|ಮೃತ್ಯುಂಜಯ ಕಪಗಲ್ಬೆಂಗಳೂರು
ಪ್ರಾಥಮಿಕ, ಮಾಧ್ಯಮಿಕ, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ವ್ಯಾಸಂಗದಲ್ಲಿ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ, ಪರಿಣಾಮಕಾರಿ ಅನುಷ್ಠಾನವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂತೃಪ್ತಿಗೆ ಪಾತ್ರವಾಗಿದೆ. ಭೌತಿಕ, ಆರ್ಥಿಕ ಪ್ರಗತಿಯಷ್ಟೇ ಅಲ್ಲ, ಮೇಲ್ಪಂಕ್ತಿಯಾಗುವ ಸಾಹಸಿಕ ಹೆಜ್ಜೆ ಹಾಗೂ ಆಮೂಲಾಗ್ರ ಸುಧಾರಣೆ ಮೂಲಕ ಉತ್ತಮ ಗುಣಮಟ್ಟಕ್ಕೆ ಒತ್ತು ನೀಡಿರುವುದು ಸಂಘದ ಗಮನ ಸೆಳೆದಿದೆ.
ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ (ಎಬಿಆರ್​ಎಸ್​ಎಂ) ಮೂರು ದಿನಗಳ ಎಂಟನೇ ರಾಷ್ಟ್ರೀಯ ಅಧಿವೇಶನದಲ್ಲಿ ‘ಕರ್ನಾಟಕ ಮಾದರಿ’ ಹೆಚ್ಚು ಫೋಕಸ್ ಆಗಿದೆ. ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಆಯೋಜಿತ ಈ ಸಮಾವೇಶವು ಭಾನುವಾರ ಸಂಪನ್ನವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ‘ಕರ್ನಾಟಕ ಮಾದರಿ’ ರಾಷ್ಟ್ರವ್ಯಾಪಿ ಬಿತ್ತರಿಸುವ ಸಂಕಲ್ಪ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸಲಹೆ: ಕರೊನಾ ಪಿಡುಗಿನ ಹಾವಳಿ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಿರ್ವಹಣೆ, ಕಲಿಕೆ ಮತ್ತು ಬೋಧನೆ ಸಾಮಗ್ರಿ, ಬಿಸಿಯೂಟದ ಜತೆಗೆ ಸತ್ವಯುತ ಆಹಾರ ಪೂರೈಕೆ, ಶಿಕ್ಷಕರ ಪಾಲ್ಗೊಳ್ಳುವಿಕೆ ಮತ್ತಿತರ ಕ್ರಮಗಳನ್ನು ಪ್ರತಿನಿಧಿಗಳಿಗೆ ವಿವರಿಸಲಾಗಿದೆ. ರಾಜ್ಯ ಸರ್ಕಾರದ ಪ್ರಯತ್ನ, ಉಪಕ್ರಮಗಳ ಬಗ್ಗೆ ಗೋಷ್ಠಿಗಳಲ್ಲಿ ಚರ್ಚೆ ಮೂಲಕ ಮಾತ್ರವಲ್ಲದೆ, ಉಪಕ್ರಮಗಳ ಮಾದರಿ ಪ್ರದರ್ಶನದ ಮಳಿಗೆಗಳನ್ನು ಸಂಘದ ಹಿರಿಯರು, ಪ್ರತಿನಿಧಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಎಸ್​ಒಪಿ ಅನುಷ್ಠಾನಕ್ಕೆ ಸಚಿವರು-18 ಇಲಾಖೆಗಳ ಸಹಭಾಗಿತ್ವ, ಇದೇ ಎಸ್​ಒಪಿ ಯುಪಿಎಸ್​ಸಿ ಅಳವಡಿಸಿಕೊಂಡಿದ್ದನ್ನು ಈ ಅಧಿವೇಶನ ಮೆಲುಕು ಹಾಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಮೇಲ್ಪಂಕ್ತಿಯಾಗಿದೆ. ಅನುಷ್ಠಾನದಲ್ಲಿ ಮುಂದಿರುವ ರಾಜ್ಯ ಸರ್ಕಾರದ ಹೆಚ್ಚು ಪ್ರಚಾರ ಪಡೆಯುವಲ್ಲಿ ಹಿಂದೆ ಬಿದ್ದಿದೆ. ರಾಷ್ಟ್ರವ್ಯಾಪಿ ಪ್ರಚಾರದ ಮೂಲಕ ಈ ಕ್ರಮಗಳನ್ನು ಆಸಕ್ತ ರಾಜ್ಯಗಳಲ್ಲಿ ವಿಸ್ತರಿಸಲು ಪ್ರೋತ್ಸಾಹಿಸುವ ಅಗತ್ಯವಿದೆ ಎಂಬ ಇಂಗಿತವನ್ನು ಸಂಘ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಬೌದ್ಧಿಕ ಪ್ರಮುಖ್ ಸುನೀಲ್ ಮೆಹತಾ ಹಾಗೂ ಹಿರಿಯ ಪ್ರಚಾರಕ ಸುರೇಶ್ ಸೋನಿ, ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಸಮಿತಿ ಸದಸ್ಯರಲ್ಲಿ ಒಬ್ಬರಾದ ಡಾ.