ರಾಯಚೂರು:ದೇಶದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ದರೋಡೆ ಮಾಡಲು ಯತ್ನಿಸಿದ ಕಳ್ಳರ ಪೈಕಿ ಒಬ್ಬ ಪೊಲೀಸರ ಬಲೆಗೆ ಬಿದ್ದ ಘಟನೆ ನಿನ್ನ ರಾತ್ರಿ ನಡೆದಿದೆ.
ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ನಲ್ಲಿರುವ ಎಸ್​ಬಿಐ ಶಾಖೆಯಲ್ಲಿ ದರೋಡೆ ಪ್ರಯತ್ನ ನಡೆದಿತ್ತು. ನಿನ್ನೆ ರಾತ್ರಿ ಬ್ಯಾಂಕಿನ ಹೊರಗೆ ಇದ್ದ ಸಿಸಿ ಕ್ಯಾಮೆರಾವನ್ನು ಜಖಂಗೊಳಿಸಿ, ಮುಖ್ಯ ಬಾಗಿಲನ್ನೇ ಮುರಿದು ಒಳಕ್ಕೆ ಪ್ರವೇಶಿಸಿದ್ದರು ಮೂವರು ಕಳ್ಳರು. ಇದೇ ವೇಳೆ, ಗಸ್ತು ಬಂದ ಪೊಲೀಸರಿಗೆ ಬ್ಯಾಂಕ್ ಬಾಗಿಲು ತೆರೆದಿರುವುದು ಕಂಡ ಕಾರಣ ಅವರೂ ಒಳಪ್ರವೇಶಿಸಿದ್ದಾರೆ.
ಇದನ್ನೂ ಓದಿ:ಯಡಿಯೂರಪ್ಪ ವಿರುದ್ಧದ ಮೂರು ಕೇಸ್ ವಾಪಸ್
ಅನಿರೀಕ್ಷಿತವಾಗಿ ಬಂದ ಪೊಲೀಸರನ್ನು ನೋಡಿ ಹೌಹಾರಿದ ಕಳ್ಳರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗೆಲೆತ್ನಿಸಿದ್ದಾರೆ. ಪೊಲೀಸರು ಬೆನ್ನಟ್ಟಿದಾಗ ಒಬ್ಬ ಕಳ್ಳ ಸಿಕ್ಕಿಬಿದಿದ್ದಾನೆ. ಆತನ ಪರಿಚಯವನ್ನು ಇನ್ನೂ ಬಹಿರಂಗಪಡಿಸಿಲ್ಲ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿರತೆ ದಾಳಿಗೆ ದೇಗುಲದ ಅಡುಗೆ ಭಟ್ಟ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twenty =
Remember me
