ಬೆಂಗಳೂರು:ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ ವಾಸಕ್ಕೆ ಸಿದ್ಧ ಇರುವ ಪ್ಲ್ಯಾಟ್​ ಅನ್ನು​ ಬಾಡಿಗೆಗೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಸೀರೆ ಸಗಟು ವ್ಯಾಪಾರಿಗಳನ್ನು ಮನೆಗೆ ಕರೆಸಿಕೊಂಡು ಮಾಡಬಾರದ್ದನ್ನು ಮಾಡಿ ಎಸ್ಕೇಪ್​ ಆಗುತ್ತಿದ್ದಳು. ಇದೀಗ ಕೊನೆಗೂ ಸಂಪಿಗೇಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಇಂದಿರಾನಗರದ ಎಚ್​.ಶಶಿಕಲಾ (45) ಬಂಧಿತೆ. ಪತಿಯಿಂದ ದೂರವಾಗಿದ್ದು, ಇಬ್ಬರು ಚಿಕ್ಕ ಮಕ್ಕಳನ್ನು ಅಕ್ಕನ ಮನೆಯಲ್ಲಿ ಬಿಟ್ಟಿದ್ದಾಳೆ. ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಈಕೆ ಖತರ್ನಾಕ್​ ಐಡಿಯಾ ಕೇಳಿದ್ರೆ ಸೀರೆ ವ್ಯಾಪಾರಿಗಳು ಬೆಚ್ಚಿಬೀಳ್ತಾರೆ.
ಆಂಧ್ರಪ್ರದೇಶ ಮೂಲದ ಶಶಿಕಲಾ, ಸೀರೆ ಸಗಟು ವ್ಯಾಪಾರಿಗಳಿಗೆ ಕರೆ ಮಾಡಿ ನ್ಯಾಯಾಧೀಶರ ಮನೆಯಲ್ಲಿ ಮದುವೆ ಸಮಾರಂಭ ಇದೆ. 5 ಸಾವಿರದಿಂದ 5 ಲಕ್ಷ ರೂ. ಬೆಲೆ ಬಾಳುವ 20 ಲಕ್ಷ ರೂ. ಮೌಲ್ಯದ ಸೀರೆಗಳನ್ನು ತರುವಂತೆ ಸೂಚಿಸುತ್ತಿದ್ದಳು. ಸೀರೆಗಳನ್ನು ಆಯ್ಕೆ ಮಾಡಿ ನ್ಯಾಯಾಧೀಶರ ಕುಟುಂಬ ಸದಸ್ಯರಿಗೆ ತೋರಿಸಿ ಒಪ್ಪಿಗೆ ಪಡೆದು ಹಣ ಪಾವತಿ ಮಾಡುತ್ತೇನೆ ಎಂದು ಹೇಳಿ ಚೆಕ್​ ಕೊಡುತ್ತಿದ್ದಳು.
ಐಷಾರಾಮಿ ಪ್ಲ್ಯಾಟ್​ ನೋಡಿ ವ್ಯಾಪಾರಿಗಳು ಚೆಕ್​ ಪಡೆದು ಸೀರೆ ಕೊಟ್ಟುಹೋಗುತ್ತಿದ್ದರು. ಇತ್ತ ಸೀರೆಗಳನ್ನು ಕಾರಿಗೆ ತುಂಬಿಕೊಂಡು ಪ್ಲ್ಯಾಟ್​ ಖಾಲಿ ಮಾಡಿಕೊಂಡು ಹೋಗುತ್ತಿದ್ದಳು. ಶಶಿಕಲಾಳಿಂದ ಕರೆ ಬಾರದೆ ಇದ್ದಾಗ ವ್ಯಾಪಾರಿಗಳು ವಾಪಸ್​ ಪ್ಲ್ಯಾಟ್​ಗೆ ಬಂದು ನೋಡಿದಾಗ ಸಿಗುತ್ತಿರಲಿಲ್ಲ. ಇತ್ತ ಬ್ಯಾಂಕ್​ಗೆ ಚೆಕ್​ ಜಮೆ ಮಾಡಿದಾಗ ಬೌನ್ಸ್​ ಆಗುತ್ತಿದ್ದವು. ದಿಕ್ಕು ತೋಚದ ವ್ಯಾಪಾರಸ್ಥರು ಠಾಣೆಗಳಿಗೆ ದೂರು ಕೊಟ್ಟು ಸುಮ್ಮನಾಗುತ್ತಿದ್ದರು.
