ಮೃತ್ಯುಂಜಯ ಕಪಗಲ್ಬೆಂಗಳೂರು:ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಜು.2ರಂದು ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಗಳಿವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್​ಸಿಗೆ ಶೇ.17 ಮತ್ತು ಎಸ್​ಟಿಗೆ ಶೇ.7 ಮೀಸಲು ಹೆಚ್ಚಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಿತ್ತು. ಹೀಗಾಗಿ ಏಕಸದಸ್ಯ ಆಯೋಗ ನಿಗದಿತ ಮೀಸಲು ಏರಿಕೆ ಪ್ರಮಾಣದ ಮಿತಿಯೊಳಗೆ ಶಿಫಾರಸುಗಳುಳ್ಳ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ಅರ್ಹ ಸಮುದಾಯಗಳಿಗೆ ಮೀಸಲು ಸವಲತ್ತು ಹಂಚಿಕೆ ಸಮಾನವಾಗಿಲ್ಲ ಎಂಬ ಅಸಮಾಧಾನ, ಸಮತೋಲನವಿಲ್ಲವೆಂಬ ಅಪಸ್ವರಗಳಿಗೂ ವರದಿ ಉತ್ತರದಾಯಿ ಆಗಲಿದೆ. ಮೀಸಲು ವಂಚಿತ ಹಾಗೂ ನಿರ್ಲಕ್ಷಿತ ದೇವದಾಸಿ, ಅಲೆಮಾರಿ, ಆದಿವಾಸಿ, ಪೌರ ಕಾರ್ವಿುಕ, ಸಫಾಯಿ ಕರ್ಮಚಾರಿ ಹಾಗೂ ಕೊಳೆಗೇರಿ ನಿವಾಸಿಗಳಿಗೆ ‘ಶಕ್ತಿ’ ತುಂಬಲಿದೆ ಎಂಬ ಆಶಾಭಾವನೆ ಇದೆ.
ಸರ್ಕಾರ ನೀಡಿದ ಜೂ.30ರ ಗಡುವಿನೊಳಗೆ ವರದಿ ಸಲ್ಲಿಸಬೇಕೆಂಬ ಇಚ್ಛೆ ಆಯೋಗ ಹೊಂದಿತ್ತು. ಆದರೆ ಸರ್ಕಾರ ನಮಗೆ ಜು.2ಕ್ಕೆ ಕಾಲಾವಕಾಶ ನೀಡಿದೆ. ಯಾವುದೇ ಪೂರ್ವಾಗ್ರಹ, ಒತ್ತಡಗಳಿಲ್ಲದೆ, ಸಂವಿಧಾನ ಹಾಗೂ ಮನಸಾಕ್ಷಿಗೆ ಅನುಗುಣವಾಗಿ ವರದಿ ತಯಾರಿಸಿದ್ದೇವೆ.| ನ್ಯಾ.ಎಚ್.ಎನ್.ನಾಗಮೋಹನ ದಾಸ್, ಏಕಸದಸ್ಯ ಆಯೋಗದ ಅಧ್ಯಕ್ಷ
ಮೀಸಲು ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಚಿತ ಮೊದಲ ಏಕಸದಸ್ಯ ಆಯೋಗ ಇದಾಗಿದ್ದು, ಮಹತ್ವ ಪಡೆದಿರುವುದು ಸಹಜ. ಹಳೆಯತಾದ ಮೀಸಲು ಪ್ರಮಾಣಕ್ಕೆ ಏರಿಕೆಯ ಸ್ಪರ್ಶ ಸಿಗಲಿರುವ ಕಾರಣ ಫಲಾನುಭವಿ ಸಮುದಾಯಗಳಿಗೆ ಅಲ್ಪಮಟ್ಟಿನ ತೃಪ್ತಿಯೂ ಲಭಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕುತೂಹಲಕ್ಕೆ ಗ್ರಾಸ:ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಿಸಬೇಕು ಎನ್ನುವ ಒತ್ತಡಗಳಿವೆ. ಅದೇ ಕಾಲಕ್ಕೆ ಮೀಸಲು ಬಳಕೆ ರೀತಿ-ನೀತಿ ಬಗ್ಗೆಯೂ ವಿಮರ್ಶೆಗಳಾಗಿವೆ. ಈ ಮಧ್ಯೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಮೀಸಲು ಪ್ರಮಾಣ ಶೇ.50 ಮೀರಬಾರದು. ಈ ಹಿನ್ನೆಲೆಯಲ್ಲಿ ಏಕಸದಸ್ಯ ಆಯೋಗದ ವರದಿ ಹೇಗೆ ಉತ್ತರಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಬಾಧಿಸದ ಲಾಕ್​ಡೌನ್:ಲಾಕ್​ಡೌನ್ ಮಧ್ಯೆಯೂ ಆಯೋಗ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ. ಆನ್​ಲೈನ್, ಜಸ್ಟಿಸ್ ಮನೆ, ಕಚೇರಿಯಲ್ಲಿ ಕಾರ್ಯತತ್ಪರವಾಗಿದ್ದು, ನಿಗದಿತ ಜೂ.30ರೊಳಗೆ ವರದಿ ಸಲ್ಲಿಸುವ ಉತ್ಸಾಹ, ಬದ್ಧತೆ ಭರದಲ್ಲಿ ಸರ್ಕಾರದ ನಿಯಮಾವಳಿ ಚೌಕಟ್ಟನ್ನು ಮೀರದಂತೆ ನೋಡಿಕೊಂಡಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:4ರಿಂದ ಕರ್ನಾಟಕ-ಕೇರಳ ಗಡಿ ಬಂದ್: ಕೇರಳ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
ವಿಭಾಗಮಟ್ಟದ 4 ಸಮಾಲೋಚನಾ ಸಭೆ, 44 ಸಲಹಾ ಸಭೆಗಳನ್ನು ನಡೆಸಿದ್ದು, 851 ಲಿಖಿತ ಅಹವಾಲುಗಳನ್ನು ಸ್ವೀಕರಿಸಿದೆ. ರಾಜಕೀಯ, ದಲಿತ ಸಂಘಟನೆಗಳ ಪ್ರಮುಖರು, ಸಾಹಿತಿಗಳು, ಕಾನೂನು ಸೇರಿ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಚರ್ಚೆ, ಸರ್ಕಾರದ ವಿವಿಧ ಇಲಾಖೆಗಳಿಂದ ಮಾಹಿತಿ, ದತ್ತಾಂಶ ಸಂಗ್ರಹಿಸಿ ವಿಶ್ಲೇಷಣೆ, ಅಧಿಕಾರಿಗಳ ಜತೆಗೂ ವಿಚಾರ ವಿನಿಮಯವಾಗಿದೆ.
