ಬೆಂಗಳೂರು:ಕಳೆದ ಎರಡು ವರ್ಷದಿಂದ ಕರೊನಾ ಹಾವಳಿ ಕಾರಣಕ್ಕೆ ಅಸ್ತವ್ಯಸ್ತಗೊಂಡಿದ್ದ ಶೈಕ್ಷಣಿಕ ಕ್ಷೇತ್ರಕ್ಕೆ ಈ ಬಾರಿ ಪಠ್ಯಪುಸ್ತಕ ವಿವಾದ ಅಡ್ಡಗಾಲು ಹಾಕಿದೆ. ಹೊಸ ಪಠ್ಯ ಸೇರ್ಪಡೆ, ಕೈಬಿಡಲಾದ ಅಂಶ ಕುರಿತ ರಾಜಕೀಯ ಹಗ್ಗ-ಜಗ್ಗಾಟದಲ್ಲಿ ಪುಸ್ತಕಗಳ ಮುದ್ರಣ ಹಾಗೂ ಪೂರೈಕೆ ವಿಳಂಬವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ ಎಂದು ಶಿಕ್ಷಣ ತಜ್ಞರು, ಪಾಲಕರಲ್ಲಿ ತಳಮಳ ಮೂಡಿದೆ. ಶೈಕ್ಷಣಿಕ ವರ್ಷಾರಂಭದ 15 ದಿನಗಳ ಮುನ್ನ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ಹಮ್ಮಿಕೊಂಡು ಉತ್ಸಾಹದ ವಾತಾವರಣವನ್ನು ಸರ್ಕಾರ ಸೃಷ್ಟಿಸಿತ್ತು. ಆದರೆ, ಪಠ್ಯ ವಿವಾದ ಭುಗಿಲೆದ್ದ ಬಳಿಕ ಶೈಕ್ಷಣಿಕ ವಾತಾವರಣ ಹದಗೆಡುವ ಭೀತಿ ಕಾಡಲಾರಂಭಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುರ್ತಾಗಿ ಮಧ್ಯಪ್ರವೇಶಿಸಿ ಬಿಕ್ಕಟ್ಟು ಬಗೆಹರಿಸಬೇಕೆಂದು ಸಾಹಿತಿಗಳು, ಪ್ರಮುಖರು ಹಾಗೂ ಪಾಲಕರು ಒತ್ತಾಯಿಸಲಾರಂಭಿಸಿದ್ದಾರೆ. ವಿವಾದಕ್ಕೆ ರ್ತಾಕ ಅಂತ್ಯ ಕಾಣಿಸದಿದ್ದರೆ ಬಿಜೆಪಿ ವಿರುದ್ಧ ಜನಸಾಮಾನ್ಯರು ಅಸಮಾಧಾನ ತೋರಬಹುದು ಎಂಬ ಅಳುಕು ಪಕ್ಷದೊಳಗೆ ಮನೆ ಮಾಡಿದೆ. ‘ಅಸಹಿಷ್ಣುತೆ, ದ್ವೇಷ’ದ ನಂಜು ಶಿಕ್ಷಣ ಕ್ಷೇತ್ರವನ್ನು ಆವರಿಸಿಕೊಳ್ಳುವ ದಿಗಿಲು ವ್ಯಕ್ತವಾಗಿದೆ. ಮಕ್ಕಳ ಕಲಿಕಾ ವ್ಯತ್ಯಾಸ ಸರಿದೂಗಿಸಲು ಶಿಕ್ಷಕರು ಸ್ವಯಂಪ್ರೇರಣೆಯಿಂದ 15 ದಿನಗಳ ಬೇಸಿಗೆ ರಜೆಯನ್ನು ಬಿಟ್ಟುಕೊಟ್ಟಿದ್ದಾರೆ. ಪಠ್ಯ ವಿವಾದ ಕಾರಣ ಶಿಕ್ಷಕರ ಸಮೂಹದ ‘ರಜೆ ತ್ಯಾಗ’ದ ಉದ್ದೇಶವೇ ನಿರರ್ಥಕವಾಗುವ ಸಾಧ್ಯತೆಗಳಿವೆ.
