| ವಿ.ಕೆ.ರವೀಂದ್ರ ಕೊಪ್ಪಳ
ತನ್ನದಲ್ಲದ ತಪ್ಪಿಗೆ ಜೈಲುವಾಸ ಅನುಭವಿಸಿ, ಹಲವು ವರ್ಷಗಳಿಂದ ಫಲಿತಾಂಶಕ್ಕಾಗಿ ಯುವಕನೊಬ್ಬ ಪಿಯು ಮಂಡಳಿಗೆ ಅಲೆದಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ.
ತಾಲೂಕಿನ ಮುನಿರಾಬಾದ್​ನ ವಿಜಯನಗರ ಸಂಯುಕ್ತ ಕಾಲೇಜಿನಲ್ಲಿ ಫಕ್ರುದ್ದೀನ್ 2003-04ರಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯು ಅಭ್ಯಾಸ ಮಾಡಿದ್ದಾರೆ. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ವಿಷಯದಲ್ಲಿ ಉತ್ತೀರ್ಣನಾಗಿದ್ದಾರೆ. ಇಂಗ್ಲಿಷ್, ಲೆಕ್ಕಶಾಸ್ತ್ರ ಮತ್ತು ಇತಿಹಾಸ ವಿಷಯದಲ್ಲಿ ಅನುತ್ತೀರ್ಣನಾಗಿದ್ದು, ವರ್ಷದ ಬಳಿಕ 2005ರ ಜೂನ್​ನಲ್ಲಿ ಪೂರಕ ಪರೀಕ್ಷೆಗೆ ಹಾಜರಾಗಿದ್ದ. ಇಂಗ್ಲಿಷ್ ಹಾಗೂ ಲೆಕ್ಕಶಾಸ್ತ್ರ ವಿಷಯದ ಪರೀಕ್ಷೆ ಬರೆದಿದ್ದು, ಇತಿಹಾಸ ವಿಷಯ ಪರೀಕ್ಷೆ ವೇಳೆ ಜಾಗೃತದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರನ್ನು ನಕಲಿ ವಿದ್ಯಾರ್ಥಿ ಎಂದು ಆರೋಪಿಸಿ, ಕೊಪ್ಪಳ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಂತರ ಜಿಲ್ಲಾ ನ್ಯಾಯಾಲಯವು 2014ರ ಅಕ್ಟೋಬರ್​ನಲ್ಲಿ ವಿದ್ಯಾರ್ಥಿ ನಿದೋಷಿ ಎಂದು ತೀರ್ಪು ನೀಡಿದೆ.
ಬಳಿಕ ಪಿಯು ಮಂಡಳಿ ಪ್ರಕರಣ ಸಂಬಂಧ ಮೇಲ್ಮನವಿಯನ್ನೂ ಸಲ್ಲಿಸಿಲ್ಲ. ಹೀಗಾಗಿ ಫಲಿತಾಂಶ ಪ್ರಕಟವಾಗಬಹುದೆಂದು ವಿದ್ಯಾರ್ಥಿ ನಾಲ್ಕು ವರ್ಷ ಕಾದರೂ ಫಲಿತಾಂಶ ಬರಲಿಲ್ಲ. ನಂತರ ಮಂಡಳಿ ಸಂರ್ಪಸಿದಾಗ ಕಾಲೇಜಿನಿಂದ ಪತ್ರವ್ಯವಹಾರ ನಡೆಸುವಂತೆ ತಿಳಿಸಿದ್ದಾರೆ. 2018ರಿಂದಲೂ ವಿದ್ಯಾರ್ಥಿ ಪ್ರಶ್ನೆಗೆ ಮಂಡಳಿಯಿಂದ ಸರಿಯಾದ ಉತ್ತರ ಬಂದಿಲ್ಲ. ಹಲವು ಬಾರಿ ಸಂರ್ಪಸಿದ ನಂತರ ಮತ್ತೊಮ್ಮೆ ಪರೀಕ್ಷೆ ಬರೆಯುವಂತೆ ತಿಳಿಸಿ ಕೈ ತೊಳೆದುಕೊಂಡಿದ್ದಾರೆ. ಸದ್ಯ ಪಠ್ಯಕ್ರಮ ಬದಲಾಗಿದ್ದು, ಅಷ್ಟು ವಿಷಯಗಳ ಪರೀಕ್ಷೆ ಬರೆಯುವುದು ಹೇಗೆ ? ವಯೋಮಿತಿ ಮೀರುತ್ತಿರುವ ಕಾರಣ ಮುಂದೆ ನೌಕರಿ ಮಾಡುವ ಕನಸು ಕಮರುತ್ತಿದೆ ಎಂಬುದು ವಿದ್ಯಾರ್ಥಿ ಅಳಲು.
