ಬೆಂಗಳೂರು:ಕ್ಷೇತ್ರದ ಮೂಲಸೌಕರ್ಯಗಳೇ ಮೊದಲ ಆದ್ಯತೆಯಾಗಿದ್ದು, ಡಬ್ಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಮತದಾರರು ಮುಕ್ತ ಮನಸ್ಸಿನಿಂದ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಮತದಾರರಿಗೆ ಮನವಿ ಮಾಡಿದರು. ಶನಿವಾರ ಕ್ಷೇತ್ರದ ಜಕ್ಕರಾಯನ ಕೆರೆಯ ಸುಭಾಷ್ ವಾರ್ಡ್ ಸುತ್ತಲಿನ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ಈ ವೇಳೆ ಕ್ಷೇತ್ರದ ಮತದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಸಪ್ತಗಿರಿಗೌಡ ಎದುರು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು, ತಮ್ಮನ್ನು ಈ ಬಾರಿ ಆಯ್ಕೆ ಮಾಡಿದರೆ ಕಾಲಮಿತಿಯೊಳಗೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕ್ಷೇತ್ರದ ಅನೇಕ ಕಡೆ ರೈಲ್ವೆ ಅಂಡ‌ ಪಾಸ್‌ ನಿರ್ಮಾಣ ಮಾಡಬೇಕು ಎಂದು ಕೆಲವರು ಮನವಿ ಮಾಡಿಕೊಂಡಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಂತಹ ಕಡೆ ನಿರ್ಮಿಸಿ ಕೊಡುವುದಾಗಿ ಹೇಳಿದರು.
ಸಪ್ತಗಿರಿಗೌಡ ಅವರಿಗೆ ಬಿಬಿಎಂಪಿ ಮಾಜಿ ಸದಸ್ಯ ಗೋವಿಂದರಾಜ್ ಪುತ್ರ ಶ್ರೀನಿವಾಸ್, ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಆನಂದ್, ಮುಖಂಡರಾದ ಕುಮರೇಶ್‌, ವೀರೇಶ್ ಮತ್ತಿತರರು ಪ್ರಚಾರದ ವೇಳೆ ಸಾಥ್ ನೀಡಿದರು.ಇದಕ್ಕೂ ಮುನ್ನ ಕಾರ್ಯಕರ್ತರ ಜತೆಗೂಡಿ ಕ್ಷೇತ್ರದ ಆರ್‌ಟಿ ಸ್ಟ್ರೀಟ್, ಲಿಂಕ್ ಮುಖ್ಯರಸ್ತೆ, ಪೈಪ್ ಲೈನ್ ರಸ್ತೆ, ಶಿರೂರು ಪಾರ್ಕ್, ಸುಜಾತ ಟಾಕೀಸ್ ಹಿಂಭಾಗ ಸೇರಿ ಮತ್ತಿತರ ಕಡೆ ಬೆಳಗ್ಗೆಯಿಂದಲೇ ಬಿರುಸಿನ ಮತಯಾಚನೆ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
