ಬೆಂಗಳೂರು:ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಹೆಸರನ್ನು ಯಲಹಂಕ ಮೇಲ್ಸೇತುವೆಗೆ ಇಡುವ ಕುರಿತು ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆದಿರುವಾಗಲೇ ರಸ್ತೆ ಮೇಲೆ ಸಾರ್ವಜನಿಕರೇ ನಾಮಕರಣ ಮಾಡಿದ್ದಾರೆ.
ಗುರುವಾರ ಸಿಎಂ ಉದ್ಘಾಟನೆ ಮಾಡಬೇಕಿತ್ತು. ಆದರೆ, ಬುಧವಾರ ದಿನವಿಡೀ ನಡೆದ ಬೆಳವಣಿಗೆ ನಂತರ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿತ್ತು.
ಆದರೆ, ಮೇಲ್ಸೇತುವೆ ಮೇಲೆ ಸಾವರ್ಕರ್ ಭಾವಚಿತ್ರ ಇರಿಸಿ ನಾಮಕರಣ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬರೆದು ಕೊಂಡಿದ್ದರು. ಅದರಂತೆಯೇ ಗುರುವಾರ ಬೆಳಗ್ಗೆ ‘ಸ್ವಾತಂತ್ರ್ಯ ವೀರ ಸಾವರ್ಕರ್ ಮೇಲ್ಸೇತುವೆ’ ಎಂದು ರಸ್ತೆಯ ಮೇಲೆ ದೊಡ್ಡದಾಗಿ ಬರೆಯಲಾಗಿತ್ತು.
ಹೆಸರಿಡುವ ಕುರಿತು ಪ್ರತಿಕ್ರಿಯಿಸಿರುವ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ವಾತಂತ್ರ್ಯ ವೀರರ ಕುರಿತು ರಾಜಕೀಯ ಮಾಡಬೇಡಿ. ನಿಮ್ಮ ಮನೆಯವರ ಹೆಸರನ್ನು ಬೇರೆಡೆ ಇಡುವಾಗ ಸಹಕಾರ ನೀಡುತ್ತೇವೆ. ಇಷ್ಟರ ನಡುವೆಯೂ ವಿರೋಧಿಸಿದರೆ ಎದುರಿಸಿ, ಮುಂದಿನ ತಿಂಗಳು ನಾಮಕರಣ ಮಾಡಿಯೇ ಸಿದ್ಧ ಎಂದಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
