ಮಂಗಳೂರು/ಬೆಂಗಳೂರು:ದಕ್ಷಿಣ ಕರ್ನಾಟಕದ ಆಯ್ದ ಸ್ಥಳಗಳಲ್ಲಿ ತುರಾಯಾ ಸ್ಯಾಟಲೈಟ್ ಫೋನ್​ಗಳ ಸಂಭಾಷಣೆ ದಿನೇದಿನೆ ಹೆಚ್ಚಾಗುತ್ತಿದ್ದು, ಉಗ್ರರು ಮತ್ತು ನಕ್ಸಲ್ ಚಟುವಟಿಕೆ ಬಲಗೊಳ್ಳುತ್ತಿದ್ದಿಯೇ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.
ಬೆಳ್ತಂಗಡಿಯ ಕೊಲ್ಲಿ ಕಾಡುಮನೆ ಗೆಸ್ಟ್ ಹೌಸ್ ಪರಿಸರ ಕಾಡು ಪ್ರದೇಶದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಅನ್ನು ಕಳೆದ 1 ತಿಂಗಳ ಹಿಂದೆ ಬಳಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಂದೆಡೆ ಈ ಪ್ರದೇಶವು ನಕ್ಸಲ್​ಪೀಡಿತವಾಗಿದ್ದು ಮತ್ತೆ ನಕ್ಸಲ್ ಚಟುವಟಿಕೆ ಸಕ್ರಿಯ ಗೊಂಡಿರ ಬಹುದೆಂದು ಎಂಬ ಅನುಮಾನದ ನಡುವೆ ಕಾರ್ಕಳದ ಮಾಳ ಪರಿಸರದಲ್ಲೂ ಅದೇ ಸ್ಯಾಟಲೈಟ್ ಬಳಕೆಯಾಗಿರುವ ಮಾಹಿತಿ ಹೊರಬಿದ್ದಿದೆ. ಇದು ಕೂಡ ನಕ್ಸಲ್​ಪೀಡಿತ ಪ್ರದೇಶ ಎಂಬುವುದು ಗಮನಾರ್ಹವಾಗಿದೆ.
ಈ ಬೆಳವಣಿಗೆಯ ನಡುವೆ ಶಿರಸಿ, ದಾವಣಗೆರೆ, ಶಿವಮೊಗ್ಗ, ಚಾಮರಾಜನಗರ ಸೇರಿ ದಕ್ಷಿಣ ಕರ್ನಾಟಕದ ಕೆಲವೆಡೆಗಳಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಬಳಕೆ ಮಾಡಲಾಗಿದೆ. ಅದರಲ್ಲೂ ಕಾಡುಪ್ರದೇಶ ಹಾಗೂ ನಿರ್ಜನ ಪ್ರದೇಶಗಳಲ್ಲಿ ಬಳಸಿರುವುದು ಕಂಡುಬಂದಿದೆ. ಬೇರೆ ಬೇರೆ ಸ್ಥಳಗಳಲ್ಲಿ ಹಲವು ದಿನಗಳ ಅಂತರದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ಪ್ರಕರಣದ ಹಿಂದೆ ತಂಡ ಸಕ್ರಿಯೆಗೊಂಡಿದೆ ಎಂಬ ಮಾಹಿತಿ ಬೆಳಕಿಗೆ ಬರುತ್ತಿದೆ.
ಉಗ್ರರೇ ಬಳಸಿದ ಖಚಿತತೆ ಇಲ್ಲ
ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದು ಕೆಲ ದಿನಗಳ ಹಿಂದೆಯೇ ಮಾಹಿತಿ ಲಭ್ಯವಾಗಿದೆ. ಉಗ್ರರೇ ಬಳಕೆ ಮಾಡಿದ್ದಾರೆ ಎಂಬುದು ಖಚಿತವಿಲ್ಲ. ವಿದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆಗೆ ನಿಷೇಧವಿಲ್ಲ. ವಿದೇಶಿಗರು ಪ್ರವಾಸದ ಮೇಲೆ ಭಾರತಕ್ಕೆ ಬಂದಾಗ ಜತೆಯಲ್ಲಿ ತರುತ್ತಾರೆ. ಕೆಲವೊಮ್ಮೆ ಇಲ್ಲಿ ಬಳಸಿದಾಗ ನಮಗೆ ಮಾಹಿತಿ ಸಿಗುತ್ತದೆ. ಕೆಲ ತಿಂಗಳ ಹಿಂದೆ ಮೈಸೂರು ಸುತ್ತಲ ಪ್ರದೇಶದಲ್ಲಿ ಸ್ಯಾಟಲೈಟ್ ಬಳಕೆ ಕಂಡುಬಂದಿದೆ. ಈ ಪ್ರಕರಣವನ್ನು ನಿರ್ಲಕ್ಷ್ಯ ಮಾಡದೆ ಫೋನ್ ಬಳಕೆದಾರರನ್ನು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಟ್ಸ್​ಆಪ್ ಕಾಲ್ ಬಳಕೆ
ಸ್ಯಾಟಲೈಟ್ ಫೋನ್ ಬಳಕೆಗೆ ನೋಂದಣಿ ಮಾಡಿಕೊಳ್ಳಬೇಕು ಮತ್ತು ಅದರ ಬೆಲೆ ಕನಿಷ್ಠ 80 ಸಾವಿರ ರೂ., 1 ಕರೆಗೆ 40 ರೂ. ಬೀಳುತ್ತದೆ. ಅಕ್ರಮವಾಗಿ ಬಳಕೆ ಮಾಡಿದರೆ ಸುಲಭವಾಗಿ ಮಾಹಿತಿ ಲಭ್ಯವಾಗುತ್ತದೆ. ಉಗ್ರರು ವಾಟ್ಸ್​ಆಪ್ ಕರೆಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಇದನ್ನು ಪತ್ತೆಹಚ್ಚುವುದು ಕಷ್ಟಸಾಧ್ಯವಾಗಿದೆ. ಇತ್ತೀಚಿನ ಉಗ್ರರ ಪ್ರಕರಣಗಳಲ್ಲಿ ಇಂಟರ್​ನೆಟ್ ಮತ್ತು ವಾಟ್ಸ್​ಆಪ್ ಕರೆಗಳನ್ನು ಬಳಸಿರುವ ಮಾಹಿತಿ ಲಭ್ಯವಾಗಿದೆ. ಸ್ಯಾಟಲೈಟ್ ಫೋನ್ ಬಳಕೆ ಸಂಬಂಧ ಕೇಂದ್ರ ಇಲಾಖೆಯಿಂದ ಗೌಪ್ಯ ಮಾಹಿತಿ ಬರುತ್ತದೆ. ಆಗ ತಕ್ಷಣ ಸಂಬಂಧ ಪಟ್ಟ ಜಿಲ್ಲಾ ಎಸ್​ಪಿಗಳಿಗೆ ಸೂಚನೆ ಕೊಟ್ಟು ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಹುತಾತ್ಮ ಕರ್ನಲ್​ ಸಂತೋಷ್​ ಬಾಬು ಪತ್ನಿಗೆ ಉನ್ನತ ಸರ್ಕಾರಿ ಹುದ್ದೆ ಜತೆಗೆ ಮತ್ತೊಂದು ಕೊಡುಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 8 =
Remember me