ನನ್ನ ಕಥನ ಭಾಗದ ಪಾಠ ಮಾಡಬೇಡಿ: ಪಠ್ಯಪುಸ್ತಕದಿಂದ ತಮ್ಮ ಕಥನ ಭಾಗವನ್ನು ಕೈಬಿಡಬೇಕೆಂದು ಮಂಗಳವಾರ ಹೇಳಿಕೆ ನೀಡಿದ್ದ ಹಿರಿಯ ಸಾಹಿತಿ ದೇವನೂರ ಮಹಾದೇವ, ಒಂದು ವೇಳೆ ಈಗಾಗಲೆ ಪಠ್ಯಪುಸ್ತಕ ಮುದ್ರಣವಾಗಿ ಮಕ್ಕಳ ಕೈ ಸೇರಿದ್ದರೆ ತಮ್ಮ ಕಥನ ಭಾಗದ ಪಾಠ ಬೋಧನೆ ಮಾಡಬಾರದು ಎಂದು ಬುಧವಾರ ಆಗ್ರಹಿಸಿದ್ದಾರೆ. ಪಠ್ಯಪುಸ್ತಕ ಈಗಾಗಲೆ ಮುದ್ರಣವಾಗಿರುವ ಹಿನ್ನೆಲೆಯಲ್ಲಿ ದೇವನೂರ ಅವರ ಕಥನ ಭಾಗವನ್ನು ಕೈಬಿಡಲು ಸಾಧ್ಯವಿಲ್ಲ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ಸರಿಯಲ್ಲ. ಪಠ್ಯ ಮಕ್ಕಳ ಕೈಸೇರಿದ್ದರೆ ನನ್ನ ಕಥನ ಭಾಗವನ್ನು ಮಕ್ಕಳಿಗೆ ಪಾಠ ಮಾಡದಂತೆ ಸರ್ಕಾರ ಶಿಕ್ಷಕರಿಗೆ ನಿರ್ದೇಶನ ನೀಡಬೇಕು. ಸರ್ಕಾರ ಮತ್ತು ಅಧಿಕಾರ ಅವರ ಕೈಯಲ್ಲೇ ಇದ್ದು, ಈ ನಿಟ್ಟಿನಲ್ಲಿ ಸಚಿವರು ಕ್ರಮ ವಹಿಸಲಿ ಎಂದರು.
ರಾಜಕೀಯ ಕಾರಣಕ್ಕೆ ಪಠ್ಯ ಪುಸ್ತಕ ವಿವಾದ ಸೃಷ್ಟಿಸಲಾಗಿದೆ ಎಂದು ಸರ್ಕಾರ ಸಾಬೀತುಪಡಿಸಿದ್ದು, ರ್ತಾಕ ಅಂತ್ಯ ಕಾಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗಾಗಲೇ ಶೇ.82ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಕಲಿಕಾ ಚೇತರಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಎಲ್ಲ ಮಕ್ಕಳಿಗೆ ಪಠ್ಯಪುಸ್ತಕ ಸಿಗಲಿದೆ. ಸುಳ್ಳು ಹೇಳುವ ಅಗತ್ಯವೇ ಇಲ್ಲ.
|ಬಿ.ಸಿ. ನಾಗೇಶ್ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಭಿನ್ನಾಭಿಪ್ರಾಯಗಳು ರ್ತಾಕ ಅಂತ್ಯಕಾಣುವ ತನಕ ಸಮಿತಿ ಸಿದ್ಧಪಡಿಸಿರುವ ಹೊಸ ಪಠ್ಯವನ್ನು ತಡೆಹಿಡಿದು ಹಿಂದಿನ ಪಠ್ಯವನ್ನೇ ಮುಂದುವರಿಸುವಂತೆ ಸರ್ಕಾರ ತಕ್ಷಣವೇ ಸುತ್ತೋಲೆ ಹೊರಡಿಸಿ, ಕಲುಷಿತ ವಾತಾವರಣವನ್ನು ತಿಳಿಗೊಳಿಸಬೇಕು.
