|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಬಿಜೆಪಿಯ ಮಹತ್ವಾಕಾಂಕ್ಷಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಸುಗ್ರೀವಾಜ್ಞೆ ರೂಪದಲ್ಲಿ ಅನುಷ್ಠಾನಕ್ಕೆ ತರಲು ಸಿದ್ಧವಾಗಿರುವ ಸರ್ಕಾರ ಈ ಸಂಬಂಧ ಸಾಧಕ-ಬಾಧಕಗಳ ಕುರಿತಂತೆ ಕ್ರಿಯಾಯೋಜನೆ ರೂಪಿಸಲು ಸಜ್ಜಾಗುತ್ತಿದೆ. ಕೇವಲ ಭಾವನಾತ್ಮಕವಾಗಿ ಕಾಯ್ದೆ ರೂಪಿಸುವುದರಿಂದ ಪ್ರಯೋಜನವಿಲ್ಲ ಎಂದು ಮನಗಂಡಿರುವ ಸರ್ಕಾರ, ಕಾಯ್ದೆಯನ್ನು ಹಂತ ಹಂತವಾಗಿ ಜಾರಿಗೊಳಿಸುವ ಮೂಲಕ ಗೋವುಗಳ ಸಂರಕ್ಷಣೆ, ಅಭಿವೃದ್ಧಿ ಯಾವ ರೀತಿ ಮಾಡಬೇಕೆಂಬ ಬಗ್ಗೆ ಸ್ಪಷ್ಟತೆ ಕಂಡುಕೊಂಡಿದೆ.ಗೋಹತ್ಯೆ ನಿಷೇಧ ಕಾಯ್ದೆಯನ್ನು ಯಶಸ್ವಿ ಯಾಗಿ ಜಾರಿಗೆ ತಂದಿರುವ ಉತ್ತರ ಪ್ರದೇಶ, ಗುಜರಾತ್​ಗಳಲ್ಲಿ ಸರ್ಕಾರ ಅಧ್ಯಯನ ನಡೆಸಿದೆ. ಅಲ್ಲಿ ಕಾಯ್ದೆ ಜಾರಿ ನಂತರ ಕೈಗೊಂಡ ಕ್ರಮಗಳ ಆಧಾರದಲ್ಲೇ ರಾಜ್ಯದಲ್ಲೂ ಕೆಲವು ಯೋಜನೆ ರೂಪಿಸುವ ಬಗ್ಗೆ ಚರ್ಚೆ ನಡೆದಿರುವುದಾಗಿ ಮೂಲಗಳು ಖಚಿತಪಡಿಸಿವೆ. ಗೋವು ಸಾಗಿಸುವವರ ಮೇಲೆ ಮೊಕದ್ದಮೆ ದಾಖಲಿಸುವುದು ಹಾಗೂ ಶಿಕ್ಷೆ ಕೊಡಿಸುವುದಕ್ಕಿಂತ ಗೋವುಗಳ ರಕ್ಷಣೆಗಾಗಿ ಯೋಜನೆ ರೂಪಿಸುವ ಕಡೆ ಸರ್ಕಾರ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ.

ಇಲಾಖೆಗಳ ಸಮನ್ವಯ:ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಪಶು ಸಂಗೋಪನೆ, ಕಂದಾಯ, ಪೊಲೀಸ್ ಇಲಾಖೆ ಮಾತ್ರವಲ್ಲದೇ ಬೇರೆ ಬೇರೆ ಇಲಾಖೆಗಳ ಸಮನ್ವಯ ಬೇಕಾಗುತ್ತದೆ. ಹೀಗಾಗಿ ಅರಣ್ಯ, ಗ್ರಾಮೀಣಾಭಿವೃದ್ಧಿ, ಶಿಕ್ಷಣ ಇಲಾಖೆಗಳು ಹಾಗೂ ಸ್ಥಳೀಯಾಡಳಿತಗಳ ನೆರವನ್ನೂ ಪಡೆಯಲು ನಿರ್ಧರಿಸಲಾಗಿದೆ.
ಸಚಿವರ ಜಿಲ್ಲಾ ಪ್ರವಾಸ:ಕಾಯ್ದೆ ಜಾರಿ ಸಂಬಂಧ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕಾಯ್ದೆ ಅನುಷ್ಠಾನ, ಗೋರಕ್ಷಣೆಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಖಾಸಗಿ ಸಹಭಾಗಿತ್ವ ಬಗ್ಗೆ ಸಂಘ – ಸಂಸ್ಥೆಗಳ ಜತೆ ಮಾತುಕತೆ ನಡೆಸಲಿದ್ದಾರೆ.
