ರಾಮನಗರ:ತರಗತಿ ಮುಗೀತು ಇನ್ನೇನು ಮನೆಗೆ ಹೋಗಿ ಅಮ್ಮನ ಮಡಿಲು ಸೇರಬೇಕು ಎಂದು ಖುಷಿಯಿಂದ ಬರುತ್ತಿದ್ದ 5 ವರ್ಷದ ಬಾಲಕಿ ಶಾಲಾ ವಾಹನಕ್ಕೆ ಬಲಿಯಾದ ದುರ್ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ ಸಂಭವಿಸಿದೆ.
ಸಿದ್ದೇನಹಳ್ಳಿಯ ಸ್ವಾಮಿ ಎಂಬುವರ ಪುತ್ರಿ ರಕ್ಷಿತಾ(5) ಮೃತೆ. ರಾಮನಗರ ತಾಲೂಕಿನ ಬಿಡದಿ ಬಳಿಯ ರಾಮನಹಳ್ಳಿ ಗೇಟ್​ ಬಳಿ ಇರುವ ಶ್ರೀ ಸಾಯಿ ಇಂಟರ್​ ನ್ಯಾಷನಲ್​ ಶಾಲೆಯಲ್ಲಿ ರಕ್ಷಿತಾ ಯುಕೆಜಿ ಓದುತ್ತಿದ್ದಳು.
ಪ್ರತಿದಿನ ಶಾಲೆಗೆ ಶಾಲಾ ವಾಹನದಲ್ಲಿ ಹೋಗಿ ಬರುತ್ತಿದ್ದಳು. ಸೋಮವಾರ ಸಂಜೆ ಶಾಲೆಯಿಂದ ವಾಪಸಾಗುವಾಗ ಪಿಚ್ಚನಕೆರೆ ಬಳಿ ವಿದ್ಯಾರ್ಥಿಗಳನ್ನು ಇಳಿಸಿ ವಾಹನ ಮುಂದೆ ಹೊರಟಿತ್ತು. ಆದರೆ ಬಸ್​ನ ಬಾಗಿಲು ಮುಚ್ಚಿರಲಿಲ್ಲ. ತಿರುವೊಂದರಲ್ಲಿ ಚಾಲಕ ಬ್ರೇಕ್​ ಹಾಕಿದಾಗ ಸೀಟಿನಲ್ಲಿ ಕುಳಿತಿದ್ದ ರಕ್ಷಿತಾ ಮುಗ್ಗರಿಸಿ ಬಸ್​ನಿಂದ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಬಸ್​ನ ಹಿಂಬದಿ ಚಕ್ರ ರಕ್ಷಿತಾಳ ತಲೆ ಮೇಲೆ ಹರಿದಿದ್ದು, ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ವಾಹನ ಸಿಬ್ಬಂದಿ ಅಜಾಗರೂಕತೆ:ಬಾಲಕಿ ಮೃತಪಟ್ಟ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸುತ್ತಮುತ್ತಲ ಗ್ರಾಮಸ್ಥರು ಶಾಲಾ ವಾಹನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಗಳ ಶವದ ಎದುರು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಇದಕ್ಕೆ ಶಾಲಾ ಸಿಬ್ಬಂದಿಯ ಅಜಾಗರೂಕತೆಯೇ ಕಾರಣ. ಶಾಲೆ ಹಾಗೂ ಸಿಬ್ಬಂದಿ ವಿರುದ್ಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಡತಿಗಾಗಿ 4 ದಿನ ಆಸ್ಪತ್ರೆಯ ಬಾಗಿಲು ಕಾದ ಪಪ್ಪಿ… ಒಡತಿ ಬದುಕಿ ಬರಲೇ ಇಲ್ಲ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ಬೆಂಗಳೂರಿನ ವೈದ್ಯೆ ಮನೆಯಲ್ಲಿ ದರೋಡೆ; ವೃದ್ಧೆಯ ಕೈ-ಕಾಲು ಕಟ್ಟಿ 4 ಲಕ್ಷ ಮೌಲ್ಯದ ಚಿನ್ನ ದೋಚಿದ ಖದೀಮರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 8 =
Remember me
