ಬೆಂಗಳೂರು: ಸದ್ಯ ಲಾಕ್​ಡೌನ್ ಅವಧಿಯಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಎಲ್ಲಿಯೂ ಹೆಚ್ಚು ಜನ ಸೇರುವಂತಿಲ್ಲ. ಹೀಗಾಗಿ ಕಲ್ಯಾಣ ಮಂಟಪಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದೆಲ್ಲದರ ಮಧ್ಯೆ ಕಲ್ಯಾಣ ಮಂಟಪದಲ್ಲೇ ಜೋಡಿಯೊಂದು ಲಾಕ್​ಡೌನ್ ನ ಎಲ್ಲ ನಿಯಮಗಳನ್ನೂ ಪಾಲಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.ಲಾಕ್​ಡೌನ್ ನಿಯಮಗಳೊಂದಿಗೆ ಮದುವೆ ಕಾರ್ಯಕ್ರಮ ಹೀಗಿರುತ್ತದೆ ನೋಡಿ, ಅಲ್ಲಿ ಹೂಗುಚ್ಛ, ರೋಸ್​​ವಾಟರ್, ಪರ್ಫ್ಯೂಮ್ ಬದಲಾಗಿ ಸ್ಯಾನಿಟೈಸರ್, ಮಾಸ್ಕ್​​ಗಳಿಂದ ನಿಮ್ಮನ್ನು ಬರಮಾಡಿಕೊಳ್ಳಲಾಗುತ್ತದೆ. ಅಲ್ಲಿ ಸಡಗರ, ಸಂಭ್ರಮದಿಂದ, ನಗುಮೊಗದಿಂದ ನಿಮ್ಮನ್ನು ಬರಮಾಡಿಕೊಳ್ಳಲು ಚಿಕ್ಕಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಬರುವುದಿಲ್ಲ. ಅಲ್ಲಿ ಹಸ್ತಲಾಘವೂ ಇರುವುದಿಲ್ಲ. ಬದಲಾಗಿ ವ್ಯಕ್ತಿಗತ ಅಂತರ ನಿಯಮಗಳನ್ನು ಅಲ್ಲಿ ಅನುಸರಿಸಲಾಗುತ್ತದೆ.
ಇದನ್ನೂ ಓದಿ:ಕೆಲವೊಮ್ಮೆ ಚಿಕ್ಕ ಸಂಗತಿಗಳೂ ಅಮೂಲ್ಯವೆನಿಸುತ್ತವೆ. ಅದಕ್ಕೊಂದು ಸಾಕ್ಷಿ ಈ ವಿಡಿಯೋದಲ್ಲಿದೆ.
ಇದು ಕೋವಿಡ್-19 ನಂತರದಲ್ಲಿ ನಡೆಯುವ ವಿವಾಹ ಕಾರ್ಯಕ್ರಮಗಳಲ್ಲಿ ಅನುಸರಿಸಬೇಕಾದ ನಿಯಮಾವಳಿಗಳ ಚಿತ್ರಣ.ಬೆಂಗಳೂರಿನ ರಾಜಾಜಿನಗರದಲ್ಲಿ ಶುಕ್ರವಾರ ನಡೆದ ವಿವಾಹ ಮಹೋತ್ಸವದಲ್ಲಿ ಅತಿಥಿ ಮಹೋದಯರೆಲ್ಲರೂ ಕೋವಿಡ್-19 ನಂತರದ ವಿವಾಹ ಮಹೋತ್ಸವದ ‘ಹೊಸ ರುಚಿ’ ಅನುಭವಿಸಿದರು.ಇನ್ನೂ ವಿಶೇಷ ಸಂಗತಿ ಎಂದರೆ ವಿವಾಹದ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೂ ಮುನ್ನ ವಧು ವರರಿಗೆ ಥರ್ಮಲ್ ಸ್ಕ್ರೀನಿಂಗ್ ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಯಿತು.ನಾಗರಭಾವಿಯ ಎಲ್ ಶ್ರೀಧರ್ ಹಾಗೂ ಅಬ್ಬಿಗೆರೆಯ ಆರ್. ರೇಖಾ ಶುಕ್ರವಾರ ಹಸೆಮಣೆ ಏರುವ ಮೂಲಕ ಹೊಸ ಬಾಳಿಗೆ ಪಯಣ ಶುರು ಮಾಡಿದರು. ರಾಜಾಜಿನಗರದ ಸಪ್ತಪದಿ ಸಪ್ತಗಿರಿ ಪ್ಯಾಲೇಸ್​​​ನಲ್ಲಿ ಈ ವಿವಾಹ ನೆರವೇರಿತು.