ಅವಮಾನಕ್ಕೆ ಉತ್ತರಿಸಬೇಕು: ನನ್ನದೇನು ತಪ್ಪಿಲ್ಲದಿದ್ದರೂ ನಕಲಿ ವಿದ್ಯಾರ್ಥಿ ಎಂದು ಜೈಲಿಗೆ ಕಳಿಸಲಾಯಿತು. ಇದರಿಂದ ನನಗೆ, ಕುಟುಂಬದವರಿಗೆ ಸಾಕಷ್ಟು ಅವಮಾನವಾಗಿದೆ. ನನ್ನನ್ನು ಅವಮಾನಿಸಿದವರಿಗೆ ಫಲಿತಾಂಶ ತೋರಿಸಬೇಕೆಂಬುದು ನನ್ನ ಹಠ. ಜತೆಗೆ ನನಗಾದ ಅನ್ಯಾಯ ಇತರಿಗೆ ಆಗಬಾರದು. ಹೀಗಾಗಿ ಹೋರಾಟ ಮುಂದುವರಿಸಿರುವೆ ಎನ್ನುತ್ತಾರೆ ಫಕ್ರುದ್ದೀನ್.
ವಿದ್ಯಾರ್ಥಿ ಮೂರು ವಿಷಯಗಳಲ್ಲಿ ಉತ್ತೀರ್ಣನಾಗಿದ್ದು, ಬಾಕಿ ಮೂರರ ಫಲಿತಾಂಶ ಇಲಾಖೆಯಲ್ಲಿ ಇಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ವಿದ್ಯಾರ್ಥಿ ಬರೆದ ಇಂಗ್ಲಿಷ್, ಲೆಕ್ಕಶಾಸ್ತ್ರ ಹಾಗೂ ಇತಿಹಾಸ ವಿಷಯದ ಉತ್ತರ ಪತ್ರಿಕೆಗಳೆಲ್ಲಿ ಎಂಬ ಪ್ರಶ್ನೆ ಎದುರಾಗಿದೆ. ಇತಿಹಾಸ ವಿಷಯ ಪರೀಕ್ಷೆ ವೇಳೆ ದಾಳಿ ನಡೆದಿದ್ದು, ಅದರ ಫಲಿತಾಂಶ ಕೊಡದಿದ್ದರೂ ಪರವಾಗಿಲ್ಲ. ಇಂಗ್ಲಿಷ್, ಲೆಕ್ಕಶಾಸ್ತ್ರ ವಿಷಯಗಳ ಫಲಿತಾಂಶವಾದರೂ ನೀಡಿ ಎಂದು ವಿದ್ಯಾರ್ಥಿ ಅಂಗಲಾಚಿದರೂ ಅಧಿಕಾರಿಗಳು ದಾಖಲೆಗಳಿಲ್ಲವೆಂದು ಸಾಗ ಹಾಕುತ್ತಿದ್ದಾರೆ.
ವಿದ್ಯಾರ್ಥಿ ದಾಖಲೆಗಳನ್ನು ಪಡೆದು ಇಲಾಖೆಗೆ ಕಳಿಸಲಾಗುವುದು. ಮಂಡಳಿ ಅಧಿಕಾರಿಗಳೊಂದಿಗೆ ರ್ಚಚಿಸಿ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತೇವೆ.
| ಡಿ.ಬಿ.ಗಡೇದ್ಡಿಡಿಪಿಯು, ಕೊಪ್ಪಳ.
ನನ್ನದೇನೂ ತಪ್ಪಿಲ್ಲದಿದ್ದರೂ ನಕಲಿ ವಿದ್ಯಾರ್ಥಿ ಎಂದು ಜೈಲಿಗೆ ಕಳಿಸಿದರು. ಆದರೆ, ನ್ಯಾಯಾಲಯ ನನಗೆ ನ್ಯಾಯ ನೀಡಿದೆ. ಪಿಯು ಮಂಡಳಿ ನನ್ನ ಫಲಿತಾಂಶ ಪ್ರಕಟಿಸುತ್ತಿಲ್ಲ. ಇಷ್ಟು ವರ್ಷ ಅಲೆದ ಮೇಲೆ ಮತ್ತೊಮ್ಮೆ ಪರೀಕ್ಷೆ ಬರೆಯುವಂತೆ ಹೇಳುತ್ತಿದ್ದಾರೆ. ವಯೋಮಿತಿ ಮೀರುತ್ತಿದ್ದು, ನೌಕರಿ ಮಾಡಬೇಕೆಂಬ ಆಸೆಯೂ ಕಮರುತ್ತಿದೆ.
| ಫಕ್ರುದ್ದೀನ್ನೊಂದ ವಿದ್ಯಾರ್ಥಿ.
ಐಸಿಸ್​ ನೇಮಕಕ್ಕೆ ನೆರವಾಗುತ್ತಿದ್ದ ಬೆಂಗಳೂರಿನ ಯುವಕ ಸಿರಿಯಾದಲ್ಲಿ ಹತ್ಯೆ; ಶ್ರೀಮಂತ ಕುಟುಂಬದವ 7 ವರ್ಷದಿಂದ ಕಣ್ಮರೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − two =
Remember me
