ಬೆಂಗಳೂರು:ಸರ್ಕಾರಿ ಶಾಲೆಗಳೂ ಸೇರಿ ರಾಜ್ಯ ಪಠ್ಯಕ್ರಮದ ಎಲ್ಲ ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳ ೫, ೮ ಮತ್ತು ೯ನೇ ತರಗತಿಯ ವಿದ್ಯಾರ್ಥಿಗಳಿಗೆ ೨೦೨೩-೨೪ನೇ ಸಾಲಿನ ಸಂಕಲನಾತ್ಮಕ ಮೌಲ್ಯಾಂಕನದ (ಎಸ್‌ಎ-೨) ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶುಕ್ರವಾರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.ಇತ್ತಿಚೆಗೆ ಪ್ರಕಟವಾಗಿದ್ದ ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಾಗಾಗಿ ೨೦೨೪ರ ಮಾ.೧೧ರಿಂದ ೧೪ರವರೆಗೆ ೫ನೇ ತರಗತಿಗೆ, ಮಾ.೧೧ರಿಂದ ೧೮ರವರೆಗೆ ೮ ಮತ್ತು ೯ನೇತರಗತಿಗೆ ಪಬ್ಲಿಕ್ ಪರೀಕ್ಷೆಗಳು ನಡೆಯಲಿವೆ.ಕಳೆದ ವರ್ಷ ೫ ಮತ್ತು ೮ನೇ ತರಗತಿ ಮಕ್ಕಳಿಗೂ ಮಂಡಳಿ ಪರೀಕ್ಷೆ ಆರಂಭಿಸಿದ್ದ ಸರ್ಕಾರ ಈ ವರ್ಷ ೯ನೇ ತರಗತಿ ಮಕ್ಕಳಿಗೂ ಇದನ್ನು ವಿಸ್ತರಿಸಿದೆ. ತರಗತಿವಾರು ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಂಗಳವಾರ ತನ್ನ ವೆಬ್‌ಸೈಟ್‌ನಲ್ಲಿ https://kseab.karnataka.gov.in ನಲ್ಲಿ ಪ್ರಕಟಿಸಿದೆ.ಕಳೆದ ವರ್ಷದಂತೆಯೇ ಈ ಪರೀಕ್ಷೆಗಳಿಗೆ ಮಂಡಳಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಕೊಡಲಿದೆ. ಆ ಪ್ರಕಾರ ಆಯಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಮಟ್ಟದಲ್ಲೇ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕಾಗುತ್ತದೆ.೫ನೇ ತರಗತಿ ವೇಳಾಪಟ್ಟಿ:ಮಾ.೧೧ರಂದು ಪ್ರಥಮ ಭಾಷೆ, ಮಾ.೧೨ಕ್ಕೆ ದ್ವಿತೀಯ ಭಾಷೆ, ಮಾ.೧೩ಕ್ಕೆ ಪರಿಸರ ಅಧ್ಯಯನ ಮತ್ತು ಮಾ.೧೪ ರಂದು ಗಣಿತ ಪರೀಕ್ಷೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಮಧ್ಯಾಹ್ನ ೨.೩೦ರಿಂದ ೪.೩೦ರ ವರೆಗೆ ನಡೆಯಲಿವೆ.೮ ಮತ್ತು ೯ನೇ ತರಗತಿ ವೇಳಾಪಟ್ಟಿ:ಮಾ.೧೧ ರಂದು ಪ್ರಥಮ ಭಾಷೆ, ಮಾ.೧೨ಕ್ಕೆ ದ್ವಿತೀಯ ಭಾಷೆ, ಮಾ.೧೩ರಂದು ತೃತೀಯ ಭಾಷೆ, ಮಾ.೧೪ರಂದು ಗಣಿತ, ಮಾ.೧೫ ವಿಜ್ಞಾನ, ಮಾ.೧೬ ಸಮಾಜ ವಿಜ್ಞಾನ ಮತ್ತು ಮಾ.೧೮ಕ್ಕೆ ದೈಹಿಕ ಶಿಕ್ಷಣ ಪರೀಕ್ಷೆಗಳು ನಡೆಯಲಿವೆ. ಮಧ್ಯಾಹ್ನ ೨.೩೦ರಿಂದ ಸಂಜೆ ೫ ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 9 =
Remember me
