಿಳಿದಿದ್ದ ಮಂಜುನಾಥ, ಕಾರು ಕಳ್ಳತನ ಮಾಡಿ ಮಂಡ್ಯದಲ್ಲಿ ಶೋಕಿ ಮಾಡುತ್ತಿದ್ದ. ಕಾರು ತೋರಿಸಿ ಕಾಲೇಜು ಹುಡುಗಿಯರನ್ನು ಪಟಾಯಿಸುತ್ತಿದ್ದ. ಈತನ ತಂದೆ ಅಬಕಾರಿ ಇಲಾಖೆಯಲ್ಲಿದ್ದ ಕಾರಣ ಮಂಜುನಾಥನದ್ದೇ ಕಾರು ಅಂದುಕೊಳ್ಳುತ್ತಿದ್ದರು ಜನ. ಪ್ರತಿ ವಾರ ಒಂದೊಂದು ಕಾರಲ್ಲಿ ಓಡಾಡುತ್ತಿದ್ದ. ಅಷ್ಟರಲ್ಲಿ ಮನೆಗೆ ನುಗ್ಗಿ ಮಂಜುನಾಥನನ್ನ ಪೊಲೀಸರು ಬಂಧಿಸಿದ ಬಳಿಕ ಕಾರಿನ ಅಸಲಿ ವಿಚಾರ ಜನರಿಗೆ ಗೊತ್ತಾಗಿದ್ದು.
ಆರಂಭದಲ್ಲಿ ಕಳ್ಳತನಕ್ಕಿಳಿದಿದ್ದ ಮಂಜುನಾಥ, ನಂತರದಲ್ಲಿ ಅಪಹರಣ ಮತ್ತು ವೇಶ್ಯಾವಾಟಿಕೆ ದಂಧೆಗೆ ಇಳಿದಿದ್ದ. ಹಲವು ಬಾರಿ ಈತ ಜೈಲಿಗೂ ಹೋಗಿ ಬಂದಿದ್ದಾನೆ. ತನ್ನ ಕೃತ್ಯಕ್ಕೆ ಸ್ಯಾಂಟ್ರೋ ಕಾರನ್ನೇ ಬಳಸುತ್ತಿದ್ದರಿಂದ ಈತನಿಗೆ ಸ್ಯಾಂಟ್ರೋ ರವಿ ಎಂದು ಬಂದಿತು. ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆಗ ಸ್ಯಾಂಟ್ರೋ ರವಿ ಇದ್ದದ್ದೇ ಬೇರೆ, ಈಗ ಇರೋದೆ ಬೇರೆ. ಆಗ ಅವನನ್ನು ನೋಡಿದವರು ಈಗ ಗುರುತು ಹಿಡಿಯಲ್ಲ. ಕೈಗೆ ಕಾಸು ಬಂದ ಮೇಲೆ ತನ್ನ ಸೌಂದರ್ಯಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದ ರವಿ. ಈಗ ತಲೆಗೆ ಟೋಕನ್ ಹಾಕಿಕೊಂಡು, ಕನ್ನಡಕ ಹಾಕಿಕೊಂಡು ಟಿಪ್‌ ಟಾಪ್‌ಗಿ ಕಾಣುವ ಸ್ಯಾಂಟ್ರೋ ರವಿ, ಓರ್ವ ಪಿಂಪ್​! ಮಂಡ್ಯ ಬಿಟ್ಟು ಮೈಸೂರಿಗೆ ತೆರಳಿದವ ವೇಶ್ಯೆವಾಟಿಕೆ ದಂಧೆಯಲ್ಲಿ ಚಿಗುರಿದ. ಹಿರಿಯ ಅಧಿಕಾರಿಗಳು, ರಾಜಕಾರಣಿಗಳಿಗೆ ಯುವತಿಯರನ್ನು ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.
ಪಿಯುಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ 1995ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸ್ಯಾಂಟ್ರೋ ರವಿ, ಪುಡಿರೌಡಿಗಳ ಜೊತೆ ಸೇರಿ ಅಸಭ್ಯತನ ಮೆರೆಯುತ್ತಿದ್ದ. 2000ನೇ ಇಸವಿಯಿಂದಲೂ ಸ್ಯಾಂಟ್ರೋ ರವಿ ದಂಧೆ ಮಾಡುತ್ತಿದ್ದ. ಮೈಸೂರು, ಬೆಂಗಳೂರು ಸೇರಿ ನಾನಾ ಕಡೆ ಈತನ ವಿರುದ್ಧ ಪ್ರಕರಣಗಳಿವೆ. ಹಲವು ಬಾರಿ ಜೈಲಿಗೂ ಹೋಗಿ ಬಂದಿದ್ದಾನೆ. ತನ್ನ ಕೃತ್ಯ ಬಯಲು‌ ಮಾಡಿದವರ ವಿರುದ್ಧ ರಾಜಕೀಯ ಪ್ರಭಾವ ಬಳಸಿ ಕೇಸ್‌ ದಾಖಲಿಸುತ್ತಿದ್ದ. ಇಂದು ಹೆಮ್ಮರವಾಗಿ ಬೆಳೆದಿರುವ ಸ್ಯಾಂಟ್ರೋ ರವಿಗೆ ಬೆಂಗಳೂರಿನಲ್ಲಿ 3 ಮನೆ, ವಿಲ್ಸನ್‌ ಗಾರ್ಡನ್‌, ಆರ್‌ಆರ್‌ ನಗರ ಹಾಗೂ ಮಲ್ಲೇಶ್ವರಂನಲ್ಲೂ ಮನೆಗಳಿವೆ. ಮೈಸೂರಿನಲ್ಲೂ ಮನೆಗಳಿವೆ ಎಂದು ತಿಳಿದುಬಂದಿದೆ. ಮೈಸೂರಿನ ಯುವತಿಯೊಬ್ಬಳು ರವಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಜಾಮೀನಿಗೂ ಅರ್ಜಿ ಸಲ್ಲಿಸಿದ್ದಾನೆ. ಮೈಸೂರು ಪೊಲೀಸರು ವಿಶೇಷ ತಂಡ ರಚಿಸಿ ಸ್ಯಾಂಟ್ರೋ ರವಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ನು ಸಮ್ಮಿಶ್ರ ಸರ್ಕಾರ ಕೆಡವಲು ಬಾಂಬೆಗೆ ಹೋಗಿದ್ದ ರಾಜಕಾರಣಿಗಳ ಜೊತೆ 12 ಹುಡುಗಿಯರನ್ನು ಸ್ಯಾಂಟ್ರೋ ರವಿಯೇ ಕಳುಹಿಸಿದ್ದ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇದು ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸ್ಯಾಂಟ್ರೋ ರವಿ ಹೆಸರು ಹೇಳುತ್ತಲೇ ಹೊಸ ಬಾಂಬ್​ ಸಿಡಿಸಿದ ಎಚ್​ಡಿಕೆ! ಈ ಸತ್ಯ ಹೇಳ್ತೀರಾ ಸಿಎಂ ಬೊಮ್ಮಾಯಿ ಅವರೇ?

ಉಡುಪಿಯಲ್ಲೊಂದು ನಿಜ ಕಾಂತಾರ? ಕೋಲ ನಡೆಯುವಾಗಲೇ ಸಾವು! ಕೋರ್ಟ್ ಮೆಟ್ಟಿಲೇರಿದವನ ತೀರ್ಮಾನ ದೈವ ಮಾಡಿತೇ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + twelve =
Remember me
