ಬೆಳಗಾವಿ:ಸ್ಮಶಾನದಲ್ಲಿ ಊಟ, ತಿಂಡಿ ಮಾಡಿ ಅಲ್ಲೇ ಮಲಗುವ ಮೂಲಕ ಮೌಢ್ಯದ ವಿರುದ್ಧ ಹೋರಾಟ ನಡೆಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಮೌಢ್ಯತೆ ವಿರುದ್ಧ ಹೋರಾಡುತ್ತಿರುವ ಜಾರಕಿಹೊಳಿ, ತಾವು ಖರೀದಿಸಿರುವ ನೂತನ ಫಾರ್ಚುನರ್ ಕಾರಿಗೆ (KA-49, N-2023) ಸ್ಮಶಾನದಲ್ಲಿಯೇ ಚಾಲನೆ ನೀಡಲಿದ್ದಾರೆ. ಸದಾಶಿವ ನಗರದ ಸ್ಮಶಾನದಲ್ಲಿ ಜು.13ರ ಬೆಳಗ್ಗೆ 11ಕ್ಕೆ ಈ ಕಾರ್ಯಕ್ರಮ ನಡೆಯಲಿದ್ದು, ತಾವು ಓಡಾಡುವ ವಾಹನವನ್ನು ಸ್ಮಶಾನದಿಂದಲೇ ಉದ್ಘಾಟಿಸಲು ಮುಂದಾಗಿದ್ದಾರೆ.ಇದನ್ನೂ ಓದಿರಿಕ್ವಾರಂಟೈನ್ ಅಂದ್ರೆ ಹೀಗಿರಬೇಕು… ರಜೆಗೆ ಬಂದ ಸೈನಿಕರು ಹೊಲದಲ್ಲೇ ಏಕಾಂತ ವಾಸ
ಈ ಕಾರ್ಯಕ್ರಮದಲ್ಲಿ ನಾಡಿನ ಐವರು ಹೆಸರಾಂತ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ಇಲ್ಲ. ಫೇಸ್​ಬುಕ್​ ಮತ್ತು ಯೂಟ್ಯೂಬ್​ನಲ್ಲಿ ನೇರಪ್ರಸಾರ ಆಗಲಿದೆ.
ಹೊಸದಾಗಿ ಕಾರು, ಬೈಕ್​… ಹೀಗೆ ಯಾವುದೇ ವಾಹನ ಖರೀದಿಸಿದರೂ ಒಳ್ಳೆಯ ಮುಹೂರ್ತ ನೋಡಿ ದೇವಸ್ಥಾನದಲ್ಲಿ ಗಾಡಿಗೆ ಪೂಜೆ ಮಾಡಿಸುವುದು ರೂಢಿ. ಆದರೀಗ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ಮೌಢ್ಯತೆಗೆ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ.
ಕರೊನಾ ಸೋಂಕಿತ ಮೃತದೇಹವನ್ನು ಎಳೆದಾಡಿದ ನಾಯಿಗಳು… ಬೆಚ್ಚಿಬಿದ್ದ ಸ್ಥಳೀಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
