ಬೆಂಗಳೂರು:ಬಿಳಿ ಬಟ್ಟೆಯನ್ನು ನಾವು ಧರಿಸಿದರೆ ಅಂದು ಬಟ್ಟೆಯ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತೇವೆ. ನಾವು ಎಷ್ಟೇ ಪ್ರಯತ್ನಿಸಿದರೂ ಬಟ್ಟೆಯ ಮೇಲಿನ ಕಲೆ ತೆಲೆಯಲು ಸಾಧ್ಯವೇ ಇಲ್ಲ ಎನ್ನುವ , ನಿಮಗಾಗಿ ಈ ಟಿಪ್ಸ್. ಕೇವಲ ಒಂದು ವಸ್ತುವಿನಿಂದ ಕಂದು ಮತ್ತು ಬಿಳಿ ಶರ್ಟ್ ಅನ್ನು ಹೊಳಪುಗೊಳಿಸುವುದು ಹೇಗೆ ಎಂದು ನೋಡೋಣ ಬನ್ನಿ..
1) ಬಟ್ಟೆಯಲ್ಲಿ ಎಣ್ಣೆಯ ಕಲೆಯಾಗಿದ್ದರೆ, ಎರಡು ಚಮಚ ಅಡಿಗೆ ಸೋಡಾಕ್ಕೆ ಒಂದು ಚಮಚ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಬಟ್ಟೆಯಲ್ಲಿನ ಕಲೆಯ ಮೇಲೆ ಅನ್ವಯಿಸಿ, ಸ್ವಲ್ಪ ಹೊತ್ತು ಹಾಗೇ ಬಿಡಿ. ನಂತರ ಬ್ರಶ್ನಿಂದ ಉಜ್ಜಿಕೊಂಡರೆ ಕಲೆ ನಿವಾರಣೆಯಾಗುತ್ತದೆ.
2) ಬಟ್ಟೆಯ ಮೇಲೆ ಚಾಕಲೇಟ್ ಬಿದ್ದು, ಕಲೆಯಾದರೆ ತಕ್ಷಣವೇ ಆ ಕಲೆಗಳನ್ನು ತೆಗೆದುಹಾಕಲು ಟಾಲ್ಕಮ್ ಪೌಡರ್ ಹಾಕಿ ನಂತರ ಬೆಚ್ಚಗಿನ ನೀರಿನಿಂದ ಆ ಬಟ್ಟೆಯನ್ನು ತೊಳೆಯಿರಿ.
3) ಕಲೆಗೆ ನಿಂಬೆ ರಸವನ್ನು ಹಚ್ಚಿ, 15 ನಿಮಿಷಗಳ ಕಾಲ ಹಾಗೇನೇ ಬಿಡಿ, ನಂತರ ಚೆನ್ನಾಗಿ ಬಟ್ಟೆಯನ್ನು ಒಗೆಯಿರಿ, ಹೀಗೆ ಮಾಡುವುದರಿಂದ ಕಲೆ ನಿವಾರಣೆಯಾಗುತ್ತದೆ.
4) ಬಟ್ಟೆಯನ್ನು ಸ್ವಲ್ಪ ನೀರಿನಿಂದ ಅದ್ದಿ, ಕಲೆಯಿರುವ ಪ್ರದೇಶಕ್ಕೆ ಅಡಿಗೆ ಸೋಡಾ ಹಾಕಿ, ಸ್ವಲ್ಪ ಉಜ್ಜಿಕೊಂಡು 15 ನಿಮಿಷಗಳ ಕಾಲ ಬಿಡಿ. ಈ ರೀತಿ ಮಾಡುವುದರಿಂದ ಅಡಿಗೆ ಸೋಡಾ ಬಟ್ಟೆಯ ಕಲೆಗಳನ್ನು ಹೀರಿಕೊಳ್ಳುತ್ತವೆ. ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
5) ಶಾಯಿ ಕಲೆಗಳ ಮೇಲೆ ಟೂತ್ ಪೇಸ್ಟ್ ಹಚ್ಚಿ ಸ್ವಲ್ಪ ಸಮಯ ಬಿಡಿ. ಆ ಬಳಿಕ ಟೂತ್ ಬ್ರಶ್ ನಿಂದ ಉಜ್ಜಿದರೆ… ಬೇಗ ಮಾಯವಾಗುತ್ತದೆ.
ಶಿವಮೊಗ್ಗ ಹೋರಿ ಹಬ್ಬ; ಗೂಳಿ ತಿವಿತಕ್ಕೆ ಪ್ರಾಣ ಕಳೆದುಕೊಂಡ ಯುವಕ

ಉಘೇ ಮಾದಪ್ಪ; ಈ ಬಾರಿ ಆದ್ರೂ ರೈತ ಮಕ್ಕಳಿಗೆ ಕನ್ಯೆ ಭಾಗ್ಯ ಕರುಣಿಸು..ಪಾದಯಾತ್ರೆ ಹೊರಟ ಯುವಕರು

ಪ್ರಧಾನಿ ಮೋದಿ ಕಟೌಟ್‌ ತಬ್ಬಿಕೊಂಡು ಅಶ್ಲೀಲ ನೃತ್ಯ; ಮಹಿಳೆಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