ಸುಪ್ರೀಂಕೋರ್ಟ್ ಸೇರಿ ವಿವಿಧ ರಾಜ್ಯಗಳು ನೀಡಿದ ತೀರ್ಪಗಳ ಪರಾಮರ್ಶೆ, ವೈಜ್ಞಾನಿಕ ಹಾಗೂ ತಲರ್ಸ³ ನೆಲೆಯಲ್ಲಿ ಕ್ರೋಡೀಕೃತ ಅಂಕಿ-ಅಂಶಗಳನ್ನು ಕಲೆ ಹಾಕಿದೆ. ಅಲ್ಲದೆ, ಮೀಸಲು ವಂಚಿತ ಸಮುದಾಯಗಳೊಂದಿಗೆ ಸಂವಹನ ನಡೆಸಿದೆ. ಒಟ್ಟಾರೆ ಜನರನ್ನು ತೊಡಗಿಸಿ, ಜನರನ್ನೇ ಆಧರಿಸಿ ತಯಾರಿಸಿದ ‘ಜನರ ವರದಿ’ ಇದು ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:ಬಿಜೆಪಿ ವರ್ಚುವಲ್ ರ‍್ಯಾಲಿ: 1.40 ಕೋಟಿ ಜನರ ಭೇಟಿ
ಒತ್ತಡಕ್ಕೆ ಮಣಿದು ಆಯೋಗ ರಚನೆ:ಪರಿಶಿಷ್ಟ ಪಂಗಡಕ್ಕೆ ಮೀಸಲು ಪ್ರಮಾಣ ಶೇ.7.5ಕ್ಕೆ ಹೆಚ್ಚಿಸಬೇಕು ಎನ್ನುವ ಒಂದಂಶದ ಬೇಡಿಕೆ ಇಟ್ಟುಕೊಂಡು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸುದೀರ್ಘ 16 ದಿನಗಳ ಪಾದಯಾತ್ರೆ ನಡೆಯಿತು. ಹೋರಾಟದ ಒತ್ತಡಕ್ಕೆ ಮಣಿದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ 2019ರ ಜು.22ರಂದು ಆಯೋಗ ರಚಿಸಿ ಆದೇಶ ಹೊರಡಿಸಿ, 6 ತಿಂಗಳು ಗಡುವು ವಿಧಿಸಿತ್ತು. ದಿಢೀರ್ ರಾಜಕೀಯ ಪಲ್ಲಟದಿಂದ ಸರ್ಕಾರದ ಬದಲಾಯಿತು. ಆದರೆ ನ್ಯಾ.ನಾಗಮೋಹನ ದಾಸ್ ನೇತೃತ್ವದ ಏಕಸದಸ್ಯ ಆಯೋಗವನ್ನೇ ಮುಂದುವರಿಸಿತು. ಹೀಗಾಗಿ ಏಕಸದಸ್ಯ ಆಯೋಗವು 4-11-2019ರಿಂದ ಅಧಿಕೃತವಾಗಿ ಕಾರ್ಯಾರಂಭಿಸಿದೆ.
ವರದಿ ಪರಿಗಣಿಸೀತೇ?:ಅಧ್ಯಯನಕ್ಕೆ ಆಯೋಗ ರಚಿಸುವುದು, ಅಂಗೀಕರಿಸಿ ಅನುಷ್ಠಾನಕ್ಕೆ ತರುವ ಅಧಿಕಾರ ಸರ್ಕಾರಕ್ಕಿದ್ದರೂ ಪರಿಗಣಿಸುವುದು ಆದ್ಯ ಕರ್ತವ್ಯ. ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣಕ್ಕೆ ಸಂಬಂಧಿಸಿದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿತೇ ಹೊರತು ಅಂಗೀಕಾರಕ್ಕೆ ಪರಿಗಣಿಸಲಿಲ್ಲ. ಇದೇ ಕಾರಣಕ್ಕೆ ನ್ಯಾ.ಎಚ್.ಎನ್.ನಾಗಮೋಹನ ದಾಸ್ ಸಲ್ಲಿಸಲಿರುವ ವರದಿಯನ್ನು ಪರಿಗಣಿಸೀತೇ? ಎಂಬ ಸಂಶಯ ಮೂಡಿದೆ.
ಬೆಳೆ ವಿಮೆ ನೋಂದಣಿಗೆ 10 ಕಡೇ ದಿನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 5 =
Remember me
