ಮಂಡ್ಯ:ಶಾಲೆ ಮುಗಿಸಿಕೊಂಡು ಮನೆಗೆ ಬಂದ 9 ವರ್ಷದ ಬಾಲಕನೊಬ್ಬ ಸೀರೆಯಲ್ಲಿ ಜೋಲಿ ಕಟ್ಟಿಕಂಡು ಖುಷಿಯಿಂದ ಆಟವಾಡಲು ಹೋಗಿ ದುರಂತ ಅಂತ್ಯಕಂಡ ಘಟನೆ ಕಿಕ್ಕೇರಿ ಸಮೀಪದ ಬೇವಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಸಂಭವಿಸಿದೆ.
ಬೇವಿನಹಳ್ಳಿ ಕೊಪ್ಪಲು ಗ್ರಾಮದ ಶ್ರೀನಿವಾಸ ಅವರ ಪುತ್ರ ಸಮರ್ಥ್​(9) ಮೃತ ಬಾಲಕ. ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಸಮರ್ಥ್ ಬಂದಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಜೋಕಾಲಿ ಆಟವಾಡಬೇಕು ಅನ್ನಿಸಿ, ಅಮ್ಮನ ಸೀರೆ ತೆಗೆದುಕೊಂಡು ಈತನೇ ಜೋಲಿ ಕಟ್ಟಿದ್ದಾನೆ. ಅದೇ ಇವನ ಪಾಲಿಗೆ ಉರುಳಾಗಿ ಪ್ರಾಣ ತೆಗೆದಿದೆ.
ಜೋಲಿ ಕಟ್ಟಿ ಅದರೊಳಗೆ ಕುಳಿತು ಆಟವಾಡಲು ಸಮರ್ಥ್​ ಹೋಗಿದ್ದಾನೆ. ಈ ವೇಳೆ ಜೋಲಿಯ ಬಟ್ಟೆ ಸುರುಳಿ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಬಾಲಕನಿಗೆ ಜೋಲಿಯಲ್ಲಿ ಆಡುವುದು ಎಂದರೆ ಬಲು ಖುಷಿ. ಯಾವುದೇ ಮನೆಗೆ ಹೋದರೂ ಜೋಲಿ ಕಟ್ಟಿಕೊಡಲು ಕೇಳಿ ಆಟವಾಡುವುದಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇಷ್ಟವಾದ ಜೋಲಿಯೇ ಬಾಲಕನ ಸಾವಿಗೆ ಮುಳುವಾಗಿದ್ದು ವಿಪರ್ಯಾಸ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
HDKಗೆ ನಾಣ್ಯ​, ನೇಗಿಲು, ಸ್ಕೂಲ್​ ಬ್ಯಾಗ್​, ಕಬ್ಬು, ಬೆಲ್ಲದ ಹಾರ… ಏಷ್ಯಾ​ ಬುಕ್​ ಆಫ್​ ರೆಕಾರ್ಡ್ಸ್​- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪಂಚರತ್ನ ಯಾತ್ರೆ

ಬೆಂಗಳೂರಿನಾದ್ಯಂತ ಪೊಲೀಸ್​ ಕಣ್ಗಾವಲು: ಮೇಲ್ಸೇತುವೆಗಳಲ್ಲಿ ಸಂಚಾರ ಬಂದ್​, ವಾಚ್ ಟವರ್- ವುಮೆನ್ ಸೇಫ್ ಹೌಸ್ ನಿರ್ಮಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nineteen =
Remember me
