ಬೆಂಗಳೂರು:ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬೆಂಗಳೂರಿನಲ್ಲಿ ಬಂದ್ ಮಾಡಲಾಗಿದ್ದ ಶಾಲಾ-ಕಾಲೇಜುಗಳು ಸೋಮವಾರದಿಂದ ಭೌತಿಕ ತರಗತಿಗಳನ್ನು ಆರಂಭಿಸಲಿವೆ.
ಜ.6ರಿಂದ 1ರಿಂದ 9ನೇ ತರಗತಿಯವರೆಗೆ ಹಾಗೂ ಪದವಿ ಸೇರಿದಂತೆ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದೀಗ ಶಾಲಾ-ಕಾಲೇಜುಗಳು ಆಡಳಿತ ಮಂಡಳಿಗಳು ತರಗತಿಗಳ ಮರು ಆರಂಭಕ್ಕೆ ಸಿದ್ಧತೆಯನ್ನು ಮಾಡಿಕೊಂಡಿವೆ. ಈಗಾಗಲೇ ಸಿಬ್ಬಂದಿ ಮತ್ತು ಶಿಕ್ಷಕರಿಗೆ ತರಗತಿ ಆರಂಭದ ಮಾಹಿತಿ ನೀಡಿ, ಭಾನುವಾರವೇ ಸ್ವಚ್ಛತಾ ಕಾರ್ಯ ಮುಗಿಸಿದ್ದಾರೆ.
ಪಾಲಕರ ಮೊಬೈಲ್​ಫೋನ್​ ಸಂಖ್ಯೆಗೂ ಸಂದೇಶ ರವಾನಿಸಿ ಶಾಲೆಗಳ ಆರಂಭದ ವಿಷಯ ತಿಳಿಸಿದ್ದಾರೆ. ಕರೊನಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಶಾಲೆಗಳನ್ನು ತೆರೆಯಲು ಸೂಚಿಸಲಾಗಿದೆ.
ಎಲ್ಲ ತರಗತಿ ತೆರೆಯಿರಿ:ಶೈಕ್ಷಣಿಕ ವರ್ಷ ಮುಂದಿನ ಒಂದೆರಡು ತಿಂಗಳಲ್ಲಿ ಮುಗಿಯುವ ಹಂತ ತಲುಪಲಿದೆ. ಇಂತಹ ವೇಳೆಯಲ್ಲಿ ಶಾಲೆಗಳನ್ನು ತೆರೆಯಬೇಕೇ? ಎಂಬ ಆಲೋಚನೆಯನ್ನು ಬಿಟ್ಟು ಶಾಲಾ ಆಡಳಿತ ಮಂಡಳಿಗಳು ಮರಳಿ ಶಾಲೆಗಳನ್ನು ತೆರೆಯಬೇಕೆಂದು ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಖಾಸಗಿ ಶಾಲೆಗಳ ಬಳಿ ಮನವಿ ಮಾಡಿದ್ದಾರೆ.
ಶಿಕ್ಷಕರಿಗೆ ರಜೆ:ಕರೊನಾ ಮೂರನೇ ಅಲೆಯಲ್ಲಿ ಬಹುತೇಕ ಜನರಿಗೆ ಸೋಂಕು ತಗಲುದೇ ಇದ್ದರೂ, ಬಹುತೇಕರಿಗೆ ಶೀತ, ಜ್ವರ ಕಾಣಿಸಿಕೊಂಡಿದೆ. ಈ ರೀತಿ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಶಾಲೆಗಳಿಗೆ ಅವಕಾಶ ಕಲ್ಪಿಸದೇ ಇರಲು ಶಾಲಾ ಆಡಳಿತ ಮಂಡಳಿ ತೀರ್ಮಾನಿಸಿದೆ.
ಪಾಸ್ ಇಲ್ಲ:ಕರೊನಾದಿಂದ ಈಗಾಗಲೇ ಎರಡು ವರ್ಷ ಪರೀಕ್ಷೆಯಲ್ಲಿದೆಯೇ ಪಾಸ್ ಆಗಿರುವ ವಿದ್ಯಾರ್ಥಿಗಳು ಈ ಬಾರಿ ಕೂಡ ಪಾಸ್ ಮಾಡುತ್ತಾರೆ ಎಂಬ ಆಲೋಚನೆ ಬಿಟ್ಟು ಬಿಡಬೇಕು. ಈ ಬಾರಿ ಕನಿಷ್ಠ ಮೌಲ್ಯಮಾಪನ ಇಲ್ಲದೆಯೇ ಪಾಸ್ ಮಾಡುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕಿದೆ ಎಂದು ಶಾಲಾ ಆಡಳಿತ ಮಂಡಳಿಗಳು ಪಾಲಕರಿಗೆ ತಿಳಿಸಿವೆ.
ಪ್ರಧಾನಿಗೇ ನೇರ ತಲುಪಿತು ಧರ್ಮಸ್ಥಳದ ಪ್ರಸಾದ; ಶಾಸಕರು ಮೋದಿಗೆ ನೀಡಿದರು ಸ್ವರ್ಣಖಚಿತ ಸ್ಫಟಿಕ ರುದ್ರಾಕ್ಷಿ ಹಾರ

ನಾಳೆ ಈ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಯಾವ ಕೆಲಸವೂ ಆಗಲ್ಲ; ನೌಕರರಿಂದ ರಾಜಕೀಯ ಪಕ್ಷದ ವಿರುದ್ಧ ಹೋರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + three =
Remember me