ಹಾಲಿನ ಉತ್ಪಾದನೆ ಹೆಚ್ಚಳ:ಗೋಹತ್ಯೆ ನಿಷೇಧ ಜಾರಿ ಬಳಿಕ ಉತ್ತರ ಪ್ರದೇಶದಲ್ಲಿ 8 ಕೋಟಿ ಲೀಟರ್, ಗುಜರಾತ್​ನಲ್ಲಿ 4 ಕೋಟಿ ಲೀಟರ್ ಹಾಲು ಪ್ರತಿನಿತ್ಯ ಉತ್ಪಾದನೆಯಾಗುತ್ತಿದೆ. ಕಾಯ್ದೆ ಜಾರಿ ಬಳಿಕ ರಾಜ್ಯದಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚುವ ನಿರೀಕ್ಷೆ ಇದೆ. ಕೆಎಂಎಫ್ ಜತೆ ಸೇರಿ ಹಾಲು ಬಳಕೆಗೆ ಯೋಜನೆ ರೂಪಿಸಲಾಗುತ್ತದೆ.
ಉದ್ಯೋಗಾವಕಾಶ ಹೆಚ್ಚಳ?:ಗೋಶಾಲೆಗಳ ಹೆಚ್ಚಳ, ಹಾಲಿನ ಉತ್ಪಾದನೆ ವೃದ್ಧಿಯಿಂದಾಗಿ ಪಶು ಸಂಗೋಪನೆ ವಲಯದಲ್ಲಿ ಉದ್ಯೋಗ ಅವಕಾಶ ಹೆಚ್ಚಾಗಲಿದೆ. ಎಷ್ಟು ಪ್ರಮಾಣದಲ್ಲಿ ಜಾಸ್ತಿಯಾಗಬಹುದೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸಚಿವರು ಜಿಲ್ಲಾ ಪ್ರವಾಸ ಕೈಗೊಂಡರೆ ಸ್ಪಷ್ಟ ಚಿತ್ರಣ ಮೂಡಬಹುದೆಂಬುದು ಅಧಿಕಾರಿಗಳ ಅಭಿಪ್ರಾಯ.
ಇದನ್ನೂ ಓದಿ:ರೈತರ ಆದಾಯ ಹೆಚ್ಚಿಸಲು ಕನ್ನಡದಲ್ಲಿ ‘ಇಂಡಿಯನ್ ಮನಿ ಡಾಟ್ ಕಾಂ’ ವಿಶೇಷ ಕೋರ್ಸ್ ಲೋಕಾರ್ಪಣೆ
ರಾಜ್ಯದಲ್ಲಿ 145 ಗೋಶಾಲೆಗಳಿದ್ದರೆ, ಉತ್ತರ ಪ್ರದೇಶದಲ್ಲಿ 1500ಕ್ಕೂ ಅಧಿಕ ಗೋಶಾಲೆ, ಸುಮಾರು 2500 ಗೋವು ಶೆಲ್ಟರ್​ಗಳಿವೆ. ರಾಜ್ಯದಲ್ಲಿಯೂ ಆ ವ್ಯವಸ್ಥೆ ರೂಪಿಸಬೇಕಾಗಿದೆ. ಅದಕ್ಕಾಗಿಯೇ ಪ್ರತಿ ಜಿಲ್ಲೆಯಲ್ಲಿ 3-4 ಗೋಶಾಲೆ ಆರಂಭಿಸಬೇಕೆಂಬುದು ಸರ್ಕಾರದ ಉದ್ದೇಶ. ಗೋಶಾಲೆಗಳ ನಿರ್ಮಾಣ, ಅಲ್ಲಿನ ಸಿಬ್ಬಂದಿಗೆ ನರೇಗಾ ಯೋಜನೆಯ ಹಣ ಬಳಕೆ ಮಾಡಿಕೊಳ್ಳುವುದು ಸರ್ಕಾರದ ಚಿಂತನೆ. ಗೋಶಾಲೆಗಳ ನಿರ್ವಹಣೆಗೆ ಖಾಸಗಿ ಸಂಸ್ಥೆಗಳ ಜತೆ ಗ್ರಾಮ ಪಂಚಾಯಿತಿಗಳನ್ನು ಜೋಡಿಸುವ ಆಲೋಚನೆಯೂ ಇದೆ. ಗೋಮಾಳಗಳನ್ನು ಮೇವು ಬೆಳೆಸಲು ಬಳಸಿಕೊಳ್ಳುವುದಕ್ಕಾಗಿ ಅರಣ್ಯ ಇಲಾಖೆ ನೆರವು ಪಡೆಯಲಾಗುತ್ತದೆ.
