ಮಂಡ್ಯ:ಸವಿತಾ ಸಮಾಜದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಅ.30 ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ನಿರ್ದೇಶಕ ಎ.ಎಂ.ನಾಗರಾಜು ತಿಳಿಸಿದರು.ಸಾಮಾಜಿಕವಾಗಿ ಶೋಷಣೆಗೆ ಒಳಗಾಗಿರುವ ನಮ್ಮ ಸಮುದಾಯವನ್ನು ಸಂಘಟನೆ ಮೂಲಕ ಮುಖ್ಯವಾಹಿನಿಗೆ ತರಲು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಸಮುದಾಯದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಗಸ್ತಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ಸುಮಾ ಅವರನ್ನು ಆಯ್ಕೆ ಮಾಡಬೇಕು. ಆ ಮೂಲಕ ಸಮುದಾಯದ ಧ್ವನಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ನಾಮದೇವಾ ನಾಗರಾಜು, ರಂಗನಾಥ್ ಕಟಿವೇಲ್ ಇದ್ದರು.ಆಯ್ಕೆಯಾದವರು: ಬಸವರಾಜು(ಗೌರವಾಧ್ಯಕ್ಷ), ಎ.ವಿ.ವೆಂಕಟೇಶ್(ಕಾರ್ಯಾಧ್ಯಕ್ಷ), ಎನ್.ಸಿ.ರವಿಕುಮಾರ್(ಅಧ್ಯಕ್ಷ), ಡಿ.ಎಸ್.ರಾಜಶೇಖರ್(ಉಪಾಧ್ಯಕ್ಷ), ವೈ.ಎನ್.ಪುಟ್ಟಸ್ವಾಮಿ(ಪ್ರಧಾನ ಕಾರ್ಯದರ್ಶಿ), ಬಿ.ಎನ್.ಅಭಿಷೇಕ್(ಖಜಾಂಚಿ), ಪ್ರಕಾಶ್(ಸಂಘಟನಾ ಕಾರ್ಯದರ್ಶಿ), ಸಿದ್ದರಾಜು, ಡಿ.ತಿಮ್ಮಯ್ಯ, ಕೆ.ರಮೇಶ್, ಎಚ್.ಸಿ.ಬಾಲು, ಬಿ.ವಿ.ಬಲರಾಮು, ಎಚ್.ಸಿ.ಚಿಕ್ಕಬೋರಯ್ಯ, ಸುರೇಶ್, ವೈ.ಎನ್.ಕೃಷ್ಣ, ಡಿ.ಕೆ.ಕುಮಾರ್, ಸ್ವಾಮಿ, ಶಿವಲಿಂಗಯ್ಯ (ನಿರ್ದೇಶಕರು), ಆರ್.ಯುವರಾಜ್ (ಯುವ ಘಟಕದ ಅಧ್ಯಕ್ಷ) ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − two =
Remember me
