ಬೆಳಗಾವಿ:ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ಸಿಡಿ ವಿಚಾರವಾಗಿ ಯಾವುದೇ ಕಾರಣಕ್ಕೂ ಏನನ್ನೂ ಕೇಳಬೇಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಎಂ.ಬಿ. ಪಾಟೀಲ್ ಮತ್ತು ರಾಮಲಿಂಗಾರೆಡ್ಡಿ ಜತೆ ಸಭೆ ನಡೆಸಿದ ಬಳಿಕ ಹೊರ ಬಂದ ಸತೀಶ್​ ಜಾರಕಿಹೊಳಿಯನ್ನು ಸಿಡಿ ಕೇಸ್​ ಕುರಿತು ಸುದ್ದಿಗಾರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸತೀಶ್​, ಆ ಹುಡುಗಿ ಪೋಷಕರು ಆರೋಪ ಮಾಡಿದ್ರೆ ನಾ ಏನು ಮಾಡ್ಲೀ? ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ಆ ಬಗ್ಗೆ ಏನೂ ಕೇಳಬೇಡಿ. ಪೋಷಕರ ಆರೋಪ, ಸಿಡಿ ವಿಚಾರ ಬಿಟ್ಟು ಬೇರೆ ಏನಾದರೂ ಕೇಳಿ ಎಂದು ಮನವಿ ಮಾಡಿದರು.ಸಿಡಿ ಕೇಸ್​ ಬಗ್ಗೆ ನೋಡಿಕೊಳ್ಳಲು ಕಾನೂನು ಇದೆ, ಪೊಲೀಸರಿದ್ದಾರೆ. ಅವರನ್ನು ರಕ್ಷಣೆ ಮಾಡೋದು ಪೊಲೀಸರ ಕೆಲಸ. ಪ್ರತಿದಿನ‌ ಅದನ್ನೇ ಹೇಳಿ ಹೇಳಿ ಸಾಕಾಗಿದೆ. ನಿಮ್ಮ ಕೈಮುಗಿಯುತ್ತೇನೆ, ಸಿಡಿ ವಿಚಾರ ಪ್ರಸ್ತಾಪಿಸಬೇಡಿ ಎಂದು ಸತೀಶ್​ ಜಾರಕಿಹೊಳಿ ಹೇಳಿದರು.ಇದನ್ನೂ ಓದಿರಿಕೋರ್ಟ್​ಗೆ ಬರಲು ಸಿಡಿ ಲೇಡಿಗೆ ಅನುಮತಿ ಸಿಕ್ತು! ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದ ಪ್ರಕರಣಕ್ಕೆ ಇಂದೇ ಕ್ಲೈಮಾಕ್ಸ್​?
ಇತ್ತ ಸಿಡಿ ಲೇಡಿಯ ನಡೆಯ ಭಾರೀ ಕುತೂಹಲ ಮೂಡಿಸಿದೆ. ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರ್ ಆಗ್ತೀನಿ ಎಂದು ಕೋರ್ಟ್​ಗೆ ಅರ್ಜಿ ಹಾಕಿರುವುದು ಬಾಲಚಂದ್ರ ಜಾರಕಿಹೊಳಿ‌ಗೆ ಟೆನ್ಷನ್​ ತರಿಸಿದೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆಯಿಂದ ರಹಸ್ಯ ಸ್ಥಳದಲ್ಲಿರುವ ಬಾಲಚಂದ್ರ ಜಾರಕಿಹೊಳಿ ವಕೀಲರು ಹಾಗೂ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಗದ್ದಲದ ನಡುವೆಯೂ ಕುಂದಾನಗರಿ ಲೋಕಸಭಾ ಉಪಸಮರ ಜೋರಾಗಿದೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಸತೀಶ್​ ಜಾರಕಿಹೊಳಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

ಜಾರಕಿಹೊಳಿ ಟೀಂ ಹತ್ತಿಕ್ಕುವ ಯೋಜನೆ ಬಿಜೆಪಿಯದ್ದು, ಸಿಎಂ ಮೌನ ಮುರಿಯಲಿ: ಮೋಟಮ್ಮ, ಜಯಮಾಲ, ಉಮಾಶ್ರೀ ಆಗ್ರಹ

ಪ್ರಿಯತಮೆಯ ಓಲೈಕೆಗಾಗಿ ಆಕೆಯ ಮಗುವನ್ನೇ ಕೊಂದು ಮೂಟೆಕಟ್ಟಿ ಎಸೆದ ಪ್ರಿಯಕರ! ಬೆಚ್ಚಿಬೀಳಿಸುತ್ತೆ ಈ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + ten =
Remember me