|ನಾಡೋಜ ಡಾ. ಹಂಪ ನಾಗರಾಜಯ್ಯಹಿರಿಯ ಸಾಹಿತಿ
ಪಠ್ಯಪುಸ್ತಕಗಳ ವಿಷಯದಲ್ಲಿ ಈಗ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿಯವರು ಮಧ್ಯ ಪ್ರವೇಶಿಸಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಒಟ್ಟು ಜನರಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು.
|ಪ್ರೊ.ಬರಗೂರು ರಾಮಚಂದ್ರಪ್ಪಹಿರಿಯ ಸಾಹಿತಿ
ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಬಿಜೆಪಿಯ ಅಜೆಂಡಾದಿಂದ ಶಿಕ್ಷಣ ಕ್ಷೇತ್ರ ಕಲುಷಿತವಾಗುತ್ತಿದೆ. ರಾಜಕಾರಣಿಗಳು ಮಕ್ಕಳ ಬದುಕಿನ ಮೇಲೆ ಕೆಟ್ಟ ವಾತಾವರಣ ಬೀರುತ್ತಿದ್ದಾರೆ ಎಂಬ ಆತಂಕ ಪಾಲಕರ ಮನಸ್ಸಿನಲ್ಲಿ ಮೂಡಿದೆ.
|ಎಚ್.ಡಿ.ಕುಮಾರಸ್ವಾಮಿಮಾಜಿ ಮುಖ್ಯಮಂತ್ರಿ
ಶೇ.50 ಪುಸ್ತಕ ಪೂರೈಕೆ:ಈಗಾಗಲೇ ಶೇಕಡ 80 ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಪರಿಷ್ಕೃತ ಪಠ್ಯಪುಸ್ತಕಗಳ ಮುದ್ರಣವೂ ಮುಗಿದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಸಮಸ್ಯೆಯಾಗದು. ಜೂ.1ಕ್ಕೆ ತರಗತಿ ಆರಂಭವಾಗುತ್ತಿದ್ದಂತೆ ಪುಸ್ತಕಗಳನ್ನು ಒದಗಿಸಲಾಗುತ್ತದೆ ಎಂದು ಇಲಾಖೆ ಹೇಳುತ್ತದೆ. ಆದರೆ ವಿವಿಧ ಜಿಲ್ಲೆಗಳಿಂದ ಲಭ್ಯ ಮಾಹಿತಿ ಪ್ರಕಾರ ಹಲವು ಜಿಲ್ಲೆಗಳಿಗೆ ಶೇ.50ರಷ್ಟು ಪುಸ್ತಕ ಮಾತ್ರ ಪೂರೈಕೆಯಾಗಿವೆ. ವಿವಾದದ ಬಗ್ಗೆ ನಮಗೇನೂ ಗೊತ್ತಿಲ್ಲ, ವಿಳಂಬಕ್ಕೆ ಕಾರಣವೇನು ತಿಳಿದಿಲ್ಲ. ಪಠ್ಯ ಪುಸ್ತಕಗಳ ಸರಬರಾಜು ಈ ಬಾರಿ ಮಂದಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಏಕಪಕ್ಷೀಯ ನಿರ್ಧಾರ?:ಪಠ್ಯ ಪುಸ್ತಕ ಪರಿಷ್ಕರಣೆ ಕಾಲ ಕಾಲಕ್ಕೆ ಬದಲಾಗುವುದು ಹೊಸದೇನೂ ಅಲ್ಲ. ಆದರೆ ಸಮಿತಿ ರಚನೆಗೆ ಮುನ್ನ ಸರ್ಕಾರ ಶಿಕ್ಷಣ ತಜ್ಞರು, ಸಚಿವ ಸಂಪುಟ ಸಹೋದ್ಯೋಗಿಗಳು, ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದರೆ ಈಗ ಉಂಟಾಗಿರುವ ವಿವಾದ ತಪ್ಪಿಸಲು ಸಾಧ್ಯವಿತ್ತು. ಆಯಾ ವಿಷಯದ ತಜ್ಞರು