ಬಾಗಲಕೋಟೆ:ಜುಲೈ 1ಕ್ಕೆ ಶಾಲೆ ಆರಂಭ ಎನ್ನುವುದು ಸರ್ಕಾರದ ನಿರ್ಧಾರಿತ ದಿನಾಂಕ ಅಲ್ಲ. ಪಾಲಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕವೇ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್​ ತಿಳಿಸಿದರು.
ಮೊದಲು ಪಾಲಕರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಈ ಸಂಬಂಧ ಮೇ 31ರಂದು ಕೇಂದ್ರದಿಂದ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಜೂನ್ 10, 11, 12ರಂದು ಪಾಲಕರ ಸಭೆ ನಡೆಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿರಿಸುವರ್ಣಸೌಧಕ್ಕೆ ಸರ್ಕಾರಿ ಕಚೇರಿ ಸ್ಥಳಾಂತರಿಸಲು ಸಿಎಂ ಗಡುವು
ಜುಲೈ 1ಕ್ಕೆ ಶಾಲೆ ಆರಂಭ ಎನ್ನುವುದು ಸರ್ಕಾರ ನಿರ್ಧರಿಸಿದ್ದಲ್ಲ. ಶಿಕ್ಷಣ ಇಲಾಖೆ ಯೋಚಿಸಿರುವ ದಿನಾಂಕ ಅಷ್ಟೆ. ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರ ಜತೆ ಸಂವಾದ ನಡೆಸಬೇಕು. ಜೂನ್ 15ರೊಳಗಾಗಿ ಪಾಲಕರು, ಪೋಷಕರು, ಎಸ್​ಡಿಎಂಸಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಸುರೇಶ್ ಕುಮಾರ್​ ತಿಳಿಸಿದರು
ಇದನ್ನೂ ಓದಿರಿಗ್ರಾಪಂ ಚುನಾವಣೆ ಮುಂದೂಡಿಕೆಗೆ ಕಾಂಗ್ರೆಸ್ ವಿರೋಧ.. ಹೋರಾಟದ ಎಚ್ಚರಿಕೆ ಕೊಟ್ಟ ಸಿದ್ದು!
ಶಾಲೆ ಆರಂಭಿಸಿದರೆ ಹೇಗೆ ಮಾಡಬೇಕು, ಮುಂದಿನ ತರಗತಿಗಳು, ಮಕ್ಕಳ ಆಟ, ವ್ಯಾಯಾಮ ಹೇಗೆ?.. ಇವುಗಳ ಕುರಿತು ಪಾಲಕರ ಅಭಿಪ್ರಾಯ ಪಡೆಯಲಾಗುವುದು. ಫ್ರೀ ಪ್ರೈಮರಿ ಆರಂಭ ಬೇಡ ಎನ್ನುವ ಅಭಿಪ್ರಾಯ ಇದೆ. ಕೇಂದ್ರದಿಂದ ಸಲಹೆ ಬಂದ ಬಳಿಕ ಶಾಲೆ ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಇದನ್ನೂ ಓದಿರಿ‘ನನ್ನ ಮಕ್ಕಳನ್ನ ಈ ವರ್ಷ ಶಾಲೆಗೆ ಕಳುಹಿಸಲ್ಲ’….. ಪಾಲಕರಿಗೆ ಇರುವ ಆಯ್ಕೆಗಳೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 7 =
Remember me
