ನವದೆಹಲಿ/ಬೆಂಗಳೂರು:ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ 120 ಬಿ ಪ್ರಕರಣವನ್ನು ರದ್ದು ಮಾಡುವ ಮೂಲಕ ಡಿಕೆಶಿಗೆ ಸುಪ್ರೀಂಕೋರ್ಟ್​ ಬಿಗ್​ ರಿಲೀಫ್​ ನೀಡಿದೆ.
ಸುದೀರ್ಘ ಅರ್ಜಿ ವಿಚಾರಣೆ ನಡೆಸಿದ ಬಳಿಕ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಪೀಠ ಈ ಆದೇಶವನ್ನು ಹೊರಡಿಸಿದೆ. 2017ರಲ್ಲಿ ಡಿಕೆಶಿ ಅವರ ದೆಹಲಿ ನಿವಾಸದಲ್ಲಿ ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿಕೆಶಿ ವಿರುದ್ಧ 2019ರಲ್ಲಿ ಜಾರಿ ನಿರ್ದೇಶನಾಲಯ ಪಿಎಂಎಲ್​ಎ ಹಾಗೂ ಐಪಿಸಿ 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಆದಾಯ ತೆರಿಗೆ ಇಲಾಖೆಯ ದೂರಿನ ಮೇರೆಗೆ ಐಟಿ ಕಾಯ್ದೆ ಮತ್ತು 120 ಬಿ ಅಡಿ ಪ್ರಕರಣ ದಾಖಲಾಗಿತ್ತು.
ಐಟಿ ದೂರಿನ ಹಿನ್ನಲೆ ಇಸಿಐಆರ್​ ದಾಖಲಿಸಿಕೊಂಡ ಇಡಿ, ತದನಂತರ ಡಿಕೆಶಿಗೆ ನೋಟಿಸ್ ನೀಡಿತು. ಐಟಿ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಿರೋದನ್ನು ಪ್ರಶ್ನಿಸಿ ಡಿಕೆಶಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂದಿನ ಅರವಿಂದ ಕುಮಾರ್ ನೇತೃತ್ವದ ಪೀಠ ಇಡಿ ನೋಟಿಸ್‌ ನೀಡಿದ್ದ ಕ್ರಮವನ್ನು ಎತ್ತಿ ಹಿಡಿದಿತ್ತು. ಇದರಿಂದ ಡಿಕೆಶಿಗೆ ಹೈಕೋರ್ಟ್​ನಲ್ಲಿ ಹಿನ್ನಡೆಯಾಗಿತ್ತು.
ಇದೇ ಸಂದರ್ಭದಲ್ಲಿ ವಿಚಾರಣೆ ಹಾಜರಾಗಲು ಡಿಕೆಶಿಗೆ ಇಡಿ ಮತ್ತೊಂದು ನೋಟಿಸ್ ನೀಡಿತ್ತು. ವಿಚಾರಣೆಗೆಂದು ದೆಹಲಿಗೆ ಆಗಮಿಸಿದಾಗ ಮೂರು ದಿನ ವಿಚಾರಣೆ ನಡೆಸಿದ ಬಳಿಕ ಡಿಕೆಶಿ ಅವರನ್ನು ಇಡಿ ಬಂಧಿಸಿತ್ತು. ಇದಾದ ಬಳಿಕ ಡಿಕೆಶಿ ಒಟ್ಟು 54 ದಿನ ದೆಹಲಿಯ ತಿಹಾರ್ ಜೈಲಿನಲ್ಲಿದ್ದರು. ಬಳಿಕ ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ಗೆ ಇಡಿ ಚಾರ್ಜ್​ಶೀಟ್ ದಾಖಲಿಸಿತು. ಇಡಿ ನೋಟಿಸ್ ಕುರಿತು ಹೈಕೋರ್ಟ್ ಆದೇಶವನ್ನು ಡಿಕೆಶಿ ಸುಪ್ರಿಂಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ಸುದೀರ್ಘ ಅರ್ಜಿ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಇಂದು (ಮಾರ್ಚ್​ 05) ತೀರ್ಪು ಪ್ರಕಟಿಸಿದೆ. ಇಡಿಯ ಪ್ರಕ್ರಿಯೆ ಕಾನೂನು ಬಾಹಿರ ಎಂದಿರುವ ಪೀಠ ಪ್ರಕರಣವನ್ನು ರದ್ದು ಮಾಡುವ ಮೂಲಕ ಡಿಕೆಶಿಗೆ ಬಿಗ್ ರಿಲೀಫ್ ನೀಡಿದೆ.
ಚುನಾವಣಾ ಬಾಂಡ್​ ಮಾಹಿತಿ ನೀಡಲು ಗಡುವು ವಿಸ್ತರಣೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಎಸ್​ಬಿಐ

ಮೌತ್ ಫ್ರೆಶ್ನರ್​ ಸೇವಿಸಿದ ನಂತ್ರ ರಕ್ತ ವಾಂತಿ ಮಾಡ್ಕೊಂಡ ಐವರು ಸ್ನೇಹಿತರು! ವೈದ್ಯರಿಂದ ಶಾಕಿಂಗ್​ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