ಸಮಿತಿಯಲ್ಲಿರಬೇಕಾಗಿತ್ತು. ಹಾಗಾಗಿದ್ದರೆ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಮಿತಿಯನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ಕೆಲ ತಪು್ಪ ಮಾಹಿತಿ ನೀಡುವುದು ತಪು್ಪತ್ತಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
ಮುದ್ರಣ ಕಾಗದದ ಅಭಾವ:ಯೂಕ್ರೇನ್-ರಷ್ಯಾ ಯುದ್ಧದ ಪರಿಣಾಮ ಪ್ರಾರಂಭಿಕ ಹಂತದಲ್ಲಿ ಮುದ್ರಣ ಕಾಗದದ ಅಭಾವ ಎದುರಾಯಿತು. ನಿರಂತರ ಪ್ರಯತ್ನದ ಮಧ್ಯೆಯೂ ಮುದ್ರಣ ಕಾಗದ ಸಕಾಲಕ್ಕೆ ಲಭ್ಯವಾಗಲಿಲ್ಲ. ಪೂರ್ಣ ಪ್ರಮಾಣದಲ್ಲಿ ಆಮದು ಮುದ್ರಣ ಕಾಗದ ಅವಲಂಬನೆಯಿಂದ ಸಮಸ್ಯೆಯಾಗಿದೆ ಎಂದು ಇಲಾಖೆ ಮೂಲಗಳು ಸಮರ್ಥನೆ ಮಾಡಿಕೊಳ್ಳುತ್ತಿವೆ.
|ಲಕ್ಷ್ಮೀಕಾಂತ್ ಕುಲಕರ್ಣಿಯಾದಗಿರಿ
ಪಠ್ಯ ಪರಿಷ್ಕರಣೆಯ ವಿವಾದ, ವಿದ್ಯಾರ್ಥಿಗಳಿಗೆ ಪುಸ್ತಕ ಲಭ್ಯತೆಯಲ್ಲಿ ವಿಳಂಬ ಒಂದೆಡೆಯಾದರೆ, ಈಗಾಗಲೇ ಮುದ್ರಣಗೊಂಡಿರುವ 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ವಿಷಯ ಭಾಗ-1ರ ಲಕ್ಷಾಂತರ ಪಠ್ಯಪುಸ್ತಕಗಳು ಪ್ರಸಕ್ತ ಸಾಲಿಗೆ ಅನುಪಯುಕ್ತವಾಗಿದ್ದು, ನಷ್ಟ ಸರಿದೂಗಿಸುವುದು ಹೇಗೆ ಎಂಬ ವಿಚಾರ ಶಿಕ್ಷಣ ಇಲಾಖೆಗೆ ತಲೆನೋವು ತಂದಿಟ್ಟಿದೆ.
ಹೊಸ ಧರ್ಮಗಳ ಉದಯಕ್ಕೆ ಕಾರಣಗಳು, ಟಿಪ್ಪು ಸುಲ್ತಾನ್ ಸಾಧನೆ ಮತ್ತು ಕೊಡುಗೆ ಕುರಿತ ಪಾಠವನ್ನು ಪಠ್ಯದಿಂದ ತೆಗೆದುಹಾಕುವ ಮುನ್ನವೇ 2021-22ನೇ ಸಾಲಿನಲ್ಲಿ 83 ಶೀರ್ಷಿಕೆಗಳ 6.71 ಲಕ್ಷ ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿತ್ತು. ಪಠ್ಯ ಪರಿಷ್ಕರಣೆ ನಂತರ ಈ ಪುಸ್ತಕಗಳು 2022-23ರ ಶೈಕ್ಷಣಿಕ ವರ್ಷಕ್ಕೆ ಅನುಪಯುಕ್ತವಾಗಿದ್ದು, ಸರ್ಕಾರಕ್ಕೆ ಸುಮಾರು 2.5 ಕೋಟಿ ರೂ. ನಷ್ಟವಾಗಿದೆ. ಸದ್ಯ ಅನುಪಯುಕ್ತ ಪುಸ್ತಕಗಳನ್ನು ನಿಯಮಾನುಸಾರ ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಸಂಘಕ್ಕೆ ಜಮೆ ಮಾಡುವಂತೆಯೂ ಇಲ್ಲ. ಕಾರಣ ಈ ಪುಸ್ತಕಗಳು ಬೇರೆಯವರಿಗೆ ದೊರೆತರೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆ.
