ಬೆಂಗಳೂರು:ಶಿಕ್ಷಣ ಸಚಿವರು ನಕ್ಸಲ್ ಬಾಧಿತ ಗ್ರಾಮದ ವಿದ್ಯಾರ್ಥಿ ಭೇಟಿ ಮಾಡಲು ನಿರ್ಧರಿಸುತ್ತಿದ್ದಂತೆಯೇ ಶಿಕ್ಷಣ ಇಲಾಖೆಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಅಧಿಕಾರಿಗಳು ಸಮಸ್ಯೆ ಅಧ್ಯಯನಕ್ಕೆ ಕೈಹಾಕಿದ್ದಾರೆ.
ಎಸ್​ಎಸ್​ಎಲ್​ಸಿ ಆನ್​ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ, ತನ್ನೂರಲ್ಲಿ ವಿದ್ಯುತ್ ಸಹ ಇಲ್ಲ ಎಂದು ಕೊಪ್ಪ ತಾಲೂಕು ಹೊರ್ಲೆ ಕುಗ್ರಾಮದ ವಿದ್ಯಾರ್ಥಿ ವಿಜಯವಾಣಿ ಮುಖೇನ ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಗಮನಕ್ಕೆ ತರುತ್ತಿದ್ದಂತೆ ಸಚಿವರು ವಿದ್ಯಾರ್ಥಿ ಭೇಟಿ ಮಾಡಲು ಗ್ರಾಮಕ್ಕೇ ಬರುವುದಾಗಿ ಘೋಷಿಸಿದ್ದರು.
ಇದರ ಬೆನ್ನಿಗೆ, ಕೊಪ್ಪ ಬಿಇಒ ಕಚೇರಿ ಸಿಬ್ಬಂದಿ ವಿದ್ಯಾರ್ಥಿ ಆದರ್ಶನ ಮನೆಗೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಅವನಿರುವ ಮನೆಯ ಸ್ಥಿತಿಗತಿ, ಕುಟುಂಬದ ಸ್ಥಿತಿ, ಅವರಿರುವ ಮನೆಯಿಂದ ತಾಲೂಕು ಕೇಂದ್ರದ ಸಂಪರ್ಕ, ಮೊಬೈಲ್ ನೆಟ್​ವರ್ಕ್, ಮೊಬೈಲ್​ಫೋನ್ ಮಾಡೆಲ್ ಮಾಹಿತಿ ಸಂಗ್ರಹಿಸಿದರು. ಶೃಂಗೇರಿ ಬಿಇಒ ಕಚೇರಿಯವರೂ ಆತನ ಮನೆಗೆ ತೆರಳಿದ್ದು, ಸಮಸ್ಯೆ ಪರಿಹಾರಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ ಬಹಳಷ್ಟು ವಿದ್ಯಾರ್ಥಿಗಳು ಇದೇ ರೀತಿ ಸಮಸ್ಯೆಗೆ ಸಿಲುಕಿರುವುದರ ಬಗ್ಗೆ ಆದರ್ಶ ತಮ್ಮನ್ನು ಭೇಟಿ ಮಾಡಿದ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ.
ಬಿಇಒ ನಾಗರಾಜ್ ವಿಜಯವಾಣಿ ಜತೆ ಮಾತನಾಡಿ, ಮಂಗಳವಾರ ದಿಂದಲೇ ಅಧ್ಯಯನ ಆರಂಭಿಸುತ್ತೇವೆ. ಇಡೀ ತಾಲೂಕಲ್ಲಿ ಈ ರೀತಿ ನೆಟ್​ವರ್ಕ್ ಹಾಗೂ ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮಗಳ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ ಪರ್ಯಾಯ ವ್ಯವಸ್ಥೆ ಏನು ಮಾಡಬಹುದೆಂಬ ಬಗ್ಗೆ ಉನ್ನತ ಅಧಿಕಾರಿಗಳ ಬಗ್ಗೆ ರ್ಚಚಿಸಿ ನಿರ್ಧರಿಸುತ್ತೇವೆ ಎಂದರು. ಕೆರೆ, ಸುಂಕದಮಕ್ಕಿ, ಹಾದಿ, ನೆಮ್ಮಾರು, ಹರೂರು, ಮಲೆನಾಡು ಪ್ರದೇಶದಲ್ಲಿ ಒಟ್ಟು 102 ಗ್ರಾಮಗಳಿದ್ದು, ಇಲ್ಲಿರುವ ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಇದೆ. ಅದರಲ್ಲೂ ಎಸ್​ಎಸ್​ಎಲ್​ಸಿ ಮಕ್ಕಳು ಹೆಚ್ಚಿನ ಆತಂಕಕ್ಕೆ ಸಿಲುಕಿದ್ದಾರೆ ಎಂಬುದು ಶಿಕ್ಷಣ ಇಲಾಖೆ ಗಮನಕ್ಕೆ ಬಂದಿದೆ. ಶಿಕ್ಷಣ ಸಚಿವರ ಗಮನ ಸೆಳೆದ ಆದರ್ಶನ ಪ್ರಯತ್ನ ಫಲಿಸಿದ್ದೇ ಆದರೆ, ಇಡೀ ರಾಜ್ಯದ ಗ್ರಾಮೀಣ ಭಾಗದಲ್ಲಿ ಮಕ್ಕಳು ಆನ್​ಲೈನ್ ತರಗತಿ ಕುರಿತು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ.
ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್​-ವ್ಯಾಲ್ಯೂ ಲೆಕ್ಕಾಚಾರ…?

0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