ಇದನ್ನೂ ಓದಿ:ಪಿಯು ವಿದ್ಯಾರ್ಥಿಗಳಿಗೂ ಸಿಗಲಿದೆಯೇ ಉಚಿತ ಲ್ಯಾಪ್
ಅಂದಾಜು 300 ಜನ ಸೇರಬಹುದಾದ ಈ ಮಂಗಲ ಮಂಟಪದಲ್ಲಿ ಹಾಜರಿದ್ದದ್ದು ಕೇವಲ 50 ಜನ ಮಾತ್ರ… !ಆರೋಗ್ಯ ಇಲಾಖೆಯ ನಿಯಮಾವಳಿಗಳನ್ನು ಅನುಸರಿಸಿ ವಿವಾಹ ಕಾರ್ಯಕ್ರಮ ನೆರವೇರಿತು.ಸರಳವಾಗಿ ವಿವಾಹ ನೆರವೇರಿಸುವುದರಿಂದ ನಾವು ಕಳೆದುಕೊಳ್ಳುವಂಥದ್ದೇನೂ ಇಲ್ಲ. ಲಾಕ್​ಡೌನ್ ನಿಯಮಾನುಸಾರವೇ ಈ ವಿವಾಹ ನೆರವೇರಿಸಿದ್ದೇವೆ. ಅದು ನಮ್ಮ ಜವಾಬ್ದಾರಿಯೂ ಆಗಿದೆ. ನಾವು ತೀರ ಹತ್ತಿರದ ಬಂಧುಗಳನ್ನು ಮಾತ್ರ ಆಮಂತ್ರಿಸಿದ್ದು, ಮಕ್ಕಳು ಹಾಗೂ ವಯೋವೃದ್ಧರನ್ನು ಕರೆತರಬಾರದೆಂದೂ ಕೂಡ ಅತಿಥಿಗಳಿಗೆ ಮನವಿ ಮಾಡಿದ್ದೆವು. 50 ಜನ ಮಾತ್ರ ವಿವಾಹ ಸಂದರ್ಭದಲ್ಲಿ ಹಾಜರಿದ್ದರು. ನಾವು ಪೊಲೀಸ್ ಪರವಾನಗಿ ಕೂಡ ಪಡೆದಿದ್ದೇವೆ ಎಂದು ವರನ ತಂದೆ ಹೇಳಿದ್ದಾರೆ.ವ್ಯಕ್ತಿಗತ ಅಂತರ ನಿಯಮ ಅನುಸರಿಸಲು ಸ್ವಚ್ಛತಾ ಕಾರ್ಮಿಕರು ಮತ್ತು ಅಡುಗೆಯವರನ್ನು ಕಡಿಮೆ ಸಂಖ್ಯೆಯಲ್ಲಿ ನೇಮಿಸಲಾಗಿತ್ತು. ಕಲ್ಯಾಣ ಮಂಟಪದಲ್ಲಿ ಸ್ಯಾನಿಟೈಸರ್, ಮಾಸ್ಕ್ ಜತೆಗೆ ವೈದ್ಯಕೀಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ಒಂದು ಕೊಠಡಿಯಲ್ಲಿ ಕೇವಲ ಇಬ್ಬರು ಮಾತ್ರ ಇರಲು ಅನುಮತಿಸಲಾಗಿದೆ ಎಂದು ಮಂಗಲ ಮಂಟಪದ ಮುಖ್ಯಸ್ಥ ವಿ ರಂಗನಾಥ್ ತಿಳಿಸಿದರು.
ಇದನ್ನೂ ಓದಿ:ವೆಂಟಿಲೇಟರ್ ತಯಾರಿಸಲು ಭಾರತದ ಮೂರು ಕಂಪನಿಗಳಿಗೆ ನಾಸಾ ಗ್ರೀನ್ ಸಿಗ್ನಲ್
ಪೊಲೀಸ್ ಠಾಣೆಗೆ ಒಪ್ಪಿಸಲು ವಿವಾಹ ಮಹೋತ್ಸವಕ್ಕೆ ಆಗಮಿಸಿದ ಅತಿಥಿಗಳ ಪಟ್ಟಿಯನ್ನು ಹಾಗೂ ಅವರ ಥರ್ಮಲ್ ಸ್ಕ್ರೀನಿಂಗ್ ವಿವರವನ್ನೂ ಸಿದ್ಧಪಡಿಸಲಾಗಿತ್ತು.ವಿವಾಹಕ್ಕೆ ಮೇ ತಿಂಗಳಲ್ಲಿಯೇ ಹೆಚ್ಚು ಶುಭ ಮುಹೂರ್ತದ ದಿನಗಳಿದ್ದು. ಹಲವು ವಿವಾಹಗಳಿಗೆ ಮಂಗಲಮಂಟಪ ಬುಕ್ ಮಾಡಲಾಗಿತ್ತು. ಆದರೆ, ಲಾಕ್​​ಡೌನ್​​ನಿಂದಾಗಿ ಬಹುತೇಕ ವಿವಾಹ ಕಾರ್ಯಕ್ರಮಗಳು ರದ್ದುಗೊಂಡಿವೆ ಎಂದು ರಂಗನಾಥ್ ಹೇಳಿದರು.
ದೇವಾಲಯಗಳಲ್ಲಿ ಶೀಘ್ರ ಭಕ್ತರಿಗೆ ಪ್ರವೇಶ; ಮುಂಜಾಗ್ರತಾ ಕ್ರಮಗಳ ಪಟ್ಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 4 =
Remember me