ಸರ್ಕಾರ ಲಕ್ಷಗಟ್ಟಲೇ ಪಠ್ಯಪುಸ್ತಕ ಗಳನ್ನು ಮುದ್ರಿಸಿ ಅನುಪಯುಕ್ತ ಗೊಳಿಸುವ ಮೂಲಕ ಕೋಟ್ಯಂತರ ರೂ. ನಷ್ಟ ಮಾಡಿದೆ. ಜನರ ತೆರಿಗೆ ಹಣ ಈ ರೀತಿ ಪೋಲು ಮಾಡುವುದು ಸರಿಯೇ? ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುವ ಪುಸ್ತಕಗಳು ಭಜ್ಜಿ, ಸುಸಲಾ ಅಂಗಡಿಗಳಿಗೆ ಕಳಿಸುತ್ತಿರುವುದು ವರ್ತಮಾನದ ದುರಂತ.
|ಭೀಮು ಕೋಲಿಸಾಮಾಜಿಕ ಕಾರ್ಯಕರ್ತ
ಅಲ್ಲದೆ, ಸರ್ಕಾರ ಹಠಕ್ಕೆ ಬಿದ್ದಂತೆ ಪಠ್ಯಪುಸ್ತಕ ಪರಿಷ್ಕರಿಸಿದ್ದರ ಪರಿಣಾಮ ನಷ್ಟವಾಗಲಿರುವ 2.5 ಕೋಟಿ ರೂ. ಯಾವ ರೀತಿ ಸರಿದೂಗಿಸಬೇಕು ಎಂಬುದು ಅಧಿಕಾರಿಗಳಿಗೆ ತಿಳಿಯದಾಗಿದೆ. ಅನುಪಯುಕ್ತಗೊಳ್ಳುವ ಪಠ್ಯಪುಸ್ತಕ ಹರಾಜು ಮಾಡಿ ಹೊಸದಾಗಿ ಮುದ್ರಿಸುವ ಬಗ್ಗೆ ಸಮಿತಿ ಸಲ್ಲಿಸಿದ ವರದಿಗೆ ಇಲಾಖೆ ಸಚಿವ ಬಿ.ಸಿ. ನಾಗೇಶ್ ಅನುಮೋದನೆ ನೀಡಿದ ಕುರಿತು ‘ವಿಜಯವಾಣಿ’ ಸಂರ್ಪಸಿದಾಗ, ತಮಗೆ ಮಾಹಿತಿ ಇಲ್ಲ ಎಂದು ಸಚಿವರು ಹೇಳಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ಕ್ರೂಸರ್ ಅಪಘಾತ ಪ್ರಕರಣ; ಸತ್ತವರ ಸಂಖ್ಯೆ 10ಕ್ಕೆ ಏರಿಕೆ..

ರಾಜ್ಯದಲ್ಲಿ ಮತ್ತೊಂದು ಮದ್ವೆ ದಿಬ್ಬಣದ ವಾಹನ ಅಪಘಾತ; 20ಕ್ಕೂ ಅಧಿಕ ಜನರಿದ್ದ ಟೆಂಪೊ ಪಲ್ಟಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × one =
Remember me
