ಬೆಂಗಳೂರು:ರಾಜ್ಯದಲ್ಲಿ ಶನಿವಾರ ಹೊಸದಾಗಿ 7,184 ಕೋವಿಡ್-19 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಇದುವರೆಗಿನ ಸೋಂಕಿತರ ಪ್ರಮಾಣ ಒಟ್ಟಿಗೆ 7,58,574ಕ್ಕೆ ತಲುಪಿದೆ.
ಮತ್ತೊಂದೆಡೆ ಗುಣಮುಖರಾಗಿರುವವರ ಪೈಕಿ ಒಂದೇ ದಿನ 8,893 ಮಂದಿ ಆಸ್ಪತ್ರೆ ಹಾಗೂ ಕೋವಿಡ್​ ಕೇರ್ ಸೆಂಟರ್​ಗಳಿಂದ ಬಿಡುಗಡೆ ಆಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಇದುವರೆಗೆ ಗುಣವಾಗಿರುವವರ ಸಂಖ್ಯೆ ಒಟ್ಟು 6,37,481ಕ್ಕೆ ಏರಿಕೆಯಾಗಿದೆ.
ಅದಾಗ್ಯೂ ರಾಜ್ಯದಲ್ಲಿ 1,10,647 ಪ್ರಕರಣಗಳು ಸಕ್ರಿಯವಾಗಿದ್ದು, ಅವರಲ್ಲಿ ಗಂಭೀರ ರೋಗಲಕ್ಷಣಗಳಿರುವ 940 ಸೋಂಕಿತರು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇಸರದ ಸಂಗತಿ ಎಂದರೆ, ಸೋಂಕಿತರ ಪೈಕಿ ಶನಿವಾರ ಒಂದೇ ದಿನ 71 ಮಂದಿ ಕರೊನಾಗೆ ಬಲಿಯಾಗಿದ್ದು, ಕರೊನಾದಿಂದಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಒಟ್ಟು 10,427ಕ್ಕೆ ತಲುಪಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fifteen =
Remember me
