ಹುಬ್ಬಳ್ಳಿ:ನಾನು ಹುಟ್ಟಿದ್ದು 1976ರಲ್ಲಿ. ಅಂದಿನ ರಾಯಚೂರ ಇಂದಿನ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಹಳ್ಳ ಎಂಬ ಚಿಕ್ಕಗ್ರಾಮದ ಹಿರೇಮಠದಲ್ಲಿ. 5ನೇ ವಯಸ್ಸಿನಲ್ಲಿ ಸ್ವಾಮಿ ಆಗಬೇಕೆಂಬ ಕನಸು ಕಂಡೆ. ಸಂಸಾರಿಕ ಜೀವನ ಬೇಡ ಎನಿಸಿತ್ತು. ಹಿರಿಯರ ಎದುರು ನನ್ನಾಸೆ ಹೇಳಿದರೆ ಸುಮ್ಮನಾಗಿಸುತ್ತಿದ್ದರು.
ಕೊನೆಗೂ ಮನೆಯಲ್ಲಿ ಯಾರಿಗೂ ಹೇಳದೆ ಗುರುಕುಲ ಸೇರಿ, ಸ್ವಯಂ ಆಗಿ ಸನ್ಯಾಸಿ ಆಗಿದ್ದೇನೆ. ನನ್ನನ್ನು ಯಾರೂ ಸನ್ಯಾಸಿ ಮಾಡಲಿಲ್ಲ. ನಂತರ ಶಿವಯೋಗಿ ಮಂದಿರದಲ್ಲಿ, ಕೊಪ್ಪಳದ ಗವಿಸಿದ್ಧೇಶ್ವರ ಮಠದಲ್ಲಿ ಅಭ್ಯಾಸ ಮುಗಿಸಿಕೊಂಡು 1992ಕ್ಕೆ ಮೂರುಸಾವಿರ ಮಠಕ್ಕೆ ಬಂದೆ. ಅಂದಿನ ಮೂಜಗಂ ಅವರ ಸನ್ನಿಧಾನದಲ್ಲಿ ವಿದ್ಯಾಭ್ಯಾಸ ಮಾಡಿದೆ. ಮೂಜಗಂ ಅವರು ನನ್ನನ್ನು ಬಾಲೆಹೊಸೂರಿನ ಮಠಕ್ಕೆ ನೇಮಕ ಮಾಡಿದರು. ಆಗ ಬಾಲೆಹೊಸೂರಿನ ಮಠ ಆರ್ಥಿಕವಾಗಿ ಬಡತನದಲ್ಲಿತ್ತು. ನನಗೆ ಒಂದು ಬಾರಿ ಜ್ವರ ಬಂದಿತ್ತು. ಮಾತ್ರೆ ತೆಗೆದುಕೊಳ್ಳಲೂ ಹಣ ಇರಲಿಲ್ಲ. ಮಾತ್ರೆಗೆ 16 ರೂ. ಇರದ ಕಾರಣ ಕೇವಲ ಗಂಜಿ ಕುಡಿದು 2 ತಿಂಗಳು ಹಾಸಿಗೆಯಲ್ಲಿ ಮಲಗಿದ್ದೆ. ಅಷ್ಟು ಬಡತನದಲ್ಲಿ ದಿನ ಕಳೆದಿದ್ದೇನೆ.