ಪಶು ಆಂಬುಲೆನ್ಸ್:ಪಶು ಆಂಬುಲೆನ್ಸ್ ಯೋಜನೆ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ 10 ಹಳ್ಳಿಗೆ ಒಂದರಂತೆ ಅಥವಾ ಗೋಶಾಲೆಗೆ ಒಂದರಂತೆ ಪಶು ಆಂಬುಲೆನ್ಸ್ ಸೇವೆ ಒದಗಿ ಸುವ ಬಗ್ಗೆಯೂ ಚರ್ಚೆ ನಡೆದಿದೆ.
ಗೋಹತ್ಯೆ ನಿಷೇಧ ಎಂಬುದು ಅತ್ಯಂತ ಸೂಕ್ಷ್ಮ ವಿಚಾರ. ಕಾಯ್ದೆಯ ಯಶಸ್ವಿ ಅನುಷ್ಠಾನಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ. ತಜ್ಞರ ಜತೆಗೂ ಸಮಾಲೋಚಿಸುತ್ತೇವೆ. ಅದಕ್ಕಿಂತ ಮೊದಲು ನಮ್ಮ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ನೀಗಿಸಿಕೊಳ್ಳಲುಪ್ರಯತ್ನ ಮಾಡಲಾಗುವುದು.
|ಪ್ರಭು ಚವ್ಹಾಣ್ಪಶು ಸಂಗೋಪನೆ ಸಚಿವ
ಇದನ್ನೂ ಓದಿ:ವಾಟ್ಸ್​ಆ್ಯಪ್​ ವೆಬ್​ನಲ್ಲಿ ಇದು ಸಿಕ್ಕಿದ್ದರೆ ನೀವು ಲಕ್ಕಿನೇ; ಸಿಗದಿದ್ದವರಿಗೆ ಚಿಂತೆ ಬೇಡ…
ರಾಜ್ಯದಲ್ಲಿ ನಡೆದಿರುವ 19ನೇ ಹಾಗೂ 20ನೇ ಜಾನುವಾರು ಗಣತಿ ನಡುವೆ ದೇಸಿ ತಳಿಗಳ ಸಂಖ್ಯೆ ಕುಸಿತ ಕಂಡಿದೆ. ಮಿಶ್ರ ತಳಿಗಳು ಶೇ.34.19, ನಾಟಿ ತಳಿಗಳು ಶೆ.11.01, ಎಮ್ಮೆಗಳು ಶೇ.14 ಕುಸಿತವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಬಂದರೆ ವೃದ್ಧಿಯಾಗುತ್ತದೆ ಎಂಬುದು ಸರ್ಕಾರದ ವಿಶ್ವಾಸ.
ದೇಶದಲ್ಲಿ ವರ್ಷಕ್ಕೆ 3 ಬಿಲಿಯನ್ ಚದರ ಅಡಿ ಚರ್ಮ ಉತ್ಪನ್ನವಾಗುತ್ತದೆ. ಒಟ್ಟಾರೆ 6000 ಮಿಲಿಯನ್ ಡಾಲರ್ ವಹಿವಾಟು ನಡೆಯುತ್ತದೆ. ರಾಜ್ಯದಲ್ಲಿ 88 ಚರ್ಮ ಕೈಗಾರಿಕೆಗಳಿವೆ. ಅವುಗಳಿಗೆ ಚರ್ಮದ ಸಮಸ್ಯೆಯಾಗಬಹುದೆಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ದನದ ಮಾಂಸದ ವಹಿವಾಟು 455 ಕೋಟಿ ರೂ.ಗಳಷ್ಟಿದೆ. ಮೃಗಾಲಯ ಹಾಗೂ ಗೋಮಾಂಸ ಸೇವನೆ ಸೇರಿ ವರ್ಷಕ್ಕೆ 2.5 ಲಕ್ಷ ಜಾನುವಾರು ವಧೆಯಾಗುತ್ತದೆ ಎಂಬ ಅಂದಾಜಿದೆ. ಈ ಎರಡು ಉದ್ದಿಮೆಗಳಿಗೆ ಪರ್ಯಾಯದ ಬಗ್ಗೆ ಇನ್ನೂ ಅಧ್ಯಯನ ನಡೆದಿಲ್ಲ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ಲೂಸ್​ ಪ್ಯಾಕೆಟ್​ಗಳಲ್ಲಿ ಈ ರಾಜ್ಯದಲ್ಲಿ ಇನ್ಮುಂದೆ ಎಣ್ಣೆ ಮಾರಾಟವಿಲ್ಲ- ಇದು ಹೈಕೋರ್ಟ್​ ಆದೇಶ

ಡಿ. 21ರಂದು ಆಗಸ ನೋಡಲು ಸಜ್ಜಾಗಿ: ಗೋಚರಿಸಲಿದೆ ಈ ಶತಮಾನದ ಕೌತುಕಮಯ ದೃಶ್ಯ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:two + three =
Remember me
