ಬೆಂಗಳೂರು:ತಮಿಳುನಾಡು ರಾಜಕೀಯ ಮತ್ತೆ ಕರ್ನಾಟಕ ಸರ್ಕಾರ ಮತ್ತು ರಾಜಭವನದತ್ತ ಚಿತ್ತ ಹರಿಸಿದೆ. ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ನಗರದ ಕೇಂದ್ರ ಕಾರಾಗೃಹದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ದಿವಂಗತ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ, ಆ.14ಕ್ಕೆ ಬಿಡುಗಡೆ ಹೊಂದಲಿದ್ದಾರೆ ಎಂದು ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದೆ.
ಇದಕ್ಕೆ ಇಂಬು ನೀಡುವಂತೆ ತಮಿಳುನಾಡು ಬಿಜೆಪಿ ವಕ್ತಾರ ಆಶೀರ್ವಾದಮ್ ಆಚಾರಿ ಟ್ವೀಟ್ ಮಾಡಿದ್ದರು. ಇದೀಗ ಕರ್ನಾಟಕ ಸರ್ಕಾರ ಮತ್ತು ರಾಜಭವನ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲ ಬೆಳವಣಿಗೆ ನಡೆಯಲಿದೆ.
ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ದಾಖಲಿಸಿದ್ದ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ 4 ವರ್ಷ (48 ತಿಂಗಳು) ಜೈಲು ಶಿಕ್ಷೆಯಾಗಿತ್ತು. ಅದರಂತೆ 2017ರ ಫೆ.15ಕ್ಕೆ ಶಶಿಕಲಾ ಕೇಂದ್ರ ಕಾರಾಗೃಹಕ್ಕೆ ಹಾಜರಾಗಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. 2021ರ ಫೆ.15ಕ್ಕೆ ಶಿಕ್ಷೆ ಅವಧಿ ಪೂರ್ಣಗೊಳ್ಳಲಿದೆ. ಆದರೆ, ಇದೀಗ ಕಳೆದ ತಿಂಗಳಿಗೆ 40 ತಿಂಗಳ ಶಿಕ್ಷೆ ಮುಗಿಸಿದ್ದು, ಇನ್ನು 8 ತಿಂಗಳು ಶಿಕ್ಷೆ ಬಾಕಿ ಉಳಿದಿದೆ. ಆದರೆ, ಈ ಮೊದಲು 1996-97ರಲ್ಲಿ 13 ದಿನ ಮತ್ತು 2014ರಲ್ಲಿ 22 ದಿನಗಳ ಜೈಲು ಶಿಕ್ಷೆ ಅನುಭವಿಸಿದ್ದರು. ಇದನ್ನೇ ಲೆಕ್ಕ ಮಾಡಿದಾಗ 42 ತಿಂಗಳು ಶಿಕ್ಷೆ ಅನುಭವಿಸಿದಂತಾಗಿದೆ.
ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತು ಪಡಿಸಿದರೆ ಮತ್ಯಾವುದೇ ರಾಜ್ಯದಲ್ಲಿ ಬಿಜೆಪಿ ತನ್ನ ಪ್ರಬಲ್ಯ ಹೊಂದಿಲ್ಲ. ಇದೀಗ ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಮೃತಪಟ್ಟ ಮೇಲೆ ಯಾವುದೇ ರಾಜಕೀಯ ಮುಖಂಡರು ತಮ್ಮ ಪ್ರಾಬಲ್ಯ ಬೆಳೆಸಿಕೊಂಡಿಲ್ಲ. ಅದಕ್ಕಾಗಿ ಶಶಿಕಲಾ ಅವರನ್ನು ಸನ್ನಡತೆ ಆಧಾರದ ಮೇಲೆ ಹೊರತಂದು ಬಿಜೆಪಿ ತನ್ನ ಬುನಾದಿಯನ್ನು ಕಟ್ಟಲು ಮುಂದಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಏನಿದು ಬಿಜೆಪಿ ವಕ್ತಾರನ ಟ್ವಿಟ್:ಬಿಜೆಪಿ ವಕ್ತಾರ ಆಶೀರ್ವಾದಮ್ ಆಚಾರಿ, ಇತ್ತೀಚೆಗೆ ಟ್ವಿಟರ್​ನಲ್ಲಿ 2020ರ ಆ.14ಕ್ಕೆ ಶಶಿಕಲಾ ನಟರಾಜನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಲಿದ್ದಾರೆ. ಮುಂದಿನ ಬೆಳವಣಿಗೆ ಕಾದು ನೋಡಿ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಹೊರ ರಾಜಕೀಯ ಬೆಳವಣಿಗೆಗೆ ಚಾಲನೆ ದೊರೆತಿದೆ.
ಸ್ವಾತಂತ್ರೋತ್ಸವದಂದು ಬಿಡುಗಡೆ?
ಕಾನೂನಿನಲ್ಲಿ ಅವಕಾಶ ಇರುವಂತೆ 2017ರ ಅಕ್ಟೋಬರ್, 2018ರ ಮಾರ್ಚ್​ನಲ್ಲಿ ತಲಾ ಐದು ದಿನ ಮತ್ತು ತನ್ನ ಪತಿ ನಟರಾಜನ್ ಮೃತಪಟ್ಟಾಗ 12 ದಿನ ಪೆರೋಲ್ ಪಡೆದಿದ್ದರು. ಇದಲ್ಲದೆ, ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿದರೆ ಶಶಿಕಲಾ ಕೋರ್ಟ್ ವಿಧಿಸಿದ್ದ ಜೈಲುಶಿಕ್ಷೆಯಲ್ಲಿ ಬಹುತೇಕ ಅವಧಿ ಪೂರ್ಣಗೊಳಿಸಿದ್ದಾರೆ. ಇದೀಗ ಐದು ತಿಂಗಳು ಮಾತ್ರ ಬಾಕಿ ಇರುವುದರಿಂದ ಸನ್ನಡತೆ ಕೈದಿಯಾಗಿ ಬಿಡುಗಡೆಗೆ ಅರ್ಹರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇರುವುದರಿಂದ ಶಶಿಕಲಾ ಅವರನ್ನು ಸನ್ನಡತೆ ಕೈದಿಯಾಗಿ ಸ್ವಾತಂತ್ರ ದಿನದಂದು ಬಿಡುಗಡೆ ಮಾಡುವ ಸಾಧ್ಯತೆಗಳು ಇರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 2 =
Remember me
