ಹಾವೇರಿ:ಶಾಲಾ ಆವರಣದ ಗುಂಡಿಯಲ್ಲಿ ಬಿದ್ದು ಮೂವರು ಮಕ್ಕಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬ್ಯಾಡಗಿ ಪಟ್ಟಣದ 2ನೇ ನಂಬರ್ ಉರ್ದು ಶಾಲೆಯಲ್ಲಿ ಶನಿವಾರ ನಡೆದಿದೆ.
ಅಜ್ಮೀರ್ ಹಾವಣಗಿ (8), ಮೊಹಮ್ಮದ್ ಹಾವಣಗಿ (10) ಮತ್ತು ಸೈಯದ್ ಹಾವಣಗಿ (6) ಮೃತ ಬಾಲಕರು. ಇಬ್ಬರು ಬಾಲಕರು ದೇವಿಹೊಸೂರು ಗ್ರಾಮದವರು. ಮತ್ತೊಬ್ಬ ಬ್ಯಾಡಗಿ ನಿವಾಸಿ. ಗುಂಡಿಯಲ್ಲಿದ್ದ ಮಳೆ ನೀರಲ್ಲಿ ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಇನ್ಫಿ ನಾರಾಯಣ ಮೂರ್ತಿ ಅಳಿಯ, ಬ್ರಿಟನ್​ ಸಚಿವ ರಿಷಿ ಸುನಕ್​ಗೆ ಯುಕೆ ಪಬ್​ನಿಂದ ಶಾಶ್ವತ ನಿಷೇಧ..!
ಆಟವಾಡಲು ಸ್ನೇಹಿತರೊಂದಿಗೆ ಶಾಲಾ ಆವರಣಕ್ಕೆ ತೆರಳಿದ್ದರು. ಈ ವೇಳೆ ಶಾಲಾ ಕಟ್ಟಡಕ್ಕೆಂದು ತೆಗಿದಿದ್ದ ಪಿಲ್ಲರ್ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರತೆಗೆದಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ಪಾಲಕರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳ ಪರಿಶೀಲಿಸಿರುವ ಬ್ಯಾಡಗಿ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಕುಸುಮಾ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಇನ್ಸ್​ಪೆಕ್ಟರ್​ಗೆ ಶಾಕ್​: ಡಿಕೆಶಿ ಮಾತು ನಿಜವಾಯ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
