ಬೆಂಗಳೂರು:ನಟ ಸಂಚಾರಿ ವಿಜಯ್​ ಅಪಘಾತದಲ್ಲಿ ಅಗಲಿ ಈ ತಿಂಗಳಲ್ಲಿ ಒಂದು ವರ್ಷವಾಗಿದೆ. ಮತ್ತೊಂದೆಡೆ ಮುಂದಿನ ತಿಂಗಳಲ್ಲೇ ಅವರ ಇನ್ನೊಂದು ಜನ್ಮದಿನ (ಜು. 17) ಬರಲಿದೆ. ಈ ಮಧ್ಯೆ ಅವರ ಒಂದಷ್ಟು ಸ್ನೇಹಿತರು, ಹಿತೈಷಿಗಳೆಲ್ಲ ಸೇರಿ ಅವರ ಊರಿನ ಶಾಲೆಗೆ ಸುಣ್ಣ-ಬಣ್ಣ ಬಳಿದು ತಮ್ಮ ನೆಚ್ಚಿನ ನಟ-ಗೆಳೆಯನನ್ನು ಸ್ಮರಿಸಿಕೊಳ್ಳಲಿದ್ದಾರೆ.
ಈಗಾಗಲೇ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ನಡೆಸಿ ಗಮನ ಸೆಳೆದಿರುವ ಕನ್ನಡ ಮನಸುಗಳ ಪ್ರತಿಷ್ಠಾನ ಇಂಥದ್ದೊಂದು ಕಾರ್ಯ ಮಾಡಲು ಮುಂದಾಗಿದೆ. ಈ ಪ್ರತಿಷ್ಠಾನ ಇದುವರೆಗೆ 12 ಸರ್ಕಾರಿ ಶಾಲೆಗಳನ್ನು ಗುರುತಿಸಿ ಬಣ್ಣ ಬಳಿದು ಆ ಶಾಲೆಗೆ ಅಗತ್ಯವಿರುವ ಒಂದಷ್ಟು ವಸ್ತುಗಳನ್ನು ನೀಡಿ ನೆರವಾಗುತ್ತ ಬಂದಿದೆ.
ಇದನ್ನೂ ಓದಿ:ಮತ್ತೆ ಬಣ್ಣ ಹಚ್ಚಿದ್ರು ನಟಿ ನೀತೂ ಶೆಟ್ಟಿ; ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕುಂಜೆ..
ತಮ್ಮ ಮುಂದಿನ ಈ ಅಭಿಯಾನವನ್ನು ನಟ ಸಂಚಾರಿ ವಿಜಯ್ ಓದಿರುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಣೇಗೇರಿ ಸರ್ಕಾರಿ ಪ್ರೌಢಶಾಲೆ ಮತ್ತು ಪಂಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಿದೆ. ಜುಲೈ 16 ಮತ್ತು 17ರಂದು ಇವೆರಡು ಶಾಲೆಗಳಿಗೆ ಬಣ್ಣ ಬಳಿಯುವ ಜತೆಗೆ ಫ್ಯಾನ್, ಪ್ರೊಜೆಕ್ಟರ್, ವಾಟರ್ ಫಿಲ್ಟರ್, ಸ್ಪೀಕರ್ ಇತ್ಯಾದಿಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಪ್ರತಿಷ್ಠಾನದ ಪವನ್ ತಿಳಿಸಿದ್ದಾರೆ. ಅಲ್ಲದೆ ತಮ್ಮ ಈ ಕಾರ್ಯದ ಜತೆ ಇತರರೂ ಕೈಜೋಡಿಸಬಹುದು ಎಂದು ಅವರು ಹೇಳಿದ್ದಾರೆ.

ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 15 =
Remember me