ಒಂದು ಬಾರಿ ಮಳೆಗಾಲ ಇತ್ತು. ಶಿವಲಿಂಗ ಸ್ವಾಮಿಗಳು ನಮ್ಮ ಮಠಕ್ಕೆ ಬಂದಿದ್ದರು. ಅವರು ಈಗಿನ ಮೂಜಗು ಅವರಿಗೂ ಆತ್ಮೀಯರು. ಬಾಲೆ ಹೊಸೂರಿನ ಮಠ ಸೋರುತ್ತಿತ್ತು. ಅವರ ಕೈಗೊಂದು ಛತ್ರಿ ಕೊಟ್ಟು, ನಾನೂ ಒಂದು ಹಿಡಿದುಕೊಂಡಿದ್ದೆ. ಆಗ ಶಿವಲಿಂಗ ಸ್ವಾಮಿಗಳು ಮೂರುಸಾವಿರ ಮಠಕ್ಕೆ ಬಂದರೆ 15 ಸಾವಿರ ರೂ. ತಗಡು ಕೊಡಿಸುತ್ತೇನೆ ಎಂದರು. ಸ್ವಾಮೀಜಿ ನನಗೆ ತಗಡು ಕೊಡಿಸಲೇ ಇಲ್ಲ. ಆದರೂ ನಾನು ಸುಮ್ಮನಿದ್ದೆ. ನಂತರ ಬಾಲೆಹೊಸೂರಿನ ಮಠ ಬೆಳೆಸಿದೆ. ಈಗ ಈ ಮಠ ಇಡಿ ರಾಜ್ಯದ ಗಮನ ಸೆಳೆದಿದೆ. ಮಠದ ಉದ್ಘಾಟನೆಗೆ ಮೂಜಗು ಅವರೇ ಬಂದು, 3 ದಿನ ಸಾನ್ನಿಧ್ಯ ವಹಿಸಿದ್ದರು.
ಏಕೆ ಈ ಸತ್ಯದರ್ಶನ?
ಮಾರನೇ ದಿನವೇ ಒಂದು ಪ್ರಕಟಣೆ ಹೊರಡಿಸಿ, ಮಠದ ಸಂಪ್ರದಾಯ ಹಾಗೂ ಕಾನೂನಿನ ಆಧಾರದಂತೆ ಉತ್ತರಾಧಿಕಾರಿ ನೇಮಕ ಮಾಡಲಾಗುವುದು ಎಂದು ಹೇಳಿದರು. ಮೂಜಗು ಹಾಗೂ ಉನ್ನತಾಧಿಕಾರ ಸಮಿತಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಕೊನೆಗೆ ರಾಜಕಾರಣಿಗಳಿಂದಾಗಲಿ, ಸ್ವಾಮೀಜಿಯವರಿಂದಾಗಲಿ ನ್ಯಾಯ ಸಿಗುವುದಿಲ್ಲವೆಂದು ಸಮಾಜದ ಎದುರು ಬರಲು ನಿರ್ಣಯಿಸಿದೆ. ಇದಕ್ಕಾಗಿ ನನ್ನ ಸತ್ಯದರ್ಶನ. ನಾನು ಅದೆಷ್ಟೋ ನ್ಯಾಯ ಬಗೆ ಹರಿಸಿದ್ದೇನೆ. ಮಠದ ಆಸ್ತಿ, ವೈಭಕ್ಕೆ ದಿಂಗಾಲೇಶ್ವರರು ಆಸೆ ಮಾಡು ತ್ತೆರೆಂಬ ಆರೋಪ ಕೇಳಿ ಬಂದವು. ಕರ್ತೃ ಗುರುಸಿದ್ದೇಶ್ವರ ಮಠದ ಆಣೆ ಯಾಗಿ ಹೇಳು ತ್ತೇನೆ. ನಾನು ಮಠದ ಆಸ್ತಿಗೆ ಆಸೆಪಟ್ಟ ವನಲ್ಲ. ಮಠದ ಹಿರಿಮೆ ಬೆಳೆಸುವ ಆಶಯ ಇತ್ತು. ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ.
10 ದಿನಗಳ ಹಿಂದೆ….
