ಚನ್ನಮ್ಮ ಕಿತ್ತೂರು :ಸಿಲ್ ಡೌನ್ ಜನತೆಯ ಬದುಕು ನರಕಯಾತನೆ ಕುರಿತು ದಿಗ್ವಿಜಯ ವಾಹಿನಿಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಸಮಾಜ‌ ಸೇವಕ ಹಬೀಬ ಶಿಲೇದಾರ 80 ಕುಟುಂಬಗಳಿಗೆ ಆಹಾರ‌ದಾನ್ಯ, ತರಕಾರಿ ಕಿಟ್, 10ಸಾವಿರ ಧನ ಸಹಾಯ ವಿತರಿಸಿ ಮಾನವಿಯತೆ ಮೆರೆದರು.
ಇಲ್ಲಿಯ ಸೋಮವಾರ ಪೇಟೆಯ ರಾವಳ ಓಣಿಯಲ್ಲಿ ಇತ್ತಿಚ್ಚೆಗೆ ಮೂರು ಕೋರಾನಾ ಪ್ರಕರಣ ಕಂಡು ಬಂದ ಹಿನ್ನೆಲೆ ಈ ಪ್ರದೇಶವನ್ನು ಸಿಲ್‌ಡೌನ್ ಮಾಡಲಾಗಿತ್ತು. ಕಾರಣ ಕಳೆದ ನಾಲ್ಕು ದಿನಗಳಿಂದ ಇಲ್ಲಿನ ನಿವಾಸಿಗಳಿಗೆ ಆಹಾರ,ನೀರು ಮೂಲಭೂತ ಸೌಕರ್ಯ ಒದಗಿಸುವ ಕುರಿತು ನಿವಾಸಿಗಳು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ ದಿಗ್ವಿಜಯ ವಾಹಿನಿ, ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ವರದಿ ಕಂಡು ಸಮಾಜ ಸೇವಕ ಹಬೀಬ ಶಿಲೇದಾರ‌ ಮಾನವಿತೆ ದೃಷ್ಠಿಯಿಂದ ಇಲ್ಲಿನ ಜನತೆಯನ್ನು ಬೇಟಿ ಮಾಡಿ, ಕೊರೊನಾ ಕೊಲ್ಲುವ ರೋಗವಲ್ಲ, ಧೈರ್ಯವಾಗಿರಿ ನಿಮ್ಮ ಜೊತೆಗೆ ನಾವಿದ್ದೇವೆ’ ಎಂದು ಸಂತಷಿದರು.
‘‘ಮಳೆಗಾಲದಲ್ಲಿ ಜ್ವರ, ಕೆಮ್ಮ, ತಲೆನೋವು ಬಂದೇ ಬರುತ್ತದೆ. ವಾರದ ಆರೈಕೆ ನಂತರ ಕಡಿಮೆಯಾಗುತ್ತದೆ. ನೆಗಡಿ ಬಂದರೂ ಥರ್ಮಲ್ ಸ್ಕ್ರೀನಿಂಗ ಮಾಡುತ್ತಾರೆ. ಅವರನ್ನು ತಪಾಸಣೆಗೆ ಕಳಿಸುವ ಪರಿಪಾಠ ಬೆಳೆಯುತ್ತಿದೆ. ದೇಹದ ಉಷ್ಣಾಂಶ ತಪಾಸಣೆ ಮಾಡುವ ಥರ್ಮಲ್ ಸ್ಕ್ರೀನಿಂಗ್ ಉಪಕರಣವೂ ಗುಣಮಟ್ಟದ್ದಾಗಿರುವುದಿಲ್ಲ’ ಎಂದು ಆರೋಪಿಸಿದರು.
ದಿಗ್ವಿಜಯ ವಾಹಿನಿಲ್ಲಿ ಈ ವರದಿಯನ್ನು ಕಂಡು ನೋವುಂಟಾಯಿತು. ವಾಹಿನಿ ಜನರ ಧ್ವನಿಯಾಗಿ ಈ ಕಾರ್ಯ ಮಾದರಿಯಾಗಿದೆ ಜನರ ನೋವಿಗೆ ಸ್ಪಂದಿಸಿದೆ ಈ ಹಿನ್ನೆಲೆ ಆಹಾರ‌ದಾನ್ಯ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.
ಸಕ್ಕರೆ, ರವೆ, ತೋಗರಿಬೇಳೆ, ಅವಲಕ್ಕಿ, ಉಳ್ಳೇಗಡ್ಡಿ, ಬಟಾಟಿ, ಅಡುಗೆ ಎಣ್ಣೆ, ಕೊಬ್ಬರಿ ಎಣ್ಣೆ, ಹಸೀಮೆಣಸಿನಕಾಯಿ, ಕ್ಯಾಬೇಜ್ ಸೇರಿದಂತೆ 15 ಆಹಾರ ವಸ್ತುಗಳ ಕಿಟ್ ಅನ್ನು ಹಾಗೂ ನಿತ್ಯ 80 ಕುಟುಂಬಗಳು ಹಾಲು ಕೊಳ್ಳಲು ರೂ. 10 ಸಾವಿರ ದುಡ್ಡನ್ನು ಅವರು ನೀಡಿದರು.
ನಿವೃತ್ತ ಶಿಕ್ಷಕ ಎಂ. ಎಫ್. ಜಕಾತಿ, ವಿಜಯಕುಮಾರ ಶಿಂಧೆ, ಸಂತೋಷ ಲಕ್ಕುಂಡಿ, ಸೀಲ್ ಡೌನ್ ಪ್ರದೇಶದ ಜನರು ಇದ್ದರು.
ನಮ್ಮ ಜನತೆಯ ಸಂಕಷ್ಠವನ್ನು ದಿಗ್ವಿಜಯ ವಾಹಿನಿ ವರದಿಯ ಪ್ರಕಟಿಸಿ ಜನತೆಯ ಧ್ವನಿಯಾಗಿದೆ. ಈ ಹಿನ್ನೆಲೆ ಸಮಾಜ ಸೇವಕ‌ಹಬೀಬ ಶಿಲೇದಾರ ಅವರು ನಮ್ಮ ಜನತೆಗೆ 80 ಅಹಾರ ದಾನ್ಯದ‌ಕಿಟ್‌ವಿತರಿಸಿ ಧನ ಸಹಾಯ ಮಾಡಿದ್ದಾರೆ. ಇದರ ಜೊತೆಗೆ ಹಲವಾರು‌ಗಣ್ಯರು ಸಹ ನಮ್ಮ ಕಷ್ಠಕ್ಕೆ ಸ್ಪಂದಿಸಿದ್ದಾರೆ ವಾಹಿನಿ ಸೇರಿದಂತೆ ಎಲ್ಲರಿಗೂ ಚಿರ ಋಣಿಯಾಗಿದ್ದೇವೆ ಎಂದು ರವಿ ಕಲ್ಲೂರ, ಬಸವರಾಜ ಪಟ್ಟಿಹಾಳ ತಿಳಿಸಿದ್ದಾರೆ.
ಇದು ಮಾನವೀಯ ‘ಮೌಲ್ಯ’ : ಅಂಧ ವ್ಯಕ್ತಿಗೆ ಬಸ್ ಹತ್ತಲು ಸಹಾಯ ಮಾಡಿದಾಕೆಗೆ ಸಿಕ್ಕಿದ್ದು ಅನೂಹ್ಯ ಪ್ರತಿಫಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 1 =
Remember me