ಅ.29ರಂದು ಯುನಿಷೇರ್​ ಪನಮೆರಾ ಅಪಾರ್ಟ್​ಮೆಂಟ್​ನಲ್ಲಿನ ಪ್ಲ್ಯಾಟ್​ಗೆ ಆಂಧ್ರದ ಪೆಂಡಂ ಟೆಕ್ಸ್​ಟೈಲ್ಸ್​ ಮಾಲೀಕ ಪೆಂಡವ್​ ಎಂಬಾತನನ್ನು ಕರೆಸಿಕೊಂಡು ಸೀರೆ ಪಡೆದು ನ್ಯಾಯಾಧೀಶರಿಗೆ ತೋರಿಸಿ ಹಣ ತಂದು ಕೊಡುವುದಾಗಿ ಹೇಳಿ ಸೀರೆ ಸಮೇತ ಪರಾರಿಯಾಗಿದ್ದಳು.
ವ್ಯಾಪಾರಿ ನೀಡಿದ ದೂರಿನ ಮೇರೆಗೆ ಪ್ಲ್ಯಾಟ್​ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಮತ್ತು ಮೊಬೈಲ್​ ಕರೆಗಳ ಜಾಡು ಹಿಡಿದು ಎಫ್​​ಐಆರ್​ ದಾಖಲಿಸಿಕೊಂಡ ಇನ್​ಸ್ಪೆಕ್ಟರ್​ ಬಿ. ಮಲ್ಲಿಕಾರ್ಜುನ್​ ಮತ್ತವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ 120 ಸೀರೆಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ವೇಳೆ ದೇವನಹಳ್ಳಿ, ಬಾಣಸವಾಡಿ, ಬೈಯಪ್ಪನಹಳ್ಳಿ ಠಾಣೆಗಳಲ್ಲಿ ಈಕೆ ವಿರುದ್ಧ ದೂರು ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ್ಯಪ್​ ಮತ್ತು ವೆಬ್​ಸೈಟ್​ ಮೂಲಕ ಪ್ಲ್ಯಾಟ್​ ಬಾಡಿಗೆ ಪಡೆದು ಮಾಲೀಕರನ್ನು ಭೇಟಿ ಮಾಡುತ್ತಿದ್ದಳು. ಸುಳ್ಳು ವಿಳಾಸ ಕೊಟ್ಟು ಅವರು ಹೇಳಿದ ಬಾಡಿಗೆ ಹಣಕ್ಕೆ ಒಪ್ಪಿಕೊಂಡು ಮುಂಗಡ ಹಣಕ್ಕೆ ಚೆಕ್​ ಕೊಟ್ಟು ಮುಂದಿನ ವಾರ ಬ್ಯಾಂಕ್​ಗೆ ಜಮೆ ಮಾಡಿಕೊಳ್ಳುವಂತೆ ತಿಳಿಸಿ ಕೀ ಪಡೆಯುತ್ತಿದ್ದಳು. ಕದ್ದ ಸೀರೆಗಳನ್ನು ತಮಿಳುನಾಡು, ಆಂಧ್ರ ಮತ್ತು ಚಿಕ್ಕಪೇಟೆಯ ಅಂಗಡಿಗಳಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದಳು. ಈ ಅಂಗಡಿ ಮಾಲೀಕರಿಗೂ ವಿಳಾಸ ಕೊಡುತ್ತಿರಲಿಲ್ಲ.
ಪತ್ನಿಗೆ ಬೆಂಕಿ ಇಟ್ಟ ಗ್ರಾಮ ಪಂಚಾಯಿತಿ ಸದಸ್ಯ! ಬಿಚ್ಚಿಬೀಳಿಸುತ್ತೆ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