10 ದಿನದ ಹಿಂದೆ ಹುಬ್ಬಳ್ಳಿಯ ಗುತ್ತಿಗೆದಾರರಾದ ರವಿ ಪಾಟೀಲ ಹಾಗೂ ಅಶೋಕ ಪಾಟೀಲ ಎಂಬುವರ ಮನೆಯಲ್ಲಿ ಮೂಜಗು ಅವರನ್ನು ಭೇಟಿಯಾದೆ. ಬುದ್ಧಿ ನಿಮ್ಮ ನ್ಯಾಯ ಬಗೆಹರಿಸಲು ಬಂದು ನಾನು ಕೋರ್ಟ್ ಮೆಟ್ಟಿಲು ಏರುವಂತಾಗಿದೆ. ನನಗೆ ಯಾವುದೇ ನ್ಯಾಯ ಬೇಡ. ನನ್ನ ಗೌರವಕ್ಕೆ ಚ್ಯುತಿ ಬಂದಿದೆ. ನಾನು ಉತ್ತರಾಧಿಕಾರಿಯಾಗುವುದು ಬೇಡವೆಂದರೆ ಹೇಳಿಬಿಡಿ ಎಂದು ಮೂಜಗು ಅವರ ಪಾದ ಹಿಡಿದು ಕೊಂಡು ಅತ್ತುಬಿಟ್ಟೆ. ಆಗಲು ಸಹ ಮೂಜಗು ಅವರು, ಉತ್ತರಾಧಿಕಾರಿಯಾಗಲು ನೀವೇ ಸಮರ್ಥರು. ನೀವು ಮಠಕ್ಕೆ ಬರಬೇಕು. ಮಾಧ್ಯಮದವರ ಎದುರೇ ನಿಮಗೆ ಮಾಲೆ ಹಾಕಿ ಸ್ವಾಗತಿಸಿ, ಮಠ ಬಿಟ್ಟುಕೊಡುತ್ತೇನೆ ಎಂದರು.
ನಿಮ್ಮ ಇಚ್ಛೆ ಬುದ್ಧಿ ಎಂದು ಹೇಳಿ, ಅದೇ ದಿನ ಸಚಿವ ಜಗದೀಶ ಶೆಟ್ಟರ್​ರನ್ನು ಭೇಟಿಯಾದೆ. ಹಿಂದಿನ ದಿನ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿದ್ದೆ. ಇಬ್ಬರೂ ಮುಖಂಡರು ಮೂಜಗು ಮನಸ್ಸು ಮಾಡಿದರೆ ಎಲ್ಲ ಸರಿಯಾಗುತ್ತೆ ಎಂದರು. ಮೂಜಗು ಅವರು ಭಕ್ತರು ಮನಸ್ಸು ಮಾಡಬೇಕು ಎಂದು ಉತ್ತರಿಸಿದರು. ಎಲ್ಲರೂ ಒಬ್ಬರ ಮೇಲೊಬ್ಬರು ಹೊಣೆಗಾರಿಕೆ ಹೊರೆಸುತ್ತ ನನ್ನ ಘನತೆಗೆ ಧಕ್ಕೆ ತಂದರು.
ಅನೇಕರಿಂದ ಚಿತ್ರಹಿಂಸೆ…
ಮೂರುಸಾವಿರ ಮಠಕ್ಕೆ ನಾನು ಉತ್ತರಾಧಿಕಾರಿಯೆಂದು ಸುದ್ದಿ ಹರಡುತ್ತಲೇ ನನ್ನ ಮೇಲೆ ಹಲವಾರು ಪ್ರಕರಣಗಳು ದಾಖಲಾದವು. ನಾನು ವಿರೋಧಿಗಳನ್ನೂ ಸಹೋದರರಂತೆ ನೋಡಿದವನು. ಯಾರೊಬ್ಬರ ಬಗ್ಗೆಯೂ ಕೆಟ್ಟ ಅಭಿಪ್ರಾಯ ನನ್ನಲ್ಲಿ ಇಲ್ಲ. ಅನೇಕರು ಚಿತ್ರಹಿಂಸೆ ಕೊಟ್ಟರು. ಆದರೆ ನವಲಗುಂದದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಶಿರಹಟ್ಟಿ ಫಕೀರೇಶ್ವರ ಸ್ವಾಮೀಜಿ, ರುದ್ರಾಕ್ಷಿಮಠದ ಶ್ರೀಗಳು, ಪಾಲಿಕೆ ಮಾಜಿ ಮೇಯರ್ ಶಿವು ಹಿರೇಮಠ, ಮಾಜಿ ಸದಸ್ಯ ರಾಜಣ್ಣ ಕೊರವಿ, ಹಿರಿಯ ನ್ಯಾಯವಾದಿಗಳಾದ ಜಿ.ಆರ್. ಅಂದಾನಿಮಠ, ವಿ.ಜಿ. ಪಾಟೀಲ ಸೇರಿ ಹಲವರು ಸತ್ಯ ಹೇಳುತ್ತ ಬಂದಿದ್ದು, ಅವರನ್ನು ಅಭಿನಂದಿಸುತ್ತೇನೆ ಎಂದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + 14 =
Remember me
