ಬೆಂಗಳೂರು:ಉದ್ಯಮಿ, ಕಾಂಗ್ರೆಸ್​ ಮುಖಂಡ ಯೂಸುಫ್​ ಶರೀಪ್​ ಅಲಿಯಾಸ್​ ಕೆಜಿಎಫ್​ ಬಾಬು ಮನೆ ಮೇಲೆ ಆದಾಯ ತೆರಿಗೆ ಇಲಾಖೆ(IT) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಳಗ್ಗೆ 6 ಘಂಟೆ ಸುಮಾರಿಗೆ ಹೈಗ್ರೌಂಡ್ಸ್​ ಬಳಿ ಇರುವ ರುಕ್ಸಾನಾ ಪ್ಯಾಲೇಸ್​ ಮೇಲೆ ದಾಳಿ ನಡೆದಿದ್ದು ಮೂರು ಕಾರುಗಳಲ್ಲಿ ಬಂದಿದ್ದ IT ಅಧಿಕಾರಿಗಳ ತಂಡವು ಲೆಕ್ಕ ಪತ್ರ ಪರಿಶೀಲನೆಯಲ್ಲಿ ತೊಡಗಿದೆ.
ದಾಳಿ ವೇಳೆ ಸುಮಾರು 2,000 ಸಾವಿರಕ್ಕೂ ಹೆಚ್ಚು ಡಿಮ್ಯಾಂಡ್​ ಡ್ರಾಫ್ಟ್​(DD) ಹಾಗೂ 5,000 ಸಾವಿರ ರೇಷ್ಮೆ ಸೀರೆ ದೊರೆತಿದ್ದು ಇವುಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ; ಚುನಾವಣಾ ಸಮಯದಲ್ಲಿ ಶಾಕ್!
ಉಮ್ರಾ ಪೌಂಡೇಶನ್​ ಹೆಸರಿನಲ್ಲಿ ತಲಾ 1,105 ಸಾವಿರ ರೂ ಮೌಲ್ಯದ ಡಿಡಿ ಹಾಗೂ 5,000 ಸಾವಿರ ರೂ ಬೆಲೆಯ ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಡಿಡಿ ಮೇಲೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳ ಹೆಸರನ್ನು ನಮೂದಿಸಲಾಗಿತ್ತು ಎಂದು ತಿಳಿದು ಬಂದಿದೆ.
ಇನ್ನು ಕೆಜಿಎಫ್​ ಬಾಭು ಮನೆ ಮೇಲೆ ಐಟಿ ದಾಳಿಯಾಗಿರುವ ವಿಷಯ ತಿಳಿದು ಅವರ ನಿವಾಸದ ಬಳಿ ಅಭಿಮಾನಿಗಳು ಜಮಾಯಿಸಿದ್ದು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಭಯಗೊಂಡು ಅವರ ಮನೆ ಮೇಲೆ ದಾಳಿ ಮಾಡಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಕಾರಣ ಪೊಲೀಸರು ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ಮಾಡಿ ಪರಿಸ್ಥಿತಿಯನ್ನು ಹತ್ತೋಟಿಗೆ ತಂದಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
