ಬೆಂಗಳೂರು:ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಕಂಬಳವೊಂದಕ್ಕೆ ಅತಿಥಿಯಾಗಿ ಹೋಗಿದ್ದ ಬಿಗ್​ಬಾಸ್​ ಬೆಡಗಿ ಸಾನ್ಯಾ ಅಯ್ಯರ್ ಮತ್ತು ಗೆಳತಿಯರ ಜೊತೆ ಯಾರೋ ಅಸಭ್ಯವಾಗಿ ವರ್ತಿಸಿದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಸಾನ್ಯಾ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಿಗ್​ಬಾಸ್​ ಸೀಸನ್​ 9ರ ಸ್ಫರ್ಧಿ ಹಾಗೂ ‘ಪುಟ್ಟಗೌರಿ’ ಧಾರಾವಾಹಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜ. 28ರ ಶನಿವಾರ ನಡೆದ ಕೋಟಿ-ಚೆನ್ನಯ ಜೋಡುಕೆರೆ ಕಂಬಳಕ್ಕೆ ಅತಿಥಿಯಾಗಿ ತೆರಳಿದ್ದರು. ಅದೇ ದಿನ ಮಧ್ಯರಾತ್ರಿ ಸ್ನೇಹಿತರೊಡನೆ ಮತ್ತೆ ಕಂಬಳ ವೀಕ್ಷಣೆಗೆ ಸಾನ್ಯಾ ಹೋಗಿದ್ದರು.
ಆಗ ಕಂಬಳ ವೀಕ್ಷಣೆ ವೇಳೆ ಯುವಕನೊಬ್ಬ ಸೆಲ್ಫಿ ತೆಗೆಯುವಾಗ ಸಾನ್ಯಾ ಮತ್ತು ಸ್ನೇಹಿತೆಯರ ಕೈ ಹಿಡಿದು ಎಳೆದಿದ್ದರಿಂದ ಆಕ್ರೋಶಗೊಂಡ ಸಾನ್ಯಾ ಅಲ್ಲಿಯೇ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವಕನೂ ಸಾನ್ಯಾ ಕೆನ್ನೆಗೆ ಬಾರಿಸಿದ್ದಾನೆ ಎನ್ನಲಾಗಿತ್ತು. ಈ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಸಾನ್ಯಾ ಅಂದಿನ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.
ಜ.28ನೇ ತಾರೀಕು ಪುತ್ತೂರಿಗೆ ಕಂಬಳ ನೋಡಲು ಅತಿಥಿಯಾಗಿ ಹೋಗಿದ್ದೆ. ಮೊದಲು ಸರಿಯಾಗಿ ಕಂಬಳ ನೋಡಲು ಆಗದ್ದರಿಂದ ನಂತರ ಮತ್ತೊಮ್ಮೆ ಕಂಬಳ ನೋಡಲು ಸ್ನೇಹಿತೆಯರ ಜೊತೆ ಹೋಗಿದ್ದೆ. ನಶೆಯಲ್ಲಿದ್ದ ಯುವಕ ನನ್ನ ಸ್ನೇಹಿತೆಯರ ಕೈ ಹಿಡಿದು ಎಳೆದ, ಆ ಯುವಕ ಕುಡಿದ ಮತ್ತಲ್ಲಿ ಆ ರೀತಿ ವರ್ತಿಸಿದ್ದ, ನನಗೆ ಆ ಸಂದರ್ಭದಲ್ಲಿ ಭಯ ಆಗಿತ್ತು. ಅಲ್ಲಿರುವ ಮುಖ್ಯ ಆಯೋಜಕರಿಗೂ ಈ ವಿಚಾರ ತಡವಾಗಿ ತಿಳಿಯಿತು. ಆ ಯುವಕ ಯಾರು, ಯಾವ ಊರು, ಎಲ್ಲಿ ಹೋದ ಗೊತ್ತಿಲ್ಲ. ಆ ಯುವಕ ನನಗೆ ಹೊಡೆದ, ನಾನು ಅವನಿಗೆ ಕಪಾಳಮೋಕ್ಷ ಮಾಡಿದೆ ಎಂಬುದೆಲ್ಲ ಸುಳ್ಳು ಎಂದು ಸಾನ್ಯಾ ಸ್ಪಷ್ಟನೆ ನೀಡಿದ್ದು, ಹಾಗಂತ ಹೇಗೆ ಸುದ್ದಿ ಹಬ್ಬಿತೋ ಗೊತ್ತಿಲ್ಲ ಎಂದಿದ್ದಾನೆ.
ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?
ಚಿಕಿತ್ಸೆಗೆಂದು ದಾಖಲಾದವಳ ಎರಡೂ ಕಿಡ್ನಿ ಕದ್ರು; ‘ನೀನಿನ್ನು ಇದ್ರೂ ಅಷ್ಟೇ, ಸತ್ರೂ ಅಷ್ಟೇ’ ಅಂತ ಪತ್ನಿ 3 ಮಕ್ಕಳ ಬಿಟ್ಟುಹೋದ ಪತಿ!
Sign in to your account
Please enter an answer in digits:5 × 4 =
Remember me