ಎಂ.ಕೆ.ಶ್ರೀಧರ್, ಶಿಕ್ಷಣ ತಜ್ಞರು, ದೇಶದ ವಿವಿಧ ವಿವಿಗಳ ಕುಲಪತಿಗಳು, ಪ್ರಾಧ್ಯಾಪಕರು, ಶಿಕ್ಷಕರು ಸೇರಿ ನಾಲ್ಕು ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅನುಕರಣೀಯ ನಿಲುವು:ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ದೇಶದಲ್ಲೇ ಕರ್ನಾಟಕ ಮೊದಲು ಜಾರಿಗೆ ತಂದಿದ್ದು, ಪೂರಕ ವ್ಯವಸ್ಥೆಯನ್ನೂ ಮಾಡಿದೆ. ಕಾರ್ಯಾನುಭವದ ಪ್ರಕಾರ, ಲೋಪ-ದೋಷ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಅನುಕರಣೀಯ ನಿಲುವು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಕಾಲಕ್ಕೆ ಅಂಗೀಕರಿಸಿದ ಎರಡನೇ ಶಿಕ್ಷಣ ಆಯೋಗದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಭಾರಿ ವಿಳಂಬವಾಗಿ, ಹಲವು ಶಿಫಾರಸುಗಳು ಅಪ್ರಸ್ತುತ ಎನ್ನುವಂತಾಗಿದ್ದವು.
ಎರಡನೇ ಶಿಕ್ಷಣ ನೀತಿ 1986ರಲ್ಲೇ ಸಲ್ಲಿಕೆಯಾದರೆ, ಕ್ರಿಯಾಯೋಜನೆ ರೂಪಿಸಲು 1992ರಲ್ಲಿ ರಚನೆಯಾಯಿತು. ಪಠ್ಯಕ್ರಮ ಚೌಕಟ್ಟು, ಪರಿಷ್ಕರಣೆ ಇತ್ಯಾದಿಗಳೆಂದು ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ದಶಕವೇ ಹಿಡಿಯಿತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂಗೀಕರಿಸಿದ ರಾಷ್ಟ್ರೀಯ ಶಿಕ್ಷಣ ನೀತಿಗೂ ವಿಳಂಬದ ಗ್ರಹಣ ತಪ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದು, ಒಂದು ರಾಜ್ಯಕ್ಕೆ ಈ ಉತ್ಸಾಹ ಸೀಮಿತ ಸರಿಯಲ್ಲವೆಂದು ಅಧಿವೇಶನ ಪ್ರತಿಪಾದಿಸಿದೆ.
ಸಚಿವದ್ವಯರ ಪ್ರಸ್ತುತಿ:ಅಧಿವೇಶನದಲ್ಲಿ ನೂತನ ನೀತಿ ಜಾರಿಗೆ ಕೈಗೊಂಡ ಕ್ರಮಗಳ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿಚಾರ ಮಂಡಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಹಂತದ ಶಿಕ್ಷಣದಲ್ಲೂ ಈ ನೀತಿ ಜಾರಿಗೆ ಬರಲಿದೆ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿ, ಕೈಗೊಂಡ ಕ್ರಮಗಳನ್ನು ಸಾದರಪಡಿಸಿದ್ದಾರೆ. ಶಿಕ್ಷಣ ಕ್ಷೇತ್ರ ಮೊದಲ ಆದ್ಯತಾಪಟ್ಟಿಯಲ್ಲಿದೆ. ಎರಡೂ ಇಲಾಖೆಗಳು ಸಲ್ಲಿಸುವ ಪ್ರಸ್ತಾವನೆಗೆ ತ್ವರಿತ ಅನುಮೋದನೆ ನೀಡಲು ಬದ್ಧವೆಂದು ಸರ್ಕಾರ ಅಧಿವೇಶನದ ಗಮನಕ್ಕೆ ತಂದಿದೆ.

ಜಗತ್ತಿನ ಜನಸಂಖ್ಯೆ ಕೆಲವೇ ಗಂಟೆಗಳಲ್ಲಿ 800 ಕೋಟಿ; ಭಾರತ ಎಷ್ಟನೇ ಸ್ಥಾನದಲ್ಲಿ?

ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 19 =
Remember me
